ಕಿರುತೆರೆ-ಬೆಳ್ಳಿತೆರೆಯಲ್ಲಿ ಕಿಚ್ಚ ಸುದೀಪ್ ಡಬಲ್ ಕಮಾಲ್: ಬಿಗ್ ಬಾಸ್ ಜೊತೆ ಜೊತೆಗೆ ಮಾರ್ಕ್ ಶೂಟಿಂಗ್!

ಕಿರುತೆರೆ-ಬೆಳ್ಳಿತೆರೆಯಲ್ಲಿ ಕಿಚ್ಚ ಸುದೀಪ್ ಡಬಲ್ ಕಮಾಲ್: ಬಿಗ್ ಬಾಸ್ ಜೊತೆ ಜೊತೆಗೆ ಮಾರ್ಕ್ ಶೂಟಿಂಗ್!

Published : Sep 08, 2025, 02:24 PM IST

ಬಿಗ್ ಬಾಸ್ ಮುಗಿಯೋ ಮೊದಲೇ ಮಾರ್ಕ್ ಮೂಲಕ ಬಿಗ್ ಸ್ಕ್ರೀನ್​​ನಲ್ಲೂ ಕಿಚ್ಚ ಅಬ್ಬರಿಸಲಿದ್ದಾರೆ. ಇದೇ ಸೆಪ್ಟೆಂಬರ್ 28ರಿಂದ ಬಿಗ್ ಬಾಸ್ ಸೀಸನ್-12 ಶುಭಾರಂಭ ಆಗ್ತಾ ಇದೆ.

ಈ ತಿಂಗಳ ಅಂತ್ಯದಿಂದ ಬಿಗ್ ಬಾಸ್ ಸೀಸನ್ -12 ಶುರುವಾಗಲಿದೆ. ಕಿಚ್ಚ ಸುದೀಪ್ ನಿರೂಪಣೆ ಮಾಡ್ಲಿಕ್ಕೆ ನಾನ್ ರೆಡಿ ಅಂತ ಸಜ್ಜಾಗಿ ನಿಂತಿದ್ದಾರೆ. ಮುಂದಿನ ನೂರು ದಿನ ಕಿಚ್ಚನ ಕಿರುತೆರೆ ಕಮಾಲ್ ನಡೆಯಲಿದೆ. ಬಿಗ್ ಬಾಸ್ ಮುಗಿಯೋ ಮೊದಲೇ ಮಾರ್ಕ್ ಮೂಲಕ ಬಿಗ್ ಸ್ಕ್ರೀನ್​​ನಲ್ಲೂ ಕಿಚ್ಚ ಅಬ್ಬರಿಸಲಿದ್ದಾರೆ. ಇದೇ ಸೆಪ್ಟೆಂಬರ್ 28ರಿಂದ ಬಿಗ್ ಬಾಸ್ ಸೀಸನ್-12 ಶುಭಾರಂಭ ಆಗ್ತಾ ಇದೆ. ಸುದೀಪ್ ಮತ್ತೆ ವಾರಾಂತ್ಯಕ್ಕೆ ಹಾಜರಾಗಿ ಕಿಚ್ಚನ ಕಟಕಟೆ ನಡೆಸಿಕೊಡಲಿದ್ದಾರೆ. ಸದ್ಯ ಬಿಗ್ ಬಾಸ್ ಹೊಸ ಪ್ರೋಮೋ ರಿಲೀಸ್ ಆಗಿದ್ದು ಕಿಚ್ಚ ನಾನ್ ರೆಡಿ ಅಂದಿದ್ದಾರೆ. ಈ ಸಾರಿಯ ಬಿಗ್ ಬಾಸ್​ ಶೋಗೆ ಕಿಚ್ಚ ಸುದೀಪ್ ಸಾಕಷ್ಟು ಇನ್​ಪುಟ್ಸ್ ಕೊಟ್ಟಿದ್ದು ಶೊ ಮತ್ತಷ್ಟು ರೋಚಕವಾಗಿರುತ್ತೆ ಅಂತ ಹೇಳಲಾಗ್ತಾ ಇದೆ. ಈಗಾಗ್ಲೇ ಕಲರ್ಸ್ ವಾಹಿನಿ ಬೇರೆ ಬೇರೆ ಕ್ಷೇತ್ರಗಳ ಸ್ಪರ್ಧಿಗಳನ್ನ ಫೈನಲ್ ಕೂಡ ಮಾಡಿದೆಯಂತೆ.

