Naveen Shankar: 'ಧನಂಜಯ್ ಹಾಗೂ ನನ್ನ ಸ್ನೇಹ ತುಂಬಾ ವರ್ಷಗಳದ್ದು, ಅವರು ನೀಡುತ್ತಿರುವ ಸಹಕಾರ ಅಪಾರ'

Naveen Shankar: 'ಧನಂಜಯ್ ಹಾಗೂ ನನ್ನ ಸ್ನೇಹ ತುಂಬಾ ವರ್ಷಗಳದ್ದು, ಅವರು ನೀಡುತ್ತಿರುವ ಸಹಕಾರ ಅಪಾರ'

Published : May 27, 2022, 08:03 PM IST

ಧನಂಜಯ್ ಹಾಗೂ ನನ್ನ ಸ್ನೇಹ ತುಂಬಾ ವರ್ಷಗಳದ್ದು. ನನಗೆ ಅವರು ನೀಡುತ್ತಿರುವ ಸಹಕಾರ ಅಪಾರ. ಸುನಿ ಅವರು ಕೂಡ ನನ್ನ ಮೊದಲ ಕಿರುಚಿತ್ರದ ಪೋಸ್ಟರ್ ಬಿಡುಗಡೆ ಮಾಡಿಕೊಟ್ಟಿದ್ದರು ಎಂದು 'ಕ್ಷೇತ್ರಪತಿ'  ಚಿತ್ರದ ನಾಯಕ ನವೀನ್ ಶಂಕರ್ ಹೇಳಿದರು.

ಸ್ಯಾಂಡಲ್‌ವುಡ್‌ನಲ್ಲಿ 'ಗುಲ್ಟು' ಸಿನಿಮಾದಿಂದ ಜನಪ್ರಿಯತೆ ಪಡೆದುಕೊಂಡ ನವೀನ್ ಶಂಕರ್. ಸದ್ಯ ಸಾಲು ಸಾಲು ಸಿನಿಮಾಗಳಲ್ಲಿ ನವೀನ್ ಬ್ಯುಸಿ ಆಗಿದ್ದಾರೆ. ಇದೀಗ ಸದ್ದಿಲ್ಲದೇ ಅವರು ಮತ್ತೊಂದು ಸಿನಿಮಾವನ್ನು ಮುಗಿಸಿದ್ದಾರೆ. ಈ ಸಿನಿಮಾಕ್ಕೆ 'ಕ್ಷೇತ್ರಪತಿ' ಎಂದು ಹೆಸರಿಡಲಾಗಿದ್ದು, ಅದರ ಈಚೆಗೆ ಫಸ್ಟ್‌ಲುಕ್‌ ರಿಲೀಸ್ ಆಗಿದೆ. ಧನಂಜಯ್ ಹಾಗೂ ನನ್ನ ಸ್ನೇಹ ತುಂಬಾ ವರ್ಷಗಳದ್ದು. ನನಗೆ ಅವರು ನೀಡುತ್ತಿರುವ ಸಹಕಾರ ಅಪಾರ. ಸುನಿ ಅವರು ಕೂಡ ನನ್ನ ಮೊದಲ ಕಿರುಚಿತ್ರದ ಪೋಸ್ಟರ್ ಬಿಡುಗಡೆ ಮಾಡಿಕೊಟ್ಟಿದ್ದರು. ಜನಾರ್ದನ ಚಿಕ್ಕಣ್ಣ ಅವರ ಸಹಕಾರ ಕೂಡ ಮರೆಯುವ ಹಾಗಿಲ್ಲ. ಇವರೆಲ್ಲ  ಬಂದಿರುವುದು ತುಂಬಾ ಸಂತೋಷವಾಗಿದೆ. ಶ್ರೀಕಾಂತ್ ಅವರು ಈ ಚಿತ್ರದ ಕಥೆ ಹೇಳಿದಾಗ, ನಾನು ಮನಸ್ಸಿನಲ್ಲಿ ಈ ರೀತಿಯ ಚಿತ್ರ ಮಾಡಬೇಕೆಂದುಕೊಳ್ಳುತ್ತಿದ್ದೆ. ಇದು ಸಹ ಅದೇ ರೀತಿಯ ಕಥೆಯಾಗಿದ್ದು ಕಾಕತಾಳೀಯ.

Naveen Shankar: "ಕ್ಷೇತ್ರಪತಿ" ಫಸ್ಟ್ ಲುಕ್ ಬಿಡುಗಡೆ ಮಾಡಿ ಶುಭಕೋರಿದ ಡಾಲಿ!

ನಂತರ ನಿರ್ಮಾಪಕರ ಹುಡುಕಾಟ. ಆನಂತರ ನಾವೇ ಕೆಲವು ಸ್ನೇಹಿತರು ಸೇರಿ ಒಂದು ನಿರ್ಮಾಣ ಸಂಸ್ಥೆ ಪ್ರಾರಂಭ‌ ಮಾಡಿ ಚಿತ್ರೀಕರಣ ಆರಂಭಿಸಿದ್ದೆವು. ಸಾಕಷ್ಟು ಜನ  ಸ್ನೇಹಿತರು ನಿರ್ಮಾಣಕ್ಕೆ ಜೊತೆಯಾದರು. ಖ್ಯಾತ ಸಂಗೀತ ನಿರ್ದೇಶಕ ರವಿ ಬಸ್ರೂರ್ ಕಥೆ ಕೇಳಿ ಸಂತೋಷಪಟ್ಟರು. ಸಂಗೀತ ನೀಡಲು ಒಪ್ಪಿದರು. ಇನ್ನೂ ಈ ಚಿತ್ರದ ಬಗ್ಗೆ ಹೇಳಬೇಕೆಂದರೆ ನಾನು  ಬಸವ ಎಂಬ ಪಾತ್ರದಲ್ಲಿ ಕಾಣಿಸಿಕೊಂಡಿದ್ದೀನಿ. ಬಸವ ಇಂಜಿನಿಯರಿಂಗ್ ವಿದ್ಯಾರ್ಥಿ. ‌ತನ್ನಿಷ್ಟಕ್ಕೆ ತಾನು ಇರುವಾತ. ಆತನ ಜೀವನದಲ್ಲಿ ನಡೆಯುವ ಅನಿರೀಕ್ಷಿತ ಘಟನೆಯೊಂದರ ಮೂಲಕ ಈತ ಹೋರಾಟದ ಹಾದಿ ಹಿಡಿಯಬೇಕಾಗುತ್ತದೆ.‌ ಈ ಬಸವ ನನ್ನೊಳಗೆ, ನಿಮ್ಮೊಳಗೆ ಇದ್ದಾನೆ.‌ ಕೆಲವರಿಗೆ ಅವನು ಜೀವಂತ. ಇನ್ನೂ ಕೆಲವರಿಗೆ ಆತ‌ ಇಲ್ಲ. ಚಿತ್ರ ನೋಡಿದ ಮೇಲೆ ಅದರ ಬಗ್ಗೆ ತಿಳಿಯುತ್ತದೆ ಎಂದು ಕಥೆಯ ಬಗ್ಗೆ ವಿವರಿಸಿದ ನವೀನ್ ಶಂಕರ್, ಚಿತ್ರದ ಚಿತ್ರೀಕರಣ ಪೂರ್ಣವಾಗಿದೆ.‌ ನಂತರದ ಚಟುವಟಿಕೆಗಳು ಬಿರುಸಿನಿಂದ ಸಾಗುತ್ತಿದೆ ಎಂದರು.

ಸಿನಿಮಾ ಹಂಗಾಮಾ ವೀಡಿಯೋಗಳನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ಕಿಸಿ: https://kannada.asianetnews.com/movies

07:32ಮರ್ಯಾದಾ ಪುರುಷೋತ್ತಮನಾಗಿ ಮನಗೆದ್ದ ರಣಬೀರ್; ಒಂದೇ ಒಂದು ಬ್ಯಾಕ್ ಶಾಟ್ ಮೂಲಕ ಮಿಂಚು ಹರಿಸಿದ ಯಶ್!
02:29ಎರಡನೇ ಬಾರಿ ತಾಯಿ ಆದ ಸೋನಂ ಕಪೂರ್: 'ಪೀಟರ್'​ ಬಿಡುಗಡೆಗೆ ಮಹೂರ್ತ ಫಿಕ್ಸ್
29:53ಜೋಗಿ ಪ್ರೇಮ್‌, ನೋರಾ ಫತೇಹಿ ಸರ್ಸೆ ಸರ್ಸೆ ಹಾಡು; ದೆಹಲಿ, ಮುಂಬೈನಲ್ಲಿ ಸಿನಿಮಾ ತಂಡದ ವಿರುದ್ಧ ಪ್ರತ್ಯೇಕ ದೂರು
02:11ಮತ್ತೊಂದು ವಿಭಿನ್ನ ಪಾತ್ರದಲ್ಲಿ ನಟಿಸಿ ಗೆದ್ದ ರಾಜ್! ಆಗ ಕಾವಿ, ಈಗ ಖಾಕಿ. ನಮ್ ಶೆಟ್ರು ವರ್ಸಟೈಲ್ ಆಕ್ಟರ್!
02:31ಉದ್ಯಮಿ ಅರವಿಂದ್ ರೆಡ್ಡಿಗೆ ನಟಿ ಸ್ನೇಹಿತನಿಂದ ಬೆದರಿಕೆ: ಹಲವು ವಿಚಾರಗಳನ್ನು ಬಾಯ್ಬಿಟ್ಟ ಸ್ಯಾಂಡಲ್‌​ವುಡ್ ನಟಿ!
03:16ಹೊಸ ಅವತಾರದಲ್ಲಿ ಗಿಲ್ಲಿ ನಟ! ಈ ಚಿತ್ರದಲ್ಲಿ ಬಿಗ್ ಬಾಸ್ ಫೇಮ್ ವರ್ಕ್ ಆಗುತ್ತಾ?
02:38ಕ್ರಾಂತಿ ಕಿಡಿ ಹಚ್ಚಿದ ಲ್ಯಾಂಡ್​ ಲಾರ್ಡ್​ ಗೆ ಮೆಚ್ಚುಗೆ; ಕ್ರೂರಿ ಲ್ಯಾಂಡ್ ಲಾರ್ಡ್ ಆಗಿ ರಾಜ್ ಶೆಟ್ಟಿ!
04:59ಟಾಕ್ಸಿಕ್ ಹಸಿಬಿಸಿ ದೃಶ್ಯದ ವಿರುದ್ದ ಕಂಪ್ಲೇಂಟ್; ಈ ವಿವಾದದ ಬಗ್ಗೆ ಯಶ್ ಏನಂತಾರೆ..?
03:36Golden Star Ganesh ಬಗ್ಗೆ ಇಂಥ ಚಿಂತಾಜನಕ ಸುದ್ದಿ ಹರಡಿದ್ಯಾಕೆ? ಯಾಕೆ ಹೀಗಾಯ್ತು?
05:51ದರ್ಶನ್ ಪತ್ನಿ ವಿಜಯಲಕ್ಷ್ಮೀ ವಿರುದ್ಧ ಅಶ್ಲೀಲ ಕಾಮೆಂಟ್: ಇಬ್ಬರ ಅರೆಸ್ಟ್, ಫ್ಯಾನ್ಸ್ ವಾರ್‌ಗೆ ಬ್ರೇಕ್
Read more