Jul 6, 2023, 2:57 PM IST
ಪವರ್ ಸ್ಟಾರ್ ಪವನ್ ಕಲ್ಯಾಣ್.. ಅದ್ಯಾಕೋ ಇತ್ತೀಚೆಗೆ ಬಿಗ್ ಸ್ಕ್ರೀನ್ನಿಂದ ಕಣ್ಮರೆಯಾಗಿದ್ದಾರೆ. ಪವನ್ ಕಲ್ಯಾಣ್ ಬಗ್ಗೆ ಹೇಳಿಕೊಳ್ಳುವಂತಹ ಯಾವ್ ಸರ್ಪ್ರೈಸ್ ಸುದ್ದಿಗಳು ಹೊರ ಬರುತ್ತಿಲ್ಲ. ಹೀಗಾಗಿ ಪವನ್ ಕಲ್ಯಾಣ್ (Pawan Kalyan) ಸ್ಟಾರ್ ವ್ಯಾಲ್ಯೂ ಕುಂದಿದೆ ಅಂತ ಟಾಲಿವುಡ್ ತುಂಬೆಲ್ಲಾ ಡಂಗೂರ ಸಾರಲಾಗ್ತಿತ್ತು. ಆದ್ರೆ ನೋ ನೋ. ಚಿತ್ರರಂಗದಲ್ಲಿ ನನ್ನ ಸ್ಟಾರ್ ವ್ಯಾಲ್ಯೂ ಪವರ್ ಎಂದೆಂದೂ ಕಮ್ಮಿ ಆಗೋಲ್ಲ ಅಂತ ಮತ್ತೆ ತೋರಿಸಿದ್ದಾರೆ ಪವರ್ ಸ್ಟಾರ್ ಪವನ್ ಕಲ್ಯಾಣ್. ಟಾಲಿವುಡ್ ಪವರ್ ಸ್ಟಾರ್ ಪವನ್ ಕಲ್ಯಾಣ್ ಇಷ್ಟು ದಿನ ಇನ್‌ಸ್ಟಾಗ್ರಾಂ ಸೋಷಿಯಲ್ ಮೀಡಿಯಾದಿಂದ ದೂರ ಇದ್ರು. ಆದ್ರೆ ಅದ್ಯಾವ್ ದೇವ್ರು ಮನಸ್ಸು ಕೊಡ್ತೋ ಏನೋ. ಪವನ್ ಕಲ್ಯಾಣ್ ದಿಢೀರ್ ಅಂತ ಇನ್‌ಸ್ಟಾಗ್ರಾಂಗೆ(Instagram) ಎಂಟ್ರಿ ಕೊಟ್ಟಿದ್ದಾರೆ. ಪವನ್ ಕಲ್ಯಾಣ್ ಇನ್‌ಸ್ಟಾಗ್ರಾಂಗೆ ಬಂದ ಕೇವಲ ಒಂದೂವರೆ ಗಂಟೆಯಲ್ಲಿ 10 ಲಕ್ಷ ಮಂದಿ ಫಾಲೋವರ್ಗಳನ್ನು (Followers) ಗಳಿಸಿದ್ದಾರೆ. ಈ ದಾಖಲೆಯನ್ನು ತೆಲುಗಿನ ಇನ್ಯಾವುದೇ ನಟರೂ ಮಾಡಿಲ್ಲ. ನಟ ಪ್ರಭಾಸ್ ಇನ್ಸ್ಟಾಗ್ರಾಂಗೆ ಬಂದಾಗ ಹತ್ತು ಲಕ್ಷ ಫಾಲೋವರ್ ಗಳಿಸಲು 23 ದಿನ ಹಿಡಿದಿತ್ತು. ಮಹೇಶ್ ಬಾಬುಗೂ ಇದೇ ಗತಿ ಆಗಿತ್ತು. ಆದರೆ ಪವನ್ಗೆ 10 ಲಕ್ಷ ಮಂದಿ ಫಾಲೋವರ್‌ಗಳು ಕೇವಲ ಒಂದೂವರೆ ಗಂಟೆಯಲ್ಲಿ ಸಿಕ್ಕಿದ್ದಾರೆ. ವಿಚಿತ್ರ ಅಂದ್ರೆ ಪವನ್ ಕಲ್ಯಾಣ್ ಈ ವರೆಗೆ ಒಂದೂ ಪೋಸ್ಟ್ ಮಾಡಿಲ್ಲ. ಪವನ್ ಕಲ್ಯಾಣ್ ಯಾರನ್ನೂ ಫಾಲೋ ಮಾಡುತ್ತಿಲ್ಲ.
ಇದನ್ನೂ ವೀಕ್ಷಿಸಿ: ಕಾಂತಾರಾ ಶಿವನ ಭೇಟಿ ಮಾಡ್ಬೇಕಾ ?: ಇಲ್ಲಿದೆ ಸೂಪರ್ ಚಾನ್ಸ್ !