ಮತ್ತೆ 'ನಮೋ ಭೂತಾತ್ಮ' ಎಂದ ಕೋಮಲ್: ಸಿನಿಮಾ ಟೀಸರ್ ರಿಲೀಸ್ ಮಾಡಿದ ಧ್ರುವ!

Jul 3, 2023, 1:27 PM IST

ನಿಮ್ಗೆಲ್ಲಾ ನಮೋ ಭೂತಾತ್ಮ ಸಿನಿಮಾ ನೆನಪಿದೆ ಅಲ್ವಾ. ಸೆನ್ಸೇಷನಲ್ ಸ್ಟಾರ್ ಕೋಮಲ್ 2014 ರಲ್ಲಿ ನಮೋ ಭೂತಾತ್ಮದ ಮೂಲಕ ಎಲ್ಲರನ್ನು ನಗಿಸಿ ನಡುಗಿಸಿದ್ರು. ಈಗ ಮತ್ತೆ 13 ವರ್ಷದ ಬಳಿಕ ಎದೆ ಬಡಿತ ಜಾಸ್ತಿ ಮಾಡಲು ನಮೋ ಭೂತಾತ್ಮದ ಜೊತೆ ಬರ್ತಿದ್ದಾರೆ ಕೋಮಲ್. ಸೆನ್ಸೇಷನಲ್ ಸ್ಟಾರ್ ಕೋಮಲ್ ನಟನೆಯ ನಮೋ ಭೂತಾತ್ಮ 2 ಸಿನಿಮಾ ತೆರೆ ಮೇಲೆ ಬರೋದಕ್ಕೆ ಸಿದ್ಧವಾಗ್ತಿದೆ. ಈ ಸಿನಿಮಾದ ಟೀಸರ್ ರಿಲೀಸ್ ಆಗಿದೆ. ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಟೀಸರ್ ರಿಲೀಸ್ ಮಾಡಿ ಕೋಮಲ್‌ಗೆ ಆಲ್ ದಿ ಬೆಸ್ಟ್ ಹೇಳಿದ್ದಾರೆ. ಕೋಮಲ್ ರ ನಮೋ ಭೂತಾತ್ಮ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದ ನೃತ್ಯ ಸಂಯೋಜಕ ಮುರಳಿ ನಮೋ ಭೂತಾತ್ಮ ಚಾಪ್ಟರ್ 2ಗೂ ನಿರ್ದೇಶನ ಮಾಡುತ್ತಿದ್ದಾರೆ. ಈ ಹಾರರ್ ಕಾಮಿಡಿ ಸಿನಿಮಾದಲ್ಲಿ ಕೋಮಲ್ ಜೊತೆ ಲೇಖಾಚಂದ್ರ ನಾಯಕಿಯಾಗಿದ್ದಾರೆ. ಉಳಿದಂತೆ ಮಿಮಿಕ್ರಿ ಗೋಪಿ, ಮಹಾಂತೇಶ್, ಗೋವಿಂದೇಗೌಡ, ರುದ್ರೇಶ್, ಮೋನಿಕಾ ಸೇರಿದಂತೆ ಅದ್ಭುತ ಕಲಾವಿಧರಿದ್ದಾರೆ.

ಇದನ್ನೂ ವೀಕ್ಷಿಸಿ:  ಋಷಿಮುನಿ ಅವತಾರದಲ್ಲಿ ರಾಕಿ ಮಿಂಚಿನ ಸಂಚಲನ: ಯಶ್ ಯಾವೆಲ್ಲಾ ಲುಕ್‌ನಲ್ಲಿ ಹೇಗೆಲ್ಲಾ ಕಾಣಿಸ್ತಾರೆ ?