ಹೊಯ್ಸಳ ಚಿತ್ರದ ಬಲಿ ಈಗ 'ಕ್ಷೇತ್ರಪತಿ': ಉತ್ತರ ಕರ್ನಾಟಕದ ಕಥೆಗೆ ಜೀವ ತುಂಬಿದ ಗುಳ್ಟು ನವೀನ್!

ಹೊಯ್ಸಳ ಚಿತ್ರದ ಬಲಿ ಈಗ 'ಕ್ಷೇತ್ರಪತಿ': ಉತ್ತರ ಕರ್ನಾಟಕದ ಕಥೆಗೆ ಜೀವ ತುಂಬಿದ ಗುಳ್ಟು ನವೀನ್!

Published : Jun 18, 2023, 02:56 PM IST

ಶ್ರೀಕಾಂತ್ ಕಟಗಿ ಕ್ಷೇತ್ರಪತಿ ಸಿನಿಮಾ ನಿರ್ದೇಶಿಸಿದ್ದಾರೆ. ಇದು ಉತ್ತರ ಕರ್ನಾಟಕ ಭಾಗದಲ್ಲಿ ನಡೆಯುವ ಕಥೆಯಾಗಿದೆ. ಹಾಗಾಗಿ ಹೆಚ್ಚಿನ ಭಾಗದ ಚಿತ್ರೀಕರಣ ಉತ್ತರ ಕರ್ನಾಟಕದಲ್ಲೇ ನಡೆದಿದೆ.

ಉತ್ತರ ಕರ್ನಾಟಕದ ಯುವ ನಟ ನವೀನ ಶಂಕರ್ ಕನ್ನಡ ಚಿತ್ರರಂಗದಲ್ಲಿ ಭರವಸೆಯ ನಟನಾಗಿ ಗುರ್ತಿಸಿಕೊಂಡಿದ್ದಾರೆ. ಇಲ್ಲಿತನಕ ಅವರು ನಟಿಸಿದ ಎಲ್ಲ ಚಿತ್ರಗಳು ಒಂದಕ್ಕಿಂತ ಒಂದು ವಿಭಿನ್ನವಾಗಿವೆ. ಇದೀಗ ಕ್ಷೇತ್ರಪತಿಯಾಗಿ ನಾಲ್ಕನೇ ಚಿತ್ರದಲ್ಲಿ ಉತ್ತರ ಕರ್ನಾಟಕದ  ಖಡಕ್ ರೈತನ ಪಾತ್ರದಲ್ಲಿ ಸಹಜ ಅಭಿನಯದೊಂದಿಗೆ ಥ್ರಿಲ್ ಮೂಡಿಸಿದ್ದಾರೆ. ಟೀಸರ್ ಬೆಂಕಿಗುರು ಎನ್ನುತ್ತಿದ್ದಾರೆ ಕ್ಷೇತ್ರಪತಿ ಟೀಸರ್ ನೋಡಿದವರು. ಕ್ಷೇತ್ರಪತಿ ಪೊಲಿಟಿಕಲ್ ಡ್ರಾಮಾ ಕಥಾಹಂದರ ಹೊಂದಿದೆ. ಯಾವುದೇ ದೊಡ್ಡ ಹೀರೋ ಬ್ಯುಲ್ಡಪ್ ಇಲ್ಲ, ದೊಡ್ಡ ಫೈಟಿಂಗ್ ಇಲ್ಲ ನೈಜನಟನೆಯೊಂದಿಗೆ ಜನಮನ ಗೆದ್ದಿದೆ. ಅರ್ಚನಾ ಜೋಯಿಸಾ ನಿರೂಪಣಾ ರೀತಿ ಅದ್ಭುತವಾಗಿದೆ. ಅನ್ನ ಬೆಳೆಯೋ ಮಣ್ಣಿಗೆ ರೈತನೇ ಕ್ಷೇತ್ರಪತಿ ಎನ್ನುವ ಖಡಕ್ ಡೈಲಾಗ್ ಅಷ್ಟೇ ಖಡಕ್ ಆಗಿದೆ.

