'ಕರಟಕ ಧಮನಕ'ಬಿಡುಗಡೆಗೆ ಕೌಂಟ್ ಡೌನ್!ಚಿಕ್ಕೋಡಿಯಲ್ಲಿ ಶಿವಣ್ಣ-ಪ್ರಭುದೇವ ಕ್ರೇಜ್..!

'ಕರಟಕ ಧಮನಕ'ಬಿಡುಗಡೆಗೆ ಕೌಂಟ್ ಡೌನ್!ಚಿಕ್ಕೋಡಿಯಲ್ಲಿ ಶಿವಣ್ಣ-ಪ್ರಭುದೇವ ಕ್ರೇಜ್..!

Published : Mar 07, 2024, 09:57 AM ISTUpdated : Mar 07, 2024, 09:58 AM IST

ಯೋಗರಾಜ್ ಭಟ್ ನಿರ್ದೇಶನದ ಭರ್ಜರಿ ಎಂಟರ್‌ಟೈನ್‌ಮೆಂಟ್‌ ಸಿನಿಮಾ ಕರಟಕ ಧಮನಕ. ಈ ಸಿನಿಮಾ ಹಾಡುಗಳು ಹಿಟ್ ಆಗಿವೆ. ಟೀಸರ್ ಟ್ರೇಲರ್ ಟ್ರೆಂಡ್ ಆಗಿದೆ. ಅದಕ್ಕೂ ಮಿಗಿಲಾಗಿ ಈ ಸಿನಿಮಾದಲ್ಲಿ ಪೇರ್ ಆಗಿರೋದು ಸೆಂಚುರಿ ಸ್ಟಾರ್ ಶಿವಣ್ಣ ಹಾಗೂ ಡ್ಯಾನ್ಸಿಂಗ್ ಸ್ಟಾರ್ ಪ್ರಭುದೇವ. ಈ ಕಿಲಾಡಿ ಜೋಡಿಯ ಕರಟಕ ಧಮನಕ ಸಿನಿಮಾ ಇದೇ ವಾರ ಬೆಳ್ಳಿ ತೆರೆ ಮೇಲೆ ಎಂಟ್ರಿ ಕೊಡಲಿದೆ.

ಇತ್ತ ಕಡೆ ಕರಟಕ ಧಮನಕ ರಿಲೀಸ್‌ಗೆ ಕೌಂಟ್ ಡೌನ್ ಸ್ಟಾರ್ಟ್ ಆಗಿದ್ರೆ, ಅತ್ತ ಕಡೆ ಬೆಳಗಾವಿಯ(Belagavi) ಚಿಕ್ಕೋಡಿಯಲ್ಲಿ ಶಿವಣ್ಣ(Shivarajkumar) ಪ್ರಭುದೇವ ಕ್ರೇಜ್ ಹೈ ಆಗಿತ್ತು. ಕರಟಕ ಧಮಕನ(Karataka Damanaka) ಬಿಡುಗಡೆಗೆ ಇನ್ನೊಂದು ದಿನ ಭಾಕಿ. ಹೀಗಾಗಿ ಸಿನಿಮಾ ಪ್ರಚಾರಕ್ಕೆಂದು ನಿರ್ದೇಶಕ ಯೋಗರಾಜ್ ಭಟ್ ಮತ್ತು ಟೀಂ ಬೆಳಗಾವಿಯ ಚಿಕ್ಕೋಡಿಗೆ ಹೋಗಿದ್ರು. ಕಟಕಟ ಧಮನಕ ಸಿನಿಮಾ ಟೀಂ ಅಂದಮೇಲೆ ಅಲ್ಲಿ ಶಿವಣ್ಣ ಹಾಗೂ ಪ್ರಭುದೇವ ಬರುತ್ತಾರೆ ಅಂತ ಜನವೋ ಜನ ಸೇರಿದ್ರು. ಆದ್ರೆ ಕಾರಣಾಂತರದಿಂದ ಶಿವಣ್ಣ ಪ್ರಭುದೇವ ಗೈರಾಗಿದ್ರು. ಆದ್ರೆ ನಿರ್ದೇಶಕ ಯೋಗರಾಜ್ ಭಟ್ ಹಾಗು ನಟ ದೊಡ್ಡಣ್ಣ ಮತ್ತು ನಟಿ ನಿಶ್ವಿಕಾ ನಾಯ್ಡು ಪ್ರಚಾರ ಕಾರ್ಯದಲ್ಲಿ ಭಾಗಿ ಆಗಿದ್ರು. ಕರಟಕ ಧಮನಕ ಪಂಚತಂತ್ರ ಕಥೆಯ ಸಿನಿಮಾ. ಕರಕಟನಾಗಿ ಪ್ರಭುದೇವ ನಟಿಸಿದ್ರೆ ಧಮನಕನಾಗಿ ಶಿವಣ್ಣ ಬಣ್ಣ ಅಭಿನಯಿಸಿದ್ದಾರೆ. ನಟಿ ಪ್ರಿಯಾ ಆನಂದ್ ಶಿವಣ್ಣನಿಗೆ ಜೋಡಿಯಾದ್ರೆ, ನಿಶ್ವಿಕಾ ನಾಯ್ಡು ಪ್ರಭುದೇವಗೆ ಕಾಂಬಿನೇಷನ್. ಈ ಅಪರೂಪದ ಕಿಲಾಡಿ ಜೋಡಿಯ ಕರಟಕ ದಮನಕನಿಗೆ ರಾಕ್ಲೈನ್ ವೆಂಕಟೇಶ್ ಬಂಡವಾಳ ಹೂಡಿದ್ದಾರೆ. ಮಾರ್ಚ್ 8ಕ್ಕೆ ಕರಟಕ ಧಮನಕ ದರ್ಶನ ಆಗಲಿದೆ. 

