Jun 27, 2023, 8:09 AM IST
ಬಾದ್ಷಾ ಕಿಚ್ಚ ಸುದೀಪ್ ಭಾರತೀಯ ಚಿತ್ರರಂಗದಲ್ಲಿ 25 ವರ್ಷದಿಂದ ವರ್ಕ್ ಮಾಡ್ತಿದ್ದಾರೆ. ಕಿಚ್ಚನನ್ನ ಹೊರತುಪಡಿಸಿ ಸುದೀಪ್ ಕುಟುಂಬದಿಂದ ಮತ್ತಿನ್ಯಾರು ಬಣ್ಣದ ಜಗತ್ತಿಗೆ ಎಂಟ್ರಿ ಕೊಟ್ಟಿರಲಿಲ್ಲ. ಇದೀಗ ಅಭಿನಯ ಚಕ್ರವರ್ತಿಯ ಹೆಸರನ್ನ ಉಳಿಸಿ ಬೆಳೆಸಲು ಜ್ಯೂ. ಸುದೀಪ್ ಬಣ್ಣದ ಜಗತ್ತಿಗೆ ಎಂಟ್ರಿ ಆಗಿದ್ದಾರೆ. ನಮ್ಮತ್ರ ನೀಯತ್ತಾಗಿಲ್ಲ ಅಂದ್ರೆ ನೀನೇ ಇರಲ್ಲ ಅಂತ ವಾರ್ನಿಂಗ್ ಕೊಡ್ತಾ ಸ್ಯಾಂಡಲ್ವುಡ್ಗೆ ಕಾಲಿಟ್ಟಿದ್ದಾರೆ ಜ್ಯೂ ಕಿಚ್ಚ ಸಂಚಿತ್.ಕಿಚ್ಚ ಸುದೀಪ್ ಅಕ್ಕನ ಮಗ ಸಂಚಿತ್ ಸಿನಿಮಾ ರಂಗಕ್ಕೆ ಎಂಟ್ರಿ ಆಗ್ತಾರೆ ಅನ್ನೋ ಸುದ್ದಿ ಕಳೆದ ನಾಲ್ಕೈದು ವರ್ಷದಿಂದಲು ಇತ್ತು. ಆದ್ರೆ ಅದಕ್ಕೆ ಸರಿಯಾದ ಗಳಿಗೆ ಕೂಡಿ ಬಂದಿರಲಿಲ್ಲ. ಈಗ ಸಂಚಿತ್ ಜಿಮ್ಮಿ ಅನ್ನೋ ಸಿನಿಮಾ ಮೂಲಕ ರಗಡ್ ಆಗಿ ಎಂಟ್ರಿ ಕೊಟ್ಟಿದ್ದಾರೆ. ಬಿಗ್ ಸ್ಕ್ರೀನ್ ಮೇಲೆ ಆರಡಿ ಎತ್ತರದ ಹುಡುಗ ಸಂಚಿತ್ ಖದರ್ ಹೇಗಿರುತ್ತೆ ಅಂತ ಜಿಮ್ಮಿಯ ಇಂಟ್ರಡಕ್ಷನ್ ಟೀಸರ್ ಹೇಳುತ್ತಿದೆ. ಸಂಚಿತ್ ಬಾಡಿ, ನಡೆಯುವ ಶೈಲಿ, ಡೈಲಾಗ್ ಡೆಲಿವರಿ ಎಲ್ಲವೂ ಇಂಪ್ರೆಸ್ ಮಾಡ್ತಿದೆ. ಸಂಚಿತ್ ಪಕ್ಕಾ ರೆಡಿಯಾಗೆ ಇಂಟ್ರಸ್ಟ್ರಿಗೆ ಎಂಟ್ರಿ ಕೊಟ್ಟಿದ್ದಾರೆ ಅನ್ನೋದು ಗೊತ್ತಾಗುತ್ತೆ. ಸಂಚಿತ್ ಧ್ವನಿಯಂತು ಕಿಚ್ಚ ಸುದೀಪ್ ಧ್ವನಿಯನ್ನೇ ಹೂಲುತ್ತಿದ್ದು, ಬಾದ್ ಷಾನ ಫ್ಯಾನ್ಸ್ ಫುಲ್ ಖುಷ್ ಆಗ್ತಿದ್ದಾರೆ.
ಇದನ್ನೂ ವೀಕ್ಷಿಸಿ: ಇಂದಿನ ದಿನ ಭವಿಷ್ಯ: ತೊಂದರೆ ಎಂಬ ರಾಕ್ಷಸನ ಸಂಹಾರಕ್ಕಾಗಿ ದುರ್ಗಾ ಆರಾಧನೆ ಮಾಡಿ