Aug 21, 2023, 9:47 AM IST
ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ಮೇಲೆ ಕಿಸ್ ಚೆಲುವೆ ಶ್ರೀಲೀಲಾ ಹೆಗಲೇರಿದ್ದಾರೆ. ಯಾಕ್ ಗೊತ್ತಾ ಶ್ರೀವಲ್ಲಿ ರಶ್ಮಿಕಾ ಕೈಯಲ್ಲಿರೋ ಎಲ್ಲಾ ಅದ್ಭುತ ಸಿನಿಮಾಗಳನ್ನ ಕಿಕ್ ಚೆಲುವೆ ಶ್ರೀಲೀಲಾ ಕಿತ್ತುಕೊಳ್ಳುತ್ತಿದ್ದಾರೆ. ಇದೀಗ ನಿತಿನ್ ನಟನೆಯ ಹೊಸ ಚಿತ್ರದಲ್ಲಿ ರಶ್ಮಿಕಾ ಮಂದಣ್ಣ(Rashmika Mandanna ) ನಾಯಕಿ ಆಗಿ ಫಿಕ್ಸ್ ಆಗಿದ್ರು. ಆ ಚಿತ್ರಕ್ಕೆ ವೆಂಕಿ ಕುದುಮುಲ ನಿರ್ದೇಶನ ಮಾಡುತ್ತಿದ್ದು ಸಿನಿಮಾದ ಶೂಟಿಂಗ್ ಕೂಡ ಆಗುತ್ತಿದೆ. ಆದ್ರೆ ಶ್ರೀವಲ್ಲಿ ರಶ್ಮಿಕಾ ನಟಿಸಿದ ಎಲ್ಲ ದೃಶ್ಯಗಳೂ ವೇಸ್ಟ್ ಆದ್ರು ಪರವಾಗಿಲ್ಲ ಅಂತ ಆ ಸಿನಿಮಾದಿಂದ ರಶ್ಮಿಕಾರನ್ನ ಕಿಕ್ಔಟ್ ಮಾಡಲಾಗಿದೆ. ಕೊಡಗಿನ ಕುವರಿ ರಶ್ಮಿಕಾ ಜಾಗಕ್ಕೆ ಕನ್ನಡದ ಮತ್ತೋರ್ವ ಬ್ಯೂಟಿ ಶ್ರೀಲೀಲಾರನ್ನ(Srileela) ಕರೆತರಲಾಗಿದೆ. ನಟ ನಿತಿನ್(Actor Nithin) ಹಾಗೂ ನಿರ್ದೇಶಕ ವೆಂಕಿ ಕುದುಮುಲ ಮತ್ತು ರಶ್ಮಿಕಾ ಮಂದಣ್ಣ ಈ ಮೊದಲು ‘ಭೀಷ್ಮ’ ಸಿನಿಮಾದಲ್ಲಿ ಜೊತೆಯಾಗಿ ಕೆಲಸ ಮಾಡಿದ್ರು. ಆದ್ರೆ ಈಗ ಅದೇನಾಯ್ತೋ ಏನೋ ಈ ಮೂವರು ಕಾಂಬಿನೇಷನ್ನ ಇನ್ನೂ ಹೆಸರಿಡದ ಎರಡನೇ ಚಿತ್ರದಿಂದ ರಶ್ಮಿಕಾರನ್ನ ಕೈ ಬಿಡಲಾಗಿದೆ. ಹೀಗಾಗಿ ರಶ್ಮಿಕಾ ನಟಿಸಿದ್ದ ಕೆಲ ದೃಶ್ಯಗಳನ್ನ ಶ್ರೀಲೀಲಾ ಜೊತೆ ಮರು ಚಿತ್ರೀಕರಣ ಮಾಡುತ್ತಿದೆ ಚಿತ್ರತಂಡ.
ಇದನ್ನೂ ವೀಕ್ಷಿಸಿ: ಸಿನಿ ಜಗತ್ತಲ್ಲಿ ಮಿಂಚಲು ಎರಡು ಹೆಸರು ಬದಲಿಸಿದ ರಾಮು ಪುತ್ರಿ!