Jul 30, 2023, 2:38 PM IST
ಭಾರತೀಯ ಚಿತ್ರರಂಗದ ಬಾದ್ ಷಾ ಕಿಚ್ಚ ಸುದೀಪ್ (Kiccha Sudeep) ತಿರುಪತಿ ತಿಮ್ಮಪ್ಪನ ದರ್ಶನ( Tirupati Thimmappa) ಪಡೆದಿದ್ದಾರೆ. ತಿರುಪತಿಗೆ ಭೇಟಿ ಕೊಟ್ಟಿರೋ ಕಿಚ್ಚ ತನ್ನ ಮುಂದಿನ ಹೆಜ್ಜೆಗೆ ಒಳ್ಳೆಯದಾಗಲಿ ಅಂತ ಬೇಡಿದ್ದಾರೆ. ಕಿಚ್ಚ ಕಳೆದ ಒಂದು ತಿಂಗಳಿನಿಂದ ನಿರ್ಮಾಪಕ ಎಮ್ ಎನ್ ಕುಮಾರ್ವ ಜೊತೆಗಿನ ಕಾಲ್ ಶೀಟ್ ವಿಚಾರಕ್ಕೆ ಭಾರಿ ಸುದ್ದಿಯಾಗಿದ್ರು. ಆದ್ರೆ ಅದರ ಬಗ್ಗೆ ತಲೆ ಕೆಡಿಸಿಕೊಳ್ಳದ ಸುದೀಪ್ ತನ್ನ ಸಿನಿಮಾ ಕಡೆ ಕಾನ್ಸಟ್ರೇಟ್ ಮಾಡುತ್ತಿದ್ರು. ಕಿಚ್ಚ46 ಸಿನಿಮಾದ(Kichha 46 movie) ಗ್ಲಿಮ್ಸ್ ಹೊರ ಬಂದಿದ್ದು, ಆಗಸ್ಟ್ ಒಂದರಿಂದ ಸುದೀಪ್ ಆ ಸಿನಿಮಾ ಶೂಟಿಂಗ್ಗೆ ಹೈದರಾಬಾದ್ನಲ್ಲಿ 65 ದಿನ ಜಾಂಡಾ ಹೂಡಲಿದ್ದಾರೆ. ಆದ್ರೆ ಅದಕ್ಕೂ ಮೊದಲು ತಿಮ್ಮಪ್ಪನ ಆಶೀರ್ವಾದ ಬೇಡಿರೋ ಅಭಿನಯ ಚಕ್ರವರ್ತಿ ಸುದೀಪ್ ತಿರುಪತಿಗೆ ತೆರಳಿದ್ದಾರೆ. ತಿರುಪತಿಯಲ್ಲಿ ಸುದೀಪ್ ನೋಡಿದ ಅಭಿಮಾನಿಗಳು ಕಿಚ್ಚನ ಜೊತೆ ಫೋಟೋ ಕ್ಲಿಕ್ಕಿಸಿಕೊಳ್ಳಲು ಮುಗಿ ಬಿದ್ದಿದ್ದು, ಆ ವೀಡಿಯೋ ವೈರಲ್ ಆಗುತ್ತಿದೆ.
ಇದನ್ನೂ ವೀಕ್ಷಿಸಿ: ಹುಡುಗಿಯರ ಹಾರ್ಟ್ ಫೇವರೇಟ್ ಮೊಟ್ಟೆ ಸ್ಟಾರ್: ಇನ್ಫೋಸಿಸ್ ಹೆಣ್ಮಕ್ಕಳ ಜೊತೆ ರಾಜ್ ಬಿ ಶೆಟ್ಟಿ ಮಸ್ತ್ ಡಾನ್ಸ್ !