ಇದನ್ನೂ ವೀಕ್ಷಿಸಿ: ರಾಕಿಭಾಯ್ 19ನೇ ಚಿತ್ರದ ಬಿಗ್ ನ್ಯೂಸ್: ಯಶ್‌ ಸಿನಿಮಾಗೆ ಇವರೇ ಡೈರೆಕ್ಟರ್ ?

 

04:59ಟಾಕ್ಸಿಕ್ ಹಸಿಬಿಸಿ ದೃಶ್ಯದ ವಿರುದ್ದ ಕಂಪ್ಲೇಂಟ್; ಈ ವಿವಾದದ ಬಗ್ಗೆ ಯಶ್ ಏನಂತಾರೆ..?
03:36Golden Star Ganesh ಬಗ್ಗೆ ಇಂಥ ಚಿಂತಾಜನಕ ಸುದ್ದಿ ಹರಡಿದ್ಯಾಕೆ? ಯಾಕೆ ಹೀಗಾಯ್ತು?
05:51ದರ್ಶನ್ ಪತ್ನಿ ವಿಜಯಲಕ್ಷ್ಮೀ ವಿರುದ್ಧ ಅಶ್ಲೀಲ ಕಾಮೆಂಟ್: ಇಬ್ಬರ ಅರೆಸ್ಟ್, ಫ್ಯಾನ್ಸ್ ವಾರ್‌ಗೆ ಬ್ರೇಕ್
02:06ಬಾಕ್ಸಾಫೀಸ್​​ನಲ್ಲಿ ದಾಖಲೆ ಬರೆದ ಧುರಂಧರ್: ವೆಬ್​ ಸರಣಿ ನಿರ್ದೇಶನಕ್ಕೆ ಕೈ ಹಾಕಿದ ಪಿ.ಸಿ.ಶೇಖರ್
05:38ಒಂದೇ ಒಂದು ಹಾಡಿನಿಂದ ಟ್ರೆಂಡಿಂಗ್ ಟಾಪ್​ಸಿಂಗರ್​ಆಗ್ಬಿಟ್ರಾ ಸಾನ್ವಿ? ಅಪ್ಪನಂತೇ ಮಗಳು, ಸಂಗೀತದ ಬೆರಗು..!
03:37ಇತ್ತ ಡೆವಿಲ್.. ಅತ್ತ ಟ್ರಯಲ್.. ದಾಸನಿಗೆ ಟ್ರಬಲ್: ಪವಿತ್ರಾ ಗೌಡಗೂ ಟಿವಿ ಕೊಡಿ, ವಕೀಲರ ಮನವಿ!
04:23'ತ್ರಿಮೂರ್ತಿ'ಗಳ ಹಾಲಿವುಡ್‌ ರೇಂಜ್ ಮೇಕಿಂಗ್ '45' ಸಿನಿಮಾ ಟ್ರೈಲರ್ ನೋಡಿದವ್ರು ಏನಂತಿದಾರೆ?!
05:37ಡೆವಿಲ್ ಸಿನಿಮಾದಲ್ಲಿ ದರ್ಶನ್ ಸಿಎಂ..! ಕಿಚ್ಚ ಸುದೀಪ್ ಹೇಳಿದ ಪಾಲಿಟಿಕ್ಸ್ ಸೀಕ್ರೆಟ್ ಏನು?
04:38Video: ನಟಿ ರಮ್ಯಾಗೆ ಸಂದರ್ಶನದಲ್ಲೇ ತಿರುಗೇಟು ಕೊಟ್ಟ Actor Darshan Wife Vijayalakshmi
04:51ಎಲ್ಲೆಲ್ಲೂ 'ಗಿಲ್ಲಿ ನಟ'ನದೇ ದರ್ಬಾರ್.. ಬಿಗ್ ಬಾಸ್‌ನಲ್ಲೂ ಬಿಗ್ ಸ್ಕ್ರೀನ್‌ನಲ್ಲೂ ಸಖತ್ ಸದ್ದು..!