Nov 22, 2023, 12:13 PM IST
ರಚಿತಾ ರಾಮ್. ಸ್ಯಾಂಡಲ್‌ವುಡ್‌ನ ಡಿಂಪಲ್ ಕ್ವೀನ್. ಈ ಬ್ಯೂಟಿನ ಮನೆ ಸೊಸೆ ಮಾಡ್ಕೊಳ್ಳೋಕೆ ಅದೆಷ್ಟು ಮನಸುಗಳು ಕಾದಿದ್ವೋ ಏನೋ. ಆದ್ರೆ ರಚಿತಾ(Rachita Ram) ಸದ್ದಿಲ್ದೆ ತನ್ನ 10ನೇ ವರ್ಷದ ವೆಡ್ಡಿಂಗ್ ಆನಿವರ್ಸರಿ(Wedding anniversary) ಮಾಡ್ಕೊಂಡಿದ್ದಾರೆ. ರಚಿತಾಗೆ ಕೋಟಿ ಬೆಲೆ ಬಾಳೋ ರೋಲ್ಸ್ ರಾಯ್ ಕಾರು ಗಿಫ್ಟ್(Rolls-Royce Car gift) ಆಗಿ ಸಿಕ್ಕಿದೆ. ರಚಿತಾ ಮದ್ವೆನೇ ಆಗಿಲ್ಲ. ಆಗ್ಲೇ 10ನೇ ವರ್ಷದ ಮದುವೆ ವಾರ್ಷಿಕೋತ್ಸವ ಮಾಡ್ಕೊಳ್ತಿದ್ದಾರೆ. ಅಷ್ಟಕ್ಕೂ ರಚಿತಾಗೆ ಇಷ್ಟೊಂದು ಕಾಸ್ಟ್ಲಿ ಕಾರು ಗಿಫ್ಟ್ ಕೊಟ್ಟ ಆ ಪತಿರಾಯ ಯಾರು ಅಂತೀರಾ.? ಅವ್ರೇ ನಟ ಶ್ರೀನಗರ ಕಿಟ್ಟಿ(Srinagara Kitty). ಹೌದು, ನಟ ಶ್ರೀನಗರ ಕಿಟ್ಟಿ ಹಾಗು ರಚಿತಾ ರಾಮ್ 10 ವರ್ಷ ದಾಂಪತ್ಯ ಜೀವನ ಮುಗಿಸಿದ್ದಾರೆ. ಆದ್ರೆ ಇದು ರೀಯಲ್ ಅಲ್ಲ ರೀಲ್ ಮೇಲೆ ಅನ್ನೋದು ನಿಮ್ಗೆ ಗೊತ್ತಿರಲಿ. ಕನ್ನಡದಲ್ಲಿ ಒನ್ಸ್ ಅಗೈ ಸಂಜು ವೆಡ್ಸ್ ಗೀತಾ ಸಿನಿಮಾ(Sanju Weds Geetha-2) ಸೌಂಡ್ ಮಾಡ್ತಿದೆ. ಪಾರ್ಟ್ ಒಂದರಲ್ಲಿ ಸಂಜು ಶ್ರೀನಗರ ಕಿಟ್ಟಿಗೆ ಕ್ವೀನ್ ರಮ್ಯಾ ಗೀತಾ ಆಗಿ ನಟಿಸಿದ್ರು. ಈ ಸಿನಿಮಾ ಸೂಪರ್ ಹಿಟ್ ಆಗಿತ್ತು.ಈಗ ಸಂಜು ವೆಡ್ಸ್ ಗೀತಾ ಪಾರ್ಟ್2ನಲ್ಲಿ ಶ್ರೀನಗರ ಕಿಟ್ಟಿ ಸಂಜುಗೆ ಗೀತಾ ಆಗಿ ರಚಿತಾ ರಾಮ್ ನಟಿಸುತ್ತದ್ದಾರೆ. ಈ ಸಿನಿಮಾದಲ್ಲಿ ಪತ್ನಿ ಗೀತಾಗೆ ಪತಿ ಸಂಜು 10ನೇ ವರ್ಷದ ವೆಡ್ಡಿಂಗ್ ಆನಿರ್ಸರಿ ಮಾಡಿಕೊಳ್ಳೋ ದೃಶ್ಯ ಇದೆ. ಅದರ ಚಿತ್ರೀಕರಣ ಕನಕಪುರ ಪಾರ್ಮ್ ಹೌಸ್ ಒಂದರಲ್ಲಿ ಸೆರೆ ಹಿಡಿದಿದ್ದಾರೆ ನಿರ್ದೇಶಕ ನಾಗಶೇಖರ್. ಸಂಜು ವೆಡ್ಸ್ ಗೀತಾ ಸಿನಿಮಾದಲ್ಲಿ ರಂಗಾಯಣ ರಘು, ಸಾಧು ಕೋಕಿಲ ಕೂಡ ನಟಿಸುತ್ತಿದ್ದಾರೆ. ಶ್ರೀಧರ್ ಸಂಭ್ರಮ್ ಮ್ಯೂಸಿಕ್, ಸತ್ಯ ಹೆಗಡೆ ಕ್ಯಾಮೆರಾ ಕೈ ಚಳಕ ಇದ್ದು, ಚಲವಾದಿ ಕುಮಾರ್ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ.
ಇದನ್ನೂ ವೀಕ್ಷಿಸಿ: ರಿವೀಲ್ ಆಯ್ತು ವಿಜಯ್-ರಶ್ಮಿಕಾ ಪ್ರೇಮ್ ಕಹಾನಿ..! ದೇವರಕೊಂಡಗೆ ಖಡಕ್ ವಾರ್ನಿಂಗ್ ಕೊಟ್ಟ ನಟ..!