Dec 17, 2024, 9:57 PM IST
ಬಾದ್ ಷಾ ಕಿಚ್ಚ ಸುದೀಪ್ ಮ್ಯಾಕ್ಸ್ ಸಿನಿಮಾದಿಂದ ಮ್ಯಾಕ್ಸಿಮಮ್ ಮನೋರಂಜನೆ ಕೊಡೋಕೆ ಸಜ್ಜಾಗಿದ್ದಾರೆ. ಕ್ರಿಸ್ಮಸ್ಗಡ ಮ್ಯಾಕ್ಸ್ ತೆರೆ ಮೇಲೆ ಬರುತ್ತೆ. ಇದೀಗ ಮ್ಯಾಕ್ಸ್‌ನ ಸಾಂಗ್ ರಿಲೀಸ್ ಆಗಿದೆ. ಈ ಹಾಡಿನಲ್ಲಿ ಮ್ಯಾಕ್ಸ್ ಕಥೆಯ ಸುಳಿವು ಸಿಕ್ಕಿದೆ.
ಮ್ಯಾಕ್ಸ್ ಈ ವರ್ಷ ಸ್ಯಾಂಡಲ್ವುಡ್ನಲ್ಲಿ ರಿಲೀಸ್ ಆಗೋ ಕೊನೆಯ ಸಿನಿಮಾ. ಡಿಸೆಂಬರ್ ಲಕ್ ಮ