ಹೌದು ಬಿಗ್ ಬಾಸ್ ಚಿತ್ರೀಕರಣದ ನಡುವೆಯೇ ಸುದೀಪ್ ಮಾರ್ಕ್ ಶೂಟಿಂಗ್​ನಲ್ಲಿ ತೊಡಗಿಕೊಳ್ಳಲಿದ್ದಾರೆ. ಈಗಾಗ್ಲೇ ಅನೌನ್ಸ್ ಮಾಡಿರೋ ಹಾಗೆ ಮಾರ್ಕ್ ಕ್ರಿಸ್ ಮಸ್​​ಗೆ ತೆರೆಗೆ ಬರೋದು ಫಿಕ್ಸ್ ಆಗಿದೆ. ಸೋ ಕಿಚ್ಚ ಬಿಗ್ ಬಾಸ್ ನಡುವೆಯೇ ಮಾರ್ಕ್ ಶೂಟಿಂಗ್ ಮುಗಿಸಿಕೊಡಲಿದ್ದಾರೆ. ಡಿಸೆಂಬರ್ ಅಂತ್ಯದ ಹೊತ್ತಿಗೆ ಬಿಗ್ ಬಾಸ್ ಕೊನೆಯ ಹಂತಕ್ಕೆ ಬಂದಿರುತ್ತೆ. ಅದೇ ಟೈಮ್​ಗೆ ಮ್ಯಾಕ್ಸ್ ರಿಲೀಸ್ ಆಗಲಿದೆ. ಸೋ ಕಿಚ್ಚನ ಕಿರುತೆರೆಯ ಕಮಾಲ್ ಕೊನೆಯಾಗುವಷ್ಟರಲ್ಲಿ ಬಿಗ್ ಸ್ಕ್ರೀನ್ ಮೇಲೆ ಸುದೀಪ್ ಧಮಾಕಾ ಶುರುವಾಗಲಿದೆ. ಡಿಸೆಂಬರ್ 12ಕ್ಕೆ ದರ್ಶನ್ ನಟನೆಯ ದಿ ಡೆವಿಲ್ ರಿಲೀಸ್ ಫಿಕ್ಸ್ ಆಗಿದೆ. ದರ್ಶನ್ ಜೈಲಿನಲ್ಲಿದ್ದು ಈ ಸಿನಿಮಾಗೆ ಭರ್ಜರಿ ಪ್ರಚಾರ ಮಾಡಿ ರಿಲೀಸ್ ಮಾಡೋದಕ್ಕೆ ಚಿತ್ರತಂಡ ಸಜ್ಜಾಗಿದೆ.

ಇನ್ನೂ ಶಿವರಾಜ್​ಕುಮಾರ್, ಉಪೇಂದ್ರ,  ರಾಜ್ ಶೆಟ್ಟಿ, ನಟಿಸಿರೋ ಮಲ್ಟಿಸ್ಟಾರರ್ ಮೂವಿ 45 ಡಿಸೆಂಬರ್ 25ಕ್ಕೆ ರಿಲೀಸ್ ಆಗಲಿದೆ. ಈ ಸಿನಿಮಾ ಕೂಡ ದೊಡ್ಡ ನಿರೀಕ್ಷೆಯನ್ನ ಮೂಡಿಸಿದೆ. ಈ ಎರಡರ ನಡುವೆ ನಾನು ಕೂಡ ಬರ್ತಿನಿ ಅಂತಿದ್ದಾರೆ ಕಿಚ್ಚ. ಅಸಲಿಗೆ ಕಳೆದ ವರ್ಷ ಕ್ರಿಸ್ ಮಸ್​​ಗೆ ತೆರೆಗೆ ಬಂದ ಮ್ಯಾಕ್ಸ್ ಸಿನಿಮಾ ದೊಡ್ಡ ಯಶಸ್ಸು ಕಂಡಿತ್ತು. ಸೋ ಈ ವರ್ಷ ಕ್ರಿಸ್ ಮಸ್ ಮಿಸ್ ಮಾಡಂಗಿಲ್ಲ ಅಂತಿದ್ದಾರೆ ಕಿಚ್ಚ ಸುದೀಪ್. ಸೋ ಮಾರ್ಕ್ ಚಿತ್ರೀಕರಣ ಭರದಿಂದ ನಡೀತಾ ಇದ್ದು ಕ್ರಿಸ್​ ಮಸ್​​ ಗೆ ರಿಲೀಸ್ ಟಾರ್ಗೆಟ್ ಸೆಟ್ ಮಾಡಿಕೊಂಡಿದೆ. ಸೋ ಸುದೀಪ್ ಬಿಗ್ ಬಾಸ್ ನಡು ನಡುವೆ ಮಾರ್ಕ್ ಶೂಟಿಂಗ್​ನಲ್ಲಿ ಭಾಗಿಯಾಗಲಿದ್ದಾರೆ. ಈ ವರ್ಷದ ಸೆಕೆಂಡ್ ಹಾಫ್ ಕಿರುತೆರೆ ಮತ್ತು ಬೆಳ್ಳಿತೆರೆಯಲ್ಲಿ ಕಿಚ್ಚನಿಂದ ಅನ್​ಲಿಮಿಟೆಡ್ ಎಂಟರ್​ಟೈನ್​ಮೆಂಟ್ ಸಿಗಲಿದೆ.

