ದುನಿಯಾ ವಿಜಯ್ ಜೊತೆ 'ಟೋಬಿ'ರಾಜ್ ಬಿ ಶೆಟ್ಟಿ: ಚೋಮನದುಡಿ ಸ್ಪೂರ್ತಿಯಲ್ಲಿ ಬರುತ್ತಾ ಈ ಜೋಡಿ ಸಿನಿಮಾ ?

ದುನಿಯಾ ವಿಜಯ್ ಜೊತೆ 'ಟೋಬಿ'ರಾಜ್ ಬಿ ಶೆಟ್ಟಿ: ಚೋಮನದುಡಿ ಸ್ಪೂರ್ತಿಯಲ್ಲಿ ಬರುತ್ತಾ ಈ ಜೋಡಿ ಸಿನಿಮಾ ?

Published : Apr 28, 2024, 10:26 AM IST

ಇದೇ ಮೊದಲ ಬಾರಿಗೆ  ಟೋಬಿ ಖ್ಯಾತಿಯ ರಾಜ್ ಬಿ ಶೆಟ್ಟಿ, ಸಲಗ ದುನಿಯಾ ವಿಜಯ್ ಜೊತೆ ಸೇರಿ ಒಂದು ಚಿತ್ರದಲ್ಲಿ ನಟಿಸೋಕೆ ಮುಂದಾಗಿದ್ದಾರೆ ಎನ್ನುವ ಸುದ್ದಿ ಗಾಂಧಿನಗರದಲ್ಲಿ ಓಡಾಡುತ್ತಿದೆ.

ದುನಿಯಾ ವಿಜಯ್ 29ನೇ ಸಿನಿಮಾ ಇತ್ತೀಚೆಗಷ್ಟೇ ಸೆಟ್ಟೇರಿತ್ತು. ಆ ಸಿನಿಮಾದಲ್ಲಿ ರಚಿತಾ ರಾಮ್(Rachita Ram) ನಾಯಕಿಯಾಗಿ ಕಾಣಿಸಿಕೊಳ್ಳುತ್ತಾರೆ. ಈ ಚಿತ್ರದ ಮತ್ತೊಂದು ಪ್ರಮುಖ ಪಾತ್ರದಲ್ಲಿ ರಾಜ್ ಬಿ ಶೆಟ್ಟಿ(Raj B Shetty) ನಟಿಸಲಿದ್ದಾರೆ ಎನ್ನಲಾಗಿದೆ. ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಡಾ. ಕೋಟ ಶಿವರಾಮ ಕಾರಂತರು ಬರೆದಿರುವ 'ಚೋಮನ ದುಡಿ' ಕಾದಂಬರಿ ಪ್ರೇರಿತ ಸಿನಿಮಾ ಎನ್ನಲಾಗಿದೆ. ಜಡೇಶ ಹಂಪಿ(Jadesh Hampi) ಈ ಸಿನಿಮಾಗೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. 'ಕಾಟೇರ' ಸಿನಿಮಾಗೆ ಕತೆ ಬರೆದಿದ್ದು ಇದೇ ಜಡೇಶ್ ಹಂಪಿ. ಹಾಗೇ ಶರಣ್ ನಟನೆಯ 'ಗುರು ಶಿಷ್ಯರು' ಸಿನಿಮಾದ ಡೈರೆಕ್ಷರ್ ಆಗಿರುವ ಇವರು ಈಗ 'ಚೋಮನ ದುಡಿ'ಯಿಂದ ಸ್ಪೂರ್ತಿ ಪಡೆದು ಹೆಣೆದ ಕಥೆಯನ್ನು ಸಿನಿಮಾ ಮಾಡೋಕೆ ಸಜ್ಜಾಗಿದ್ದಾರೆ. ಕಥೆಗೆ ಹೆಚ್ಚಿನ ಮಹತ್ವ ಕೊಡುವ ಈ ನಿರ್ದೇಶಕ 'ಚೋಮನ ದುಡಿ'ಯಿಂದ ಪ್ರೇರಿತರಾಗಿ ಎಂತಹ ಕಥೆಯನ್ನು ತೆರೆಮೇಲೆ ತರಬಹುದು? ಅನ್ನುವ ಕುತೂಹಲವಿದೆ. ಸದ್ಯ ದುನಿಯಾ ವಿಜಯ್(Duniya Vijay)ಭೀಮ ಸಿನಿಮಾ ರಿಲೀಸ್ ಮಾಡೊ ಬಿಜಿಯಲ್ಲಿದ್ದಾರೆ. ಇದಾದನಂತರ  ಮಗಳ ಈ ಸಿನಿಮಾ ಶುರುವಾಗಲಿದ್ದು ಈ ಚಿತ್ರದಲ್ಲಿ ರಾಜ್ ಬಿ ಶೆಟ್ಟಿ ಪ್ರಮುಖ ಪಾತ್ರ ಮಾಡುತ್ತಿದ್ದಾರೆನ್ನಲಾಗಿದೆ. ಯಾವುದಕ್ಕೂ ಅಧಿಕೃತ ಅನೌನ್ಸ್‌ಮೆಂಟ್‌ಗಾಗಿ ಕಾಯುತ್ತಿದ್ದಾರೆ.

