Jun 15, 2023, 1:28 PM IST
ಮೆಗಾ ಸ್ಟಾರ್ ಚಿರಂಜೀವಿ ಅವರ ಸಹೋದರ ನಗೇಂದ್ರ ಬಾಬು ಪುತ್ರ, ನಟ ವರುಣ್ ತೇಜ್ ಇತ್ತೀಚೆಗಷ್ಟೆ ನಟಿ, ಬಹುಕಾಲದ ಗೆಳತಿ ಲಾವಣ್ಯಾ ತ್ರಿಪಾಠಿ ಜೊತೆ ನಿಶ್ಚಿತಾರ್ಥ ಸಮಾರಂಭ ಅದ್ದೂರಿಯಾಗಿ ನೆರವೇರಿದೆ. ವರುಣ್ ತೇಜ್ ಮತ್ತು ಲಾವಣ್ಯಾ ಅನೇಕ ವರ್ಷಗಳಿಂದ ಪ್ರೀತಿಯಲ್ಲಿದ್ದರು. ಇಬ್ಬರೂ ಈಗ ದಾಂಪತ್ಯಕ್ಕೆ ಕಾಲಿಡಲು ಸಜ್ಜಾಗಿದ್ದಾರೆ. ಇತ್ತೀಚೆಗಷ್ಟೆ ಹೈದರಾಬಾದ್‌ನಲ್ಲಿ ನಡೆದ ಅದ್ದೂರಿ ನಿಶ್ಚಿತಾರ್ಥ ಸಮಾರಂಭದಲ್ಲಿ ಇಡೀ ಮೆಗಾ ಕುಟುಂಬ ಭಾಗಿಯಾಗಿತ್ತು. ನಿಶ್ಚಿತಾರ್ಥದ ಬೆನ್ನಲ್ಲೇ ಚಿರು ಕುಟಂಬಕ್ಕೆ ಸೊಸೆಯಾಗಿ ಬರುತ್ತಿರುವ ಲಾವಣ್ಯಾ ತ್ರಿಪಾಠಿ ಅವರ ಜಾತಿಗಾಗಿ ಹುಡುಕಾಟ ಪ್ರಾರಂಭವಾಗಿದೆ. ಇಂಟರ್‌ನೆಟ್‌ನಲ್ಲಿ ಲಾವಣ್ಯಾ ಜಾತಿಯ ಬಗ್ಗೆ ಹುಡುಕಾಟ ಹೆಚ್ಚಾಗಿದೆ. ಉತ್ತರ ಪ್ರದೇಶ ಮೂಲದ ನಟಿ ಲಾವಣ್ಯಾ ಚಿರು ಕುಟುಂಬದ ಸೊಸೆಯಾಗಿ ಬರ್ತಿದ್ದಾರೆ ಎಂದರೆ ಅಭಿಮಾನಿಗಳ ಕುತೂಹಲ ಹೆಚ್ಚಾಗಿದೆ. ಹಾಗಾಗಿ ಜಾತಿಯ ಬಗ್ಗೆ ಹೆಚ್ಚು ತಲೆಕೆಡಿಸಿಕೊಂಡಿದ್ದಾರೆ.
ಇದನ್ನೂ ವೀಕ್ಷಿಸಿ: ಪ್ರಥಮ್ ಮೇಲೆ ಫ್ಯಾನ್ಸ್ ಕೋಪ: ಮದುವೆಗಾದ್ರೂ ಕರೀತೀರೋ ಇಲ್ವೋ ಅಂದವರಿಗೆ ಹೇಳಿದ್ದೇನು?