Sep 3, 2023, 9:05 AM IST
ಅಭಿನಯ ಚಕ್ರವರ್ತಿ, ಕರುನಾಡ ಮಾಣಿಕ್ಯ, ಸ್ಯಾಂಡಲ್‌ವುಡ್‌ನ ಕೋಟಿಗೋಬ್ಬನಿಗೆ 51ನೇ ಹುಟ್ಟು ಹಬ್ಬದ ಸಂಭ್ರಮ. ಕಿಚ್ಚ ಸುದೀಪ್(Sudeep) ಅಭಿಮಾನಿಗಳು ಸುದೀಪ್ ಅವರ ಹುಟ್ಟು ಹಬ್ಬವನ್ನ(Birth Day) ಕಿಚ್ಚೋತ್ಸವವಾಗಿ ಆಚರಿಸಿದ್ರು. ಇದಕ್ಕೆ ಕಿಚ್ಚ ಸುದೀಪ್ ತಮ್ಮ ಅಭಿಮಾನಿಗಳಿಗೆ ಬಿಗ್ ಗಿಫ್ಟ್ ಕೊಟ್ಟಿದ್ದಾರೆ. ಅದ್ರಲ್ಲಿ 10 ವರ್ಷಗಳ ಬಳಿಕ ಮತ್ತೆ ನಿರ್ದೇಶಕನ ಕ್ಯಾಪ್ ತೊಡುತ್ತಿದ್ದಾರೆ ಸುದೀಪ್. ಅದೂ ಕೂಡ ಪ್ಯಾನ್ ಇಂಡಿಯಾ(Pan India) ಲೆವಲ್‌ನಲ್ಲಿ ಸುದೀಪ್ ಡೈರೆಕ್ಷನ್(Direction) ಮಾಡೊಕೆ ಹೊರಟಿದ್ದಾರೆ. 2014 ರಲ್ಲಿ ಬಿಡುಗಡೆಯಾಗಿದ್ದ ‘ಮಾಣಿಕ್ಯ’ ಸಿನಿಮಾದ ಬಳಿಕ ಯಾವುದೇ ಸಿನಿಮಾವನ್ನು ಸುದೀಪ್ ನಿರ್ದೇಶನ ಮಾಡಿರಲಿಲ್ಲ. ಆದ್ರೆ ಕೋಟಿಗೋಬ್ಬನ ಕೋಟಿ ಕೋಟಿ ಕನಸುಗಳನ್ನ ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ತೋರಿಸೋಕೆ ಹೊರಟಿದ್ದಾರೆ. ಸುದೀಪ್ ನಿರ್ದೇಶಿಸಲಿರುವ ಸಿನಿಮಾವನ್ನು ಕೆಆರ್‌ಜಿ ಸ್ಟುಡಿಯೋಸ್ ನಿರ್ಮಾಣ ಮಾಡಲಿದೆ. ಇನ್ನು ಈ ಸಿನಿಮಾದ ಕೆಲಸ 2024ಕ್ಕೆ ಶುರುವಾಗಿಲಿದೆ. ‘ದೇವರು ಕ್ಷಮಿಸುತ್ತಾನೆ ಆದರೆ ನಾನು ಕ್ಷಮಿಸುವುದಿಲ್ಲ’ ಎಂಬ ಟ್ಯಾಗ್ ಲೈನ್ ಅನ್ನು ಸಿನಿಮಾಕ್ಕೆ ನೀಡಲಾಗಿದೆ. ಸಿನಿಮಾಕ್ಕೆ ಸದ್ಯಕ್ಕೆ ಕೆಕೆ ಅನ್ನೋ ಹೆಸರನ್ನಷ್ಟೆ ಇಡಲಾಗಿದೆ.
ಇದನ್ನೂ ವೀಕ್ಷಿಸಿ: ಹುಟ್ಟುಹಬ್ಬದ 'ಸುವರ್ಣ' ಮಹೋತ್ಸವದಲ್ಲಿ ಕಿಚ್ಚ: ಅಭಿಮಾನದ 'ಕಿಚ್ಚೋತ್ಸವ'ದಲ್ಲಿ ಮಿಂದೆದ್ದ ಸುದೀಪ್ ಏನಂದ್ರು.?