ಮೊದಲ ಇನ್‌ಸ್ಟಾಗ್ರಾಂ ವಿಡಿಯೋ ಹಂಚಿಕೊಂಡ ಪವನ್ ಕಲ್ಯಾಣ್: ಇದರಲ್ಲಿರುವ ಕನ್ನಡದ 4 ನಟರು ಯಾರು ?

ಮೊದಲ ಇನ್‌ಸ್ಟಾಗ್ರಾಂ ವಿಡಿಯೋ ಹಂಚಿಕೊಂಡ ಪವನ್ ಕಲ್ಯಾಣ್: ಇದರಲ್ಲಿರುವ ಕನ್ನಡದ 4 ನಟರು ಯಾರು ?

Published : Jul 17, 2023, 03:07 PM IST

ಮೊದಲ ಇನ್‌ಸ್ಟಾಗ್ರಾಂ ವಿಡಿಯೋ ಹಂಚಿಕೊಂಡ ಪವನ್‌ ಕಲ್ಯಾಣ್‌
ಪವನ್ ಕಲ್ಯಾಣ್ ವಿಡಿಯೋದಲ್ಲಿ ನಾಲ್ಕು ಜನ ಕನ್ನಡದ ನಟರು!
ನಟ ಪವನ್ ಕಲ್ಯಾನ್‌ಗೆ ಆತ್ಮೀಯರು ಈ ಕನ್ನಡದ ನಟರು 
 


ಮೊದಲ ಇನ್ಸ್ಟಾಗ್ರಾಂ ಪೋಸ್ಟ್( Instagram) ಆಗಿ ಒಂದು ಸುಂದರವಾದ ವಿಡಿಯೋವನ್ನು ಪವನ್‌ ಕಲ್ಯಾಣ್‌ (Pawan Kalyan)ಹಂಚಿಕೊಂಡಿದ್ದಾರೆ. "ಚಿತ್ರರಂಗದ ಭಾಗವಾಗಿರುವುದಕ್ಕೆ ಹಾಗೂ ಅತ್ಯುತ್ತಮ, ಪ್ರತಿಭಾವಂತ ನಟರೊಟ್ಟಿಗೆ ಕೆಲಸ ಮಾಡಿರುವುದಕ್ಕೆ ಸಂತೋಷವಿದೆ” ಎಂಬ ಸವಿಮಾತಿನೊಂದಿಗೆ ಆರಂಭವಾಗುವ ಫೋಟೊಗಳ ಕಲೆಕ್ಷನ್ವುಳ್ಳ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಪವನ್ ಕಲ್ಯಾಣ್ ಈವರೆಗೆ ಕೆಲಸ ಮಾಡಿರುವ ತೆಲುಗು ಚಿತ್ರರಂಗದ ಹಲವು ನಟ, ನಟಿಯರ ಚಿತ್ರಗಳು ಇವೆ. ಅಣ್ಣ ಮೆಗಾಸ್ಟಾರ್ ಚಿರಂಜೀವಿ ಪವನ್ಗೆ ಮುತ್ತು ಕೊಡುತ್ತಿರುವ ಚಿತ್ರದ ಮೂಲಕ ಆರಂಭವಾಗುವ ವಿಡಿಯೋದ ಮೊದಲಲ್ಲಿಯೇ ತೆಲುಗು ಚಿತ್ರರಂಗದ ಸ್ಟಾರ್ಗಳಾದ ಬಾಲಕೃಷ್ಣ, ನಾಗಾರ್ಜು, ವೆಂಕಟೇಶ್ ಅವರೊಟ್ಟಿಗಿನ ಪವನ್ರ ಚಿತ್ರಗಳಿವೆ, ಜೊತೆಗೆ ಬಾಲಿವುಡ್ನ ಲಿಜೆಂಡ್ ಅಮಿತಾಬ್ ಬಚ್ಚನ್ ಅವರೊಟ್ಟಿಗಿನ ಚಿತ್ರವೂ ಇದೆ.ಟಾಲಿ ವುಡ್ ಪವರ್ಸ್ಟಾರ್ ಸ್ಯಾಂಡಲ್ವುಡ್ ಪವರ್ಸ್ಟಾರ್ ಸೋದರ ಶಿವರಾಜ್ಕುಮಾರ್ (Shivaraj kumar)ಅವರನ್ನು ನೆನಪಿಸಿಕೊಂಡಿದ್ದಾರೆ. ವಿಡಿಯೋನ ಆರಂಭದ ಕೆಲವು ಸೆಕೆಂಡ್ಗಳಲ್ಲಿಯೇ ಪವನ್ ಕಲ್ಯಾಣ್ ಹಾಗೂ ಶಿವರಾಜ್ ಕುಮಾರ್ ಅವರು ಒಟ್ಟಿಗೆ ಕಾರ್ಯಕ್ರಮದಲ್ಲಿ ಕುಳಿತು ಮಾತನಾಡುತ್ತಿರುವ ಚಿತ್ರವನ್ನು ಸೇರಿಸಲಾಗಿದೆ. ಪವನ್ ಕಲ್ಯಾಣ್ ಹಾಗೂ ಸುದೀಪ್ (Sudeep) ಅವರು ಒಟ್ಟಿಗೆ ನಿಂತಿರುವ ಚಿತ್ರ ವಿಡಿಯೋನಲ್ಲಿ ಮೂಡಿಬರುತ್ತದೆ. ವಿಡಿಯೋ ಅಂತ್ಯವಾಗುವ ಕೆಲ ಹೊತ್ತಿನ ಮುಂಚೆ ನಟ, ಸಾಹಿತಿ, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಗಿರೀಶ್ ಕಾರ್ನಾಡ್ (Girish Karnada)  ಅವರೊಟ್ಟಿಗಿನ ಚಿತ್ರವನ್ನು ಸಹ ಪವನ್ ಕಲ್ಯಾಣ್ ತಮ್ಮ ನೆನಪಿನ ವಿಡಿಯೋಕ್ಕೆ ಸೇರಿಸಿದ್ದಾರೆ. ಕನ್ನಡದವರೇ ಆದರೂ ಬಹುಭಾಷಾ ನಟ ಎನಿಸಿಕೊಂಡಿರುವ ಪ್ರಕಾಶ್ ರೈ(Prakash Rai) ಅವರೊಟ್ಟಿಗಿನ ಚಿತ್ರವನ್ನು ಪವನ್ ಕಲ್ಯಾಣ್ ವಿಡಿಯೋನಲ್ಲಿ ಸೇರಿಸಿದ್ದಾರೆ. 

