Nov 11, 2021, 2:47 PM IST
ನೆನಪಿರಲಿ ಪ್ರೇಮ್ (Prem) ಅಭಿನಯದ 'ಪ್ರೇಮಂ ಪೂಜ್ಯಂ' (Premam Poojyam) ಚಿತ್ರ ನ.12ರಂದು ಬಿಡುಗಡೆಯಾಗುತ್ತಿದೆ. ಚಿತ್ರತಂಡ ಚಿತ್ರವನ್ನು ಪುನೀತ್ ರಾಜ್‌ಕುಮಾರ್ (Puneeth Rajkumar) ಅವರಿಗೆ ಸಮರ್ಪಿಸಿದೆ ಎಂದು ಪ್ರೇಮ್ ತಿಳಿಸಿದ್ದಾರೆ. ಚಿತ್ರದ ಬಿಡುಗಡೆ ಕುರಿತಾಗಿ ಮಾತನಾಡಲು ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಅವರು ಪುನೀತ್ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದರು. 'ಪ್ರೇಮಂ ಪೂಜ್ಯಂ' ಚಿತ್ರದ ಮೇಲೆ ಪ್ರೇಮ್ ಮತ್ತು ಚಿತ್ರತಂಡಕ್ಕೆ ಅಪಾರವಾದ ನಂಬಿಕೆ, ಭರವಸೆ ಇದೆ. ಆ ವಿಶ್ವಾಸ ಎಲ್ಲರ ಮಾತಿನಲ್ಲೂ ಇತ್ತು. ಬೇರೆ ಬೇರೆ ರೀತಿಯಲ್ಲಿ ಕಾಣಿಸಿಕೊಳ್ಳುವ ಪಾತ್ರ ಮಾಡಿದ್ದೇನೆ. ವಿಭಿನ್ನ ಕಥಾ ಹಂದರವಿರುವ ಸಿನಿಮಾ ಇದು ಎಂದರು ಪ್ರೇಮ್.
ಸಿನಿರಸಿಕರಿಂದ 'ಪ್ರೇಮಂ ಪೂಜ್ಯಂ' ದೃಶ್ಯ ಕಾವ್ಯ ಟ್ರೇಲರ್‌ಗೆ ಮೆಚ್ಚುಗೆ
ಚಿತ್ರದಲ್ಲಿ ಅವರ ಸ್ನೇಹಿತನಾಗಿ ನಟಿಸಿರುವ ಮಾಸ್ಟರ್ ಆನಂದ್ (master Anand), ಈ ಸಿನಿಮಾ ಸ್ನೇಹಂ ಪೂಜ್ಯಂ ಕೂಡ ಹೌದು. ಗೆಳೆಯನಾಗಿ ಸಿನಿಮಾ ಪೂರ್ತಿ ಇರುತ್ತೇನೆ. ಇಷ್ಟಪಟ್ಟು, ಕಷ್ಟಪಟ್ಟು ಸಿನಿಮಾ ಮಾಡಿದ್ದೇವೆ. ಪ್ರತೀ ಫ್ರೇಮ್‌ನಲ್ಲೂ ಕತೆ ಹೇಳುವ ಪ್ರಯತ್ನ ಇದು ಎಂದರು. ವಿಶೇಷ ಎಂದರೆ ಈ ಸಿನಿಮಾ ನಿರ್ಮಾಣ ಮಾಡಿದ್ದು ಡಾಕ್ಟರ್‌ಗಳ ತಂಡ. ಡಾಕ್ಟರ್‌ಗಳಾದ ರಕ್ಷಿತ್ ಕೆದಂಬಾಡಿ, ಅಂಜನ್, ರಾಜ್‌ಕುಮಾರ್ ಜಾನಕಿರಾಮನ್, ಅರ್ಚಿತ್ ಬೋಳೂರು ಮುಂತಾದ ವೈದ್ಯರ ತಂಡ ಗೆಳೆಯ ಡಾ.ರಾಘವೇಂದ್ರ ಬರೆದ (Dr.Raghavendra) ಸ್ಕ್ರಿಪ್ಟ್ ನಂಬಿ ಬಂಡವಾಳ ಹೂಡಿದ್ದಾರೆ.
ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment