ನಟ ದರ್ಶನ್‌ರ ಇಂದಿನ ಸ್ಥಿತಿಗೆ ಅವರ ಮುಂಗೋಪವೇ ಕಾರಣ: ನಿರ್ಮಾಪಕ ಮಹದೇವ್

Jun 19, 2024, 2:29 PM IST

ದರ್ಶನ್ ಇವತ್ತು ಇರುವ ಸ್ಥಿತಿಗೆ ಅವರ ಮುಂಗೋಪವೇ ಕಾರಣ. ಚಿಂಗಾರಿ ಸಿನಿಮಾ ಟೈಮ್‌ನಲ್ಲಿ ಈ ತರ ಇರ್ಲಿಲ್ಲ. ಬರಬರುತ್ತಾ ದರ್ಶನ್ ಬದಲಾದರು. ಈಗ ದರ್ಶನ್(Darshan) ಜೈಲಿನಲ್ಲಿದ್ದಾರೆ ಎಂದು ಚಿಂಗಾರಿ ಸಿನಿಮಾ ನಿರ್ಮಾಪಕ ಮಹದೇವ್ (Producer Mahadev) ಏಷ್ಯಾನೆಟ್ ಸುವರ್ಣ ನ್ಯೂಸ್‌ಗೆ ಹೇಳಿದ್ದಾರೆ. ಈಗ ಅವರ ಬಗ್ಗೆ ಮಾತಾಡೋದು ಸರಿಯಲ್ಲ. ನಾನು ಚಿಂಗಾರಿ ಸಿನಿಮಾ ಟೈಮ್‌ನಲ್ಲಿ ಶ್ಯೂರಿಟಿ ಹಾಕಿದ್ದೆ. ನನ್ನ ಸಿನಿಮಾ ಬಾಕಿ ಇತ್ತು. ಆ ಟೈಮ್‌ನಲ್ಲಿ ವಿಜಯಲಕ್ಷ್ಮಿ ಅವರ ಜೊತೆ ಕೌಟುಂಬಿಕ ಕಲಹ ಆಗಿತ್ತು. ಚಿಂಗಾರಿ ಸಿನಿಮಾ ಸಂದರ್ಭದಲ್ಲಿ ಪವಿತ್ರಾ ಗೌಡ(Pavitra Gowda) ಯಾರು ಅಂತಾನೆ ಗೊತ್ತಿರಲಿಲ್ಲ. ರೀಸೆಂಟಾಗಿ ನ್ಯೂಸ್ ಚಾನೆಲ್ ನೋಡಿದ ಮೇಲೆ ಯಾರು ಅಂತ ನೋಡ್ತಿದೀನಿ. ಅಭಿಮಾನಿಗಳ ಎದುರು ರಾಜ್ ಕುಮಾರ್ ಸಿಗರೇಟ್ ಸೇದುತ್ತಿರಲಿಲ್ಲ. ಬಾರ್ ಉದ್ಘಾಟನೆಗೆ ಹೋಗುವ ನಿರ್ಧಾರ ಹಿಂದೆಗೆದುಕೊಂಡಿದ್ರು. ಫ್ಯಾನ್ಸ್ ಎಲ್ಲವನ್ನೂ ಬೆಂಬಲಿಸಬಾರದು, ತಪ್ಪು ಇದ್ದಾಗ ತಪ್ಪು ಅನ್ಬೇಕು. ದರ್ಶನ್ ಬೇಗ ಆರೋಪ ಮುಕ್ತವಾಗಲಿ. ರೇಣುಕಾಸ್ವಾಮಿ ಕುಟುಂಬಕ್ಕೆ ನ್ಯಾಯ ಸಿಗಲಿ. ನಾವು ಒಳ್ಳೆಯ ಸ್ನೇಹಿತರಾಗಿದ್ದೇವೆ, ಇನ್ನೊಂದು ಸಿನಿಮಾ ಮಾಡೋಲ್ಲ ಎಂದು ನಿರ್ಮಾಪಕ ಮಹದೇವ್ ಹೇಳಿದ್ದಾರೆ.

ಇದನ್ನೂ ವೀಕ್ಷಿಸಿ:  ಪೊಲೀಸರು ದರ್ಶನ್ ಅರೆಸ್ಟ್ ಮಾಡಿದ್ದೇ ರಣ ರೋಚಕ..! ಜೂ. 11 ಮಿಸ್ ಆಗಿದ್ರೆ ನಟ ಕೇಸ್‌ನಿಂದ ಎಸ್ಕೇಪ್ ಆಗ್ತಿದ್ರಾ?