ಇದನ್ನೂ ವೀಕ್ಷಿಸಿ:  ಸುದೀಪ್ ಅಳಿಯನ ‘ಜಿಮ್ಮಿ’ ಕ್ಯಾರೆಕ್ಟರ್ ಗ್ಲಿಂಪ್ಸ್ ರಿಲೀಸ್: ಇದರ ಮೇಕಿಂಗ್ ಮಾಡಿದೆ ಸಖತ್ ಸೌಂಡ್!

02:59ಜಯಪ್ರಕಾಶ್ ಶೆಟ್ಟಿ ನಟನೆ, ಕನ್ನಡ-ತುಳು ಭಾಷೆಯ 'ಬನ' ರಿಲೀಸ್ ಡೇಟ್ ಅನೌನ್ಸ್!
02:24ನೆಪೋಟಿಸಂ ಬಗ್ಗೆ ಪ್ರಿಯಾಂಕಾ ಉಪೇಂದ್ರ ಹೇಳಿದ್ದೇನು..?!
04:57ಅಪ್ಪನ ಆಸೆ.. ಮಗಳ ಕನಸು.. ಅಪ್ಪ ಇಟ್ಟ ಹೆಸರಲ್ಲೇ ಬಿಜಿನೆಸ್​ಶುರು ಮಾಡಿದ ಅಪ್ಪು ಪುತ್ರಿ ವಂದಿತಾ..!
02:36Yash: ನಟ ಯಶ್​ ಹೃದಯವಂತ, ಜೊತೆ ಕೆಲಸ ಮಾಡಿದ್ದು ಅದ್ಭುತ ಅನುಭವ: ತಾರಾ ಸುತಾರಿಯಾ
08:02Toxic Movie: ಲಸ್ಟ್ ಸ್ಟೋರೀಸ್, ಕಬೀರ್ ಸಿಂಗ್ ಆಯ್ತು; ಮದುವೆಯಾಗಿ ಮಗು ಆದ್ರೂ ಕಮ್ಮಿಯಾಗಿಲ್ಲ Kiara Advani ಬ್ಯೂಟಿ
09:56Yash Toxic Movie Tabaahi Song: ಯಶ್‌, ಕಿಯಾರಾ ಅಡ್ವಾಣಿ ಕೆಮಿಸ್ಟ್ರಿಗೆ ದಂಗಾದ ಇಂಟರ್‌ನೆಟ್‌ ಜಗತ್ತು!
04:04ಶಿವಣ್ಣ-ಧನಂಜಯ್ ಮತ್ತೊಮ್ಮೆ ಜೊತೆಯಾಟ.. ಹೇಮಂತ್ ರಾವ್ ನಿರ್ದೇಶನದಲ್ಲಿ '...ಡ್ರೀಮ್ ಥಿಯೇಟರ್..!
09:57Darshan Thoogudeepa: ಡಿ ಗ್ಯಾಂಗ್ ರಹಸ್ಯ- ನಟ ದರ್ಶನ್ ಬಚಾವ್ ಮಾಡೋಕೆ ನಡಿತಿರೋ ಸಾಕ್ಷ್ಯನಾಶದ ಸೂತ್ರಧಾರಿ ಯಾರು?
05:49Toxic: Ladies & Ladies Teaser: 3 ಟೀಸರ್.. 100 ಮ್ಯಾಟರ್: ಇದ್ರಲ್ಲಿ ಲೇಡೀಸ್ ಗ್ಯಾಂಗ್ ಆರ್ಭಟ!
07:55Toxic: ಟಾಕ್ಸಿಕ್ ಸೌಂದರ್ಯ & ಸಮರ; ಲೇಡೀಸ್ ಸ್ಪೆಷಲ್ ಟೀಸರ್ ಸೆನ್ಸೇಷನ್‌ ಏನ್ ಹೇಳ್ತಿದೆ?
Read more