ಸ್ಯಾಂಡಲ್‌ವುಡ್‌ನಲ್ಲಿ ರಕ್ತ ಚರಿತ್ರೆಗೆ ರೆಡಿ ನೆಲ್ಸನ್! ಈ ಸಿನಿಮಾ ಕಥೆಯ ಹೀರೋ ಯಾರು ?

Oct 28, 2023, 9:52 AM IST

ರಗಡ್ ಲುಕ್, ಮಾಸ್ ಮಸಾಲದ ಕಥೆ, ಭರ್ಜರಿ ಬಿಜಿಎಂ, ವಾವ್ಹ್ ಅನ್ನಿಸೋ ವಿಶ್ಯೂವಲ್ ಟ್ರೀಟ್. ಇದರ ಜೊತೆ ಒಂದು ಊರ ಆಚರಣೆ ಅದರ ಮಧ್ಯೆ ಕ್ರೈಂ ಸ್ಟೋರಿ ಎಲ್ಲವೂ ಈ ನೆಲ್ಸನ್ ಟೀಸರ್(Nelson movie teaser) ಚಿಕ್ಕ ಜಲಕ್‌ನಲ್ಲೇ ಸಿಕ್ಕಿದೆ. ಅಷ್ಟಕ್ಕೂ ಇಲ್ಲಿ ನೆಲ್ಸನ್ ಆಗಿ ರಕ್ತ ಚರಿತ್ರೆ ಬರೆಯೋ ಹೀರೋ ಯಾರ್ ಗೊತ್ತಾ.? ಅವ್ರೇ ಮರಿ ಟೈಗರ್ ವಿನೋದ್ ಪ್ರಭಾಕರ್(Vinod Prabhakar). ನೆಲ್ಸನ್(Nelson) ಟೈಟಲ್ ಕೆಳಗೆ ರಕ್ತದಲ್ಲಿ ನೆಂದ ದೇವರಕಾಡು ಅನ್ನೋ ಅಡಿ ಬರಹ ಇದೆ. ಇದು ನೈಜ ಘಟನೆಯ ಸಿನಿಮಾ. ಚಾಮರಾಜನಗರ ಜಿಲ್ಲೆಯಲ್ಲಿ 60ರಿಂದ 90ರ ದಶಕದಲ್ಲಿ ನಡೆಯುವ ಗ್ಯಾಂಗ್‌ಸ್ಟರ್‌ ಕಥೆ ಈ ಸಿನಿಮಾದಲ್ಲಿದೆ. ಚಾಮರಾಜನಗರದ(Chamarajnagar) ಭಾಷೆ, ಸಂಸ್ಕೃತಿ, ನೆಲ, ಜಲ, ಬುಡಕಟ್ಟು ಜನಾಂಗದ ಸಂಘರ್ಷ ಸೇರಿದಂತೆ ಒಂದಷ್ಟು ಅಂಶಗಳು ಇಲ್ಲಿವೆ. ಈ ಟೀಸರ್‌ನನ್ನ ರಿಯಲ್ ಸ್ಟಾರ್ ಉಪೇಂದ್ರ ರಿಲೀಸ್ ಮಾಡಿದ್ರು. ನೆಲ್ಸನ್ ಸಿನಿಮಾದ ಮೇಕಿಂಗ್ ಸೂಪರ್, ವಿನೋದ್ ಪ್ರಭಾಕರ್ ರೆಗ್ಯೂಲರ್ ಪ್ಯಾಟ್ರನ್ ಸಿನಿಮಾ ಬಿಟ್ಟು ಹೊಸ ಗೆಟಪ್ನಲ್ಲಿ ಹೊರ ಬಂದಿದ್ದಾರೆ. ನೆಲ್ಸನ್ ಸಿನಿಮಾವನ್ನ ಅರುಣ್ ಕುಮಾರ್ ಎಂ ನಿರ್ದೇಶನ ಮಾಡುತ್ತಿದ್ದಾರೆ. ಚಿತ್ರಕ್ಕೆ ನಿರ್ಮಾಪಕ ಬಿ.ಎಂ.ಶ್ರೀರಾಮ್ ಬಂಡವಾಳ ಹೂಡಿದ್ದಾರೆ. ಪ್ರಜ್ವಲ್ ಗೌಡ ಛಾಯಾಗ್ರಹಣ ಹಾಗೂ ಬಿ.ಜೆ ಭರತ್ ಸಂಗೀತ ಸಿನಿಮಾಗಿದೆ. ನೆಲ್ಸನ್ ಸಿನಿಮಾವನ್ನು ದೀಪ ಫಿಲ್ಮ್ಸ್ ಬ್ಯಾನರ್ ಅಡಯಲ್ಲಿ ಬಿ.ಎಂ ಶ್ರೀರಾಮ್ ಕೋಲಾರ್ ನಿರ್ಮಾಣ ಮಾಡುತ್ತಿದ್ದಾರೆ. ವಿನೋದ್ ಪ್ರಭಾಕರ್ ಸಿನಿ ಕರಿಯರ್ನಲ್ಲಿ ನೆಲ್ಸನ್ ಹೊಸ ಅಧ್ಯಾಯ ಆದ್ರು ಆಶ್ಚರ್ಯವೇನಿಲ್ಲ.

ಇದನ್ನೂ ವೀಕ್ಷಿಸಿ:  'ಟಗರು ಪಲ್ಯ' ನೋಡಿ ಖುಷಿ ಪಟ್ಟ ಸ್ಯಾಂಡಲ್‌ವುಡ್‌ ಮಂದಿ: ಸಿನಿಮಾಗೆ ತಾರೆಯರ ರಿವ್ಯೂ ಹೇಗಿದೆ ಗೊತ್ತಾ ?