ಇದನ್ನೂ ವೀಕ್ಷಿಸಿ:  Ramya - Rashmika: ರಮ್ಯಾ, ರಶ್ಮಿಕಾ ಮಂದಣ್ಣ ವೋಟ್ ಹಾಕಿಲ್ವಂತೆ: ಮತದಾನ ಮಾಡದೇ ಇರೋದಕ್ಕೆ ಕಾರಣ ಏನು..?

04:59ಟಾಕ್ಸಿಕ್ ಹಸಿಬಿಸಿ ದೃಶ್ಯದ ವಿರುದ್ದ ಕಂಪ್ಲೇಂಟ್; ಈ ವಿವಾದದ ಬಗ್ಗೆ ಯಶ್ ಏನಂತಾರೆ..?
03:36Golden Star Ganesh ಬಗ್ಗೆ ಇಂಥ ಚಿಂತಾಜನಕ ಸುದ್ದಿ ಹರಡಿದ್ಯಾಕೆ? ಯಾಕೆ ಹೀಗಾಯ್ತು?
05:51ದರ್ಶನ್ ಪತ್ನಿ ವಿಜಯಲಕ್ಷ್ಮೀ ವಿರುದ್ಧ ಅಶ್ಲೀಲ ಕಾಮೆಂಟ್: ಇಬ್ಬರ ಅರೆಸ್ಟ್, ಫ್ಯಾನ್ಸ್ ವಾರ್‌ಗೆ ಬ್ರೇಕ್
02:06ಬಾಕ್ಸಾಫೀಸ್​​ನಲ್ಲಿ ದಾಖಲೆ ಬರೆದ ಧುರಂಧರ್: ವೆಬ್​ ಸರಣಿ ನಿರ್ದೇಶನಕ್ಕೆ ಕೈ ಹಾಕಿದ ಪಿ.ಸಿ.ಶೇಖರ್
05:38ಒಂದೇ ಒಂದು ಹಾಡಿನಿಂದ ಟ್ರೆಂಡಿಂಗ್ ಟಾಪ್​ಸಿಂಗರ್​ಆಗ್ಬಿಟ್ರಾ ಸಾನ್ವಿ? ಅಪ್ಪನಂತೇ ಮಗಳು, ಸಂಗೀತದ ಬೆರಗು..!
03:37ಇತ್ತ ಡೆವಿಲ್.. ಅತ್ತ ಟ್ರಯಲ್.. ದಾಸನಿಗೆ ಟ್ರಬಲ್: ಪವಿತ್ರಾ ಗೌಡಗೂ ಟಿವಿ ಕೊಡಿ, ವಕೀಲರ ಮನವಿ!
04:23'ತ್ರಿಮೂರ್ತಿ'ಗಳ ಹಾಲಿವುಡ್‌ ರೇಂಜ್ ಮೇಕಿಂಗ್ '45' ಸಿನಿಮಾ ಟ್ರೈಲರ್ ನೋಡಿದವ್ರು ಏನಂತಿದಾರೆ?!
05:37ಡೆವಿಲ್ ಸಿನಿಮಾದಲ್ಲಿ ದರ್ಶನ್ ಸಿಎಂ..! ಕಿಚ್ಚ ಸುದೀಪ್ ಹೇಳಿದ ಪಾಲಿಟಿಕ್ಸ್ ಸೀಕ್ರೆಟ್ ಏನು?
04:38Video: ನಟಿ ರಮ್ಯಾಗೆ ಸಂದರ್ಶನದಲ್ಲೇ ತಿರುಗೇಟು ಕೊಟ್ಟ Actor Darshan Wife Vijayalakshmi
04:51ಎಲ್ಲೆಲ್ಲೂ 'ಗಿಲ್ಲಿ ನಟ'ನದೇ ದರ್ಬಾರ್.. ಬಿಗ್ ಬಾಸ್‌ನಲ್ಲೂ ಬಿಗ್ ಸ್ಕ್ರೀನ್‌ನಲ್ಲೂ ಸಖತ್ ಸದ್ದು..!
Read more