ಸಿನಿ ಜಗತ್ತಲ್ಲಿ ಮಿಂಚಲು ಎರಡು ಹೆಸರು ಬದಲಿಸಿದ ರಾಮು ಪುತ್ರಿ!

ಸಿನಿ ಜಗತ್ತಲ್ಲಿ ಮಿಂಚಲು ಎರಡು ಹೆಸರು ಬದಲಿಸಿದ ರಾಮು ಪುತ್ರಿ!

Published : Aug 21, 2023, 09:30 AM IST

ಮುದ್ದಿನ ಮಗಳಿಗೆ ಮಾಲಾಶ್ರೀ ಮರು ನಾಮಕರಣ..!
ಸೌಂದರ್ಯದ ಗಣಿ ಮಾಲಾಶ್ರೀ ಸುಪುತ್ರಿ ಆರಾಧನಾ ರಾಮ್
ಎರಡು ಭಾರಿ ಹೆಸರು ಬದಲಿಸುತ್ತಿರೋದೇಕೆ ಮಾಲಾಶ್ರೀ ಪುತ್ರಿ?

ಸ್ಯಾಂಡಲ್‌ವುಡ್‌ನ ಕನಸಿನ ರಾಣಿ ಮಾಲಾಶ್ರೀಯ(Malashree) ದೊಡ್ಡ ಕನಸು ಮತ್ತೆ ಆಸೆ ನನ್ನ ಹಾಗೆ ನನ್ನ ಮಗಳು ಕೂಡ ಬೆಳ್ಳಿತೆರೆ ಮೇಲೆ ಮಿಂಚಬೇಕು. ಸ್ಟಾರ್ ಹೀರೋಯಿನ್ ಆಗಿ ಚಿತ್ರರಂಗವನ್ನ ಆಳಬೇಕು ಅನ್ನೋದು. ಮಗಳ ಬಣ್ಣದ ಜಗತ್ತಿನ ಬೆಳವಣಿಗೆಗಾಗಿ ಸ್ಟ್ರಾಂಗ್ ಪಿಲ್ಲರ್ ರೀತಿ ನಿಂತುಕೊಂಡಿರೋ ಮಾಲಾಶ್ರೀ ತನ್ನ ಮುದ್ದು ಗೊಂಬೆ ಮಗಳು ರಾಧನಾಗೆ(Radhana) ಮರು ನಾಮಕರಣ ಮಾಡಿದ್ದಾರೆ. ರಾಧನಾ ರಾಮ್ ಅಂತ ಇದ್ದ ಮಾಲಾಶ್ರೀ ಪುತ್ರಿಯ ಹೆಸ್ರು ಈಗ ಆರಾಧನಾ ರಾಮ್ ಆಗಿ ಬದಲಾಗಿದೆ. ಮಾಲಾಶ್ರೀ ಮಗಳ ಮೊದಲ ಹೆಸರು ಅನನ್ಯಾ ರಾಮ್. ಆದ್ರೆ ಅನನ್ಯಾ ಹೆಸರು ಕಾಮನ್ ಆಗುತ್ತೆ ಅಂತ ಸಿನಿಮಾದಲ್ಲಿ ಆಫರ್‌ಗಳು ಬರುತ್ತಿದ್ದ ಹಾಗೆ ಮಗಳಿಗೆ ರಾಧನಾ ರಾಮ್ ಅಂತ ಯುನೀಕ್ ಆಗಿರೋ ಹೆಸರನ್ನ ನಾಮಕರಣ ಮಾಡಿದ್ರು. ಈಗ ಈ ರಾಧನಾ ನೇಮ್  ಕೂಡ ಚೇಂಜ್ ಆಗಿದೆ. ರಾಧನಾ ಹೆಸರಿನ ಹಿಂದೆ ಆ ಅಕ್ಷರ ಸೇರಿಸಿ ಆರಾಧನಾ ರಾಮ್(Aradhana Ram) ಅಂತ ಮಾಡಿಕೊಂಡಿದ್ದಾರೆ. ನಿರ್ಮಾಪಕ ರಾಮು ಮಗಳು.. ಅಷ್ಟಕ್ಕು ರಾಧನಾ ಹೆಸರು ಆರಾಧನಾ ಅಂತ ಬದಲಿಸಿಕೊಂಡಿದ್ದು ಯಾಕೆ ಗೊತ್ತಾ.? ಆರಾಧನಾ ಹುಟ್ಟು ಹೆಸರು ಅನನ್ಯಾ ರಾಮ್. ಸಂಖ್ಯಾ ಶಾಸ್ತ್ರದ ಪ್ರಕಾರ ಆ ಅನ್ನೋ ಅಕ್ಷರದಿಂದ ರಾಮು ಮಗಳಿಗೆ ತುಂಬಾ ಒಳ್ಳೆಯದಾಗುತ್ತಂತೆ. ಹೀಗಾಗಿ ಈಗ ಮತ್ತೆ ರಾಧನಾ ಹೆಸರಿನ ಹಿಂದೆ ಆ ಅಕ್ಷರ ಸೇರಿಕೊಂಡು ಆರಾಧನಾ ರಾಮ್ ಅಂತ ಹೆಸರು ಬದಲಿಸಿಕೊಂಡಿದ್ದಾರೆ ಮಾಲಾಶ್ರೀ ಮಗಳು.

ಇದನ್ನೂ ವೀಕ್ಷಿಸಿ:  ಚಿರು ಪಾತ್ರಕ್ಕೆ ಜೀವ ತುಂಬಿದ ಧ್ರುವ ಸರ್ಜಾ: ತಮ್ಮನ ಹುಟ್ಟುಹಬ್ಬಕ್ಕೆ ಅಣ್ಣನ ಕೊನೆಯ ಗಿಫ್ಟ್‌‌..!

04:59ಟಾಕ್ಸಿಕ್ ಹಸಿಬಿಸಿ ದೃಶ್ಯದ ವಿರುದ್ದ ಕಂಪ್ಲೇಂಟ್; ಈ ವಿವಾದದ ಬಗ್ಗೆ ಯಶ್ ಏನಂತಾರೆ..?
03:36Golden Star Ganesh ಬಗ್ಗೆ ಇಂಥ ಚಿಂತಾಜನಕ ಸುದ್ದಿ ಹರಡಿದ್ಯಾಕೆ? ಯಾಕೆ ಹೀಗಾಯ್ತು?
05:51ದರ್ಶನ್ ಪತ್ನಿ ವಿಜಯಲಕ್ಷ್ಮೀ ವಿರುದ್ಧ ಅಶ್ಲೀಲ ಕಾಮೆಂಟ್: ಇಬ್ಬರ ಅರೆಸ್ಟ್, ಫ್ಯಾನ್ಸ್ ವಾರ್‌ಗೆ ಬ್ರೇಕ್
02:06ಬಾಕ್ಸಾಫೀಸ್​​ನಲ್ಲಿ ದಾಖಲೆ ಬರೆದ ಧುರಂಧರ್: ವೆಬ್​ ಸರಣಿ ನಿರ್ದೇಶನಕ್ಕೆ ಕೈ ಹಾಕಿದ ಪಿ.ಸಿ.ಶೇಖರ್
05:38ಒಂದೇ ಒಂದು ಹಾಡಿನಿಂದ ಟ್ರೆಂಡಿಂಗ್ ಟಾಪ್​ಸಿಂಗರ್​ಆಗ್ಬಿಟ್ರಾ ಸಾನ್ವಿ? ಅಪ್ಪನಂತೇ ಮಗಳು, ಸಂಗೀತದ ಬೆರಗು..!
03:37ಇತ್ತ ಡೆವಿಲ್.. ಅತ್ತ ಟ್ರಯಲ್.. ದಾಸನಿಗೆ ಟ್ರಬಲ್: ಪವಿತ್ರಾ ಗೌಡಗೂ ಟಿವಿ ಕೊಡಿ, ವಕೀಲರ ಮನವಿ!
04:23'ತ್ರಿಮೂರ್ತಿ'ಗಳ ಹಾಲಿವುಡ್‌ ರೇಂಜ್ ಮೇಕಿಂಗ್ '45' ಸಿನಿಮಾ ಟ್ರೈಲರ್ ನೋಡಿದವ್ರು ಏನಂತಿದಾರೆ?!
05:37ಡೆವಿಲ್ ಸಿನಿಮಾದಲ್ಲಿ ದರ್ಶನ್ ಸಿಎಂ..! ಕಿಚ್ಚ ಸುದೀಪ್ ಹೇಳಿದ ಪಾಲಿಟಿಕ್ಸ್ ಸೀಕ್ರೆಟ್ ಏನು?
04:38Video: ನಟಿ ರಮ್ಯಾಗೆ ಸಂದರ್ಶನದಲ್ಲೇ ತಿರುಗೇಟು ಕೊಟ್ಟ Actor Darshan Wife Vijayalakshmi
04:51ಎಲ್ಲೆಲ್ಲೂ 'ಗಿಲ್ಲಿ ನಟ'ನದೇ ದರ್ಬಾರ್.. ಬಿಗ್ ಬಾಸ್‌ನಲ್ಲೂ ಬಿಗ್ ಸ್ಕ್ರೀನ್‌ನಲ್ಲೂ ಸಖತ್ ಸದ್ದು..!