Jul 2, 2023, 12:50 PM IST
ಮಾರ್ಟಿನ್ ಸಿನಿಮಾ ಮಹೂರ್ಥ ಆಗಿ ಬರೋಬ್ಬರಿ 2 ವರ್ಷ ಆಗಿದೆ. ಆದ್ರೆ ಮಾರ್ಟಿನ್ ಶೂಟಿಂಗ್ ಮಾತ್ರ ಇನ್ನೂ ಕಂಪ್ಲೀಟ್ ಆಗಿಲ್ಲ. ಕಳೆದ ವರ್ಷ ಸೆಂಪ್ಟೆಂಬರ್ನಲ್ಲಿ ಸಿನಿಮಾ ರಿಲೀಸ್ ಮಾಡೋದಾಗಿ ಮಾರ್ಟಿನ್ ಟೀಂ ಹೇಳಿಕೊಂಡಿತ್ತು. ಆ ಸೆಪ್ಟೆಂಬರ್ ಕಳೆದು ಒಂದು ವರ್ಷ ಆಗ್ತಾ ಬಂತು. ಆದ್ರೆ ಇಂದಿಗೂ ಮಾರ್ಟಿನ್ ರಿಲೀಸ್ ಯಾವಾಗ ಅನ್ನೋ ಕ್ಲಾರಿಟಿ ಸ್ವತಹ ಚಿತ್ರತಂಡಕ್ಕೇ ಸಿಕ್ಕಿಲ್ಲ. ಹಾಗಾದ್ರೆ ಮಾರ್ಟಿನ್ ರಿಲೀಸ್ ಯಾವಾಗ ಅಂತ ಕೇಳಿದ್ರೆ ನಿರ್ಮಾಪಕ ಉದಯ್ ಕೆ ಮೆಹ್ತಾ ಹೊಸ ದಿನಾಂಕ ಒಂದನ್ನ ಹುಡುಕುತ್ತಿದ್ದಾರೆ. ಈ ವರ್ಷ ಅಕ್ಟೋಬರ್ ಕೊನೆಯಲ್ಲಿ ಸಿನಿಮಾವನ್ನ 200 ಪರ್ಸೆಂಟ್ ರಿಲೀಸ್ ಮಾಡ್ತೇವೆ ಅಂತ ಹೇಳ್ತಿದ್ದಾರೆ.ಈ ಸಿನಿಮಾದ ಚಿತ್ರೀಕರಣ ಇನ್ನೂ 40 ದಿನ ಭಾಕಿ ಇದೆ. ಐದು ಹಾಡುಗಳ ಶೂಟಿಂಗ್ ಹಾಗು 10 ದಿನ ಟಾಕಿ ಪೋಷನ್ ಚಿತ್ರೀಕರಣ ನಡೆಯಬೇಕಿದೆ. ಜುಲೈನಿಂದ ಭಾಕಿ ಇರೋ ಶೂಟಿಂಗ್ ಆರಂಭ ಆಗ್ತಿದೆ. ಮಾರ್ಟಿನ್ ತೆರೆ ಮೇಲೆ ಬರೋದಕ್ಕೆ ಇಷ್ಟೊಂದು ಲೇಟ್ ಆಗ್ತಿರೋದಕ್ಕೆ ಕಾರಣವೂ ಇದೆ. ಅದು ಮಾರ್ಟಿನ್ ಪ್ಯಾನ್ ಇಂಡಿಯಾ ಸಿನಿಮಾ ಆಗಿ ಸಿದ್ಧವಾಗ್ತಿರೋದು. ಹೀಗಾಗಿ ಕೆಲವೊಂದು ದೃಶ್ಯಗಳನ್ನ ರೀ ಶೂಟ್ ಮಾಡಲಾಗ್ತಿದೆ ಅಂತಲೂ ಮಾಹಿತಿ ಇದೆ.
ಇದನ್ನೂ ವೀಕ್ಷಿಸಿ: RRRನಿಂದ ಬದಲಾಯ್ತು ಜೂ.ಎನ್‌ಟಿಆರ್, ರಾಮ್ ಚರಣ್ ಲಕ್: ಆಸ್ಕರ್ ಸೆಲೆಕ್ಷನ್ ಕಮಿಟಿಯಲ್ಲಿ ಭಾರತೀಯ ಸ್ಟಾರ್ಸ್..!