02:11ಮತ್ತೊಂದು ವಿಭಿನ್ನ ಪಾತ್ರದಲ್ಲಿ ನಟಿಸಿ ಗೆದ್ದ ರಾಜ್! ಆಗ ಕಾವಿ, ಈಗ ಖಾಕಿ. ನಮ್ ಶೆಟ್ರು ವರ್ಸಟೈಲ್ ಆಕ್ಟರ್!
02:31ಉದ್ಯಮಿ ಅರವಿಂದ್ ರೆಡ್ಡಿಗೆ ನಟಿ ಸ್ನೇಹಿತನಿಂದ ಬೆದರಿಕೆ: ಹಲವು ವಿಚಾರಗಳನ್ನು ಬಾಯ್ಬಿಟ್ಟ ಸ್ಯಾಂಡಲ್‌​ವುಡ್ ನಟಿ!
03:16ಹೊಸ ಅವತಾರದಲ್ಲಿ ಗಿಲ್ಲಿ ನಟ! ಈ ಚಿತ್ರದಲ್ಲಿ ಬಿಗ್ ಬಾಸ್ ಫೇಮ್ ವರ್ಕ್ ಆಗುತ್ತಾ?
02:38ಕ್ರಾಂತಿ ಕಿಡಿ ಹಚ್ಚಿದ ಲ್ಯಾಂಡ್​ ಲಾರ್ಡ್​ ಗೆ ಮೆಚ್ಚುಗೆ; ಕ್ರೂರಿ ಲ್ಯಾಂಡ್ ಲಾರ್ಡ್ ಆಗಿ ರಾಜ್ ಶೆಟ್ಟಿ!
04:59ಟಾಕ್ಸಿಕ್ ಹಸಿಬಿಸಿ ದೃಶ್ಯದ ವಿರುದ್ದ ಕಂಪ್ಲೇಂಟ್; ಈ ವಿವಾದದ ಬಗ್ಗೆ ಯಶ್ ಏನಂತಾರೆ..?
03:36Golden Star Ganesh ಬಗ್ಗೆ ಇಂಥ ಚಿಂತಾಜನಕ ಸುದ್ದಿ ಹರಡಿದ್ಯಾಕೆ? ಯಾಕೆ ಹೀಗಾಯ್ತು?
05:51ದರ್ಶನ್ ಪತ್ನಿ ವಿಜಯಲಕ್ಷ್ಮೀ ವಿರುದ್ಧ ಅಶ್ಲೀಲ ಕಾಮೆಂಟ್: ಇಬ್ಬರ ಅರೆಸ್ಟ್, ಫ್ಯಾನ್ಸ್ ವಾರ್‌ಗೆ ಬ್ರೇಕ್
02:06ಬಾಕ್ಸಾಫೀಸ್​​ನಲ್ಲಿ ದಾಖಲೆ ಬರೆದ ಧುರಂಧರ್: ವೆಬ್​ ಸರಣಿ ನಿರ್ದೇಶನಕ್ಕೆ ಕೈ ಹಾಕಿದ ಪಿ.ಸಿ.ಶೇಖರ್
05:38ಒಂದೇ ಒಂದು ಹಾಡಿನಿಂದ ಟ್ರೆಂಡಿಂಗ್ ಟಾಪ್​ಸಿಂಗರ್​ಆಗ್ಬಿಟ್ರಾ ಸಾನ್ವಿ? ಅಪ್ಪನಂತೇ ಮಗಳು, ಸಂಗೀತದ ಬೆರಗು..!
03:37ಇತ್ತ ಡೆವಿಲ್.. ಅತ್ತ ಟ್ರಯಲ್.. ದಾಸನಿಗೆ ಟ್ರಬಲ್: ಪವಿತ್ರಾ ಗೌಡಗೂ ಟಿವಿ ಕೊಡಿ, ವಕೀಲರ ಮನವಿ!
Read more