ಕಿಚ್ಚನ ಎಚ್ಚರಿಕೆಗೆ ಬಗ್ಗಿದ ಫೋನ್ ಪೇ ಸಿಇಓ..ಕನ್ನಡಿಗರಿಗೆ ಕ್ಷಮೆ ಕೇಳಿದ ಸಮೀರ್ ನಿಗಮ್

Jul 23, 2024, 9:05 AM IST

ಭಾರತೀಯ ಚಿತ್ರರಂಗದ ಬಾದ್ ಷಾ ಕಿಚ್ಚ ಸುದೀಪ್ (Sudeep) ಕನ್ನಡಿಗರ (Kannadigas) ಧ್ವನಿ. ಕಿಚ್ಚ ಕನ್ನಡಕ್ಕಾಗಿ ಎಲ್ಲಾ ತ್ಯಾಗಕ್ಕೂ ಸಿದ್ಧ ಅಂತ ಪದೇ ಪದೇ ಸಾಭೀತು ಮಾಡುತ್ತಿದ್ದಾರೆ. ಈ ಹಿಂದೆ ಕನ್ನಡದ ವಿಷಯಕ್ಕಾಗಿ ಹಿಂದಿಯ ಅಜಯ್ ದೇವಗನ್‌ಗೆ ಖಡಕ್ ವಾರ್ನಿಂಗ್ ಕೊಟ್ಟಿದ್ರು. ಕೊನೆಗೆ ಅಜಯ್ ದೇವಗನ್ ಕನ್ನಡಿಗರ ಕ್ಷಮೆ ಕೇಳಿದ್ರು. ಕರ್ನಾಟಕದಲ್ಲಿ ಕನ್ನಡಿಗನೇ ಸಾರ್ವಭೌಮ. ಕನ್ನಡಿಗರಿಗೆ ಖಾಸಗಿ ಕಂಪನಿಗಳಲ್ಲಿ ಕಡ್ಡಾಯ ಉದ್ಯೋಗ ಮೀಸಲಾತಿ ನೀಡುವ ಬಗ್ಗೆ ಸರ್ಕಾರ ಮಸೂದೆಯೊಂದನ್ನ ಜಾರಿ ತರೋ ಚರ್ಚೆ ನಡೆಯುತ್ತಿದೆ. ಆದ್ರೆ ಪೋನ್ ಪೇ ಸಿಇಓ ಸಮೀರ್ ನಿಗಮ್ (Sameer Nigam) ಮಾತ್ರ ಇದನ್ನ ಕಂಡಿಸಿ ಪೋಸ್ಟ್ ಮಾಡಿದ್ರು. ಇದು ಕನ್ನಡಿಗರ ಆಕ್ರೋಶಕ್ಕೆ ಕಾರಣ ಆಗಿತ್ತು. ಅಷ್ಟೆ ಅಲ್ಲ ಪೋನ್ ಪೇ ಸಿಇಯೋಗೆ ನಟ ಕಿಚ್ಚ ಸುದೀಪ್ ಕೂಡ ಖಡಕ್ ಎಚ್ಚರಿಕೆ ಕೊಟ್ಟಿದ್ರು. ಕಿಚ್ಚನ ಎಚ್ಚರಿಕೆಗೆ ಮಣಿದ ಫೋನ್ ಪೇ ಸಿಇಓ ಸಮೀರ್ ನಿಗಮ್ ಈಗ ಕನ್ನಡಿಗರ ಕ್ಷಮೆ ಕೇಳಿದ್ದಾರೆ. ನಟ ಸುದೀಪ್ ಪೋನ್ ಪೇ ರಾಯಭಾರಿ. 10 ವರ್ಷಗಳಿಗೆ ಈ ಅಗ್ರಿಮೆಂಟ್ ಆಗಿದೆ. ಆದ್ರೆ ಕನ್ನಡಿಗರನ್ನ ಕಡೆಗಣಿಸಿ ಮಾತನಾಡಿದ್ದಕ್ಕೆ ಪೋನ್ ಪೇ ಅಗ್ರಿಮೆಂಟ್ನಿಂದಲೇ ಕಿಚ್ಚ ಹೊರ ಬರೋದಕ್ಕೆ ನಿರ್ಧರಿಸಿದ್ರು. ಅಷ್ಟೆ ಅಲ್ಲ ನೀವು ಮಾತನಾಡಿದ್ದ ಸರಿ ಅಲ್ಲ. ಕನ್ನಡಿಗರನ್ನ ಕಡೆಗಣಿಸೋ ಹಾಗಿಲ್ಲ. ಕನ್ನಡಿಗರಿಗೂ ಉದ್ಯೋಗವಕಾಶ ಕೊಡಿ. ಇಲ್ಲವಾದ್ರೆ ಫೋನ್ ಪೇ ರಾಯಭಾರತ್ವದಿಂದ ಹೊರ ಬರೋದಾಗಿ ಕಿಚ್ಚ ಸುದೀಪ್ ಪೋನ್ ಪೇ ಸಿಇಓಗೆ ಎಚ್ಚಿಸಿದ್ರು. ಇದಕ್ಕೆ ಮಣಿದ ಫೋನ್ ಪೆ ಸಿಇಓ ಸಮೀರ್ ಬೇಷರತ್ ಕನ್ನಡಿಗರ ಕ್ಷಮೆ ಕೇಳಿದ್ದಾರೆ. ಈ ಮೂಲಕ ಸುದೀಪ್ ಮತ್ತೊಮ್ಮೆ ತಮ್ಮವರ ಪರ ನಿಂತು ಗೆದ್ದಿದ್ದಾರೆ. 

ಇದನ್ನೂ ವೀಕ್ಷಿಸಿ:  Today Horoscope: ನಿಮ್ಮ ರಾಶಿಯ ಇಂದಿನ ಭವಿಷ್ಯ ಹೇಗಿದೆ? ಯಾವ್ಯಾವ ರಾಶಿಗೆ ಯಾವ ರೀತಿ ಫಲ ಇದೆ ?