ಇದನ್ನೂ ವೀಕ್ಷಿಸಿ:  ಉಪ್ಪಿ ಯುಐ ಸಿನಿಮಾ ಹಾಡಿನಲ್ಲಿ ಟ್ರೋಲ್ ಸಾಹಿತ್ಯ..! ಟ್ರೋಲರ್ಸ್‌ನನ್ನೇ ಟ್ರೋಲ್ ಮಾಡಿದ ರಿಯಲ್ ಸ್ಟಾರ್!

04:57ಅಪ್ಪನ ಆಸೆ.. ಮಗಳ ಕನಸು.. ಅಪ್ಪ ಇಟ್ಟ ಹೆಸರಲ್ಲೇ ಬಿಜಿನೆಸ್​ಶುರು ಮಾಡಿದ ಅಪ್ಪು ಪುತ್ರಿ ವಂದಿತಾ..!
02:36Yash: ನಟ ಯಶ್​ ಹೃದಯವಂತ, ಜೊತೆ ಕೆಲಸ ಮಾಡಿದ್ದು ಅದ್ಭುತ ಅನುಭವ: ತಾರಾ ಸುತಾರಿಯಾ
08:02Toxic Movie: ಲಸ್ಟ್ ಸ್ಟೋರೀಸ್, ಕಬೀರ್ ಸಿಂಗ್ ಆಯ್ತು; ಮದುವೆಯಾಗಿ ಮಗು ಆದ್ರೂ ಕಮ್ಮಿಯಾಗಿಲ್ಲ Kiara Advani ಬ್ಯೂಟಿ
09:56Yash Toxic Movie Tabaahi Song: ಯಶ್‌, ಕಿಯಾರಾ ಅಡ್ವಾಣಿ ಕೆಮಿಸ್ಟ್ರಿಗೆ ದಂಗಾದ ಇಂಟರ್‌ನೆಟ್‌ ಜಗತ್ತು!
04:04ಶಿವಣ್ಣ-ಧನಂಜಯ್ ಮತ್ತೊಮ್ಮೆ ಜೊತೆಯಾಟ.. ಹೇಮಂತ್ ರಾವ್ ನಿರ್ದೇಶನದಲ್ಲಿ '...ಡ್ರೀಮ್ ಥಿಯೇಟರ್..!
09:57Darshan Thoogudeepa: ಡಿ ಗ್ಯಾಂಗ್ ರಹಸ್ಯ- ನಟ ದರ್ಶನ್ ಬಚಾವ್ ಮಾಡೋಕೆ ನಡಿತಿರೋ ಸಾಕ್ಷ್ಯನಾಶದ ಸೂತ್ರಧಾರಿ ಯಾರು?
05:49Toxic: Ladies & Ladies Teaser: 3 ಟೀಸರ್.. 100 ಮ್ಯಾಟರ್: ಇದ್ರಲ್ಲಿ ಲೇಡೀಸ್ ಗ್ಯಾಂಗ್ ಆರ್ಭಟ!
07:55Toxic: ಟಾಕ್ಸಿಕ್ ಸೌಂದರ್ಯ & ಸಮರ; ಲೇಡೀಸ್ ಸ್ಪೆಷಲ್ ಟೀಸರ್ ಸೆನ್ಸೇಷನ್‌ ಏನ್ ಹೇಳ್ತಿದೆ?
22:40ಗೆಳತಿ ಮನೆಯಲ್ಲಿ Vaishak​​ ನೇಣಿಗೆ ಶರಣಾಗಿದ್ದೇಕೆ ? ದುರಂತದ ಆ ರಾತ್ರಿ ಕೃಷಿ ತಾಪಂಡ ಮನೆಯಲ್ಲಿ ನಡೆದಿದ್ದೇನು?
06:59ಜಿಮ್ ಮಾಡ್ತಿದ್ದ ದರ್ಶನ್ 'ಯೋಗ' ಮಾಡುವಂತಾಗಿದ್ದು ಹೀಗೆ.. ಅವರು ಹೇಳಿಲ್ಲಾ ಅಂದ್ರೆ ಇವರು ಮಾಡ್ತಿರ್ಲಿಲ್ಲ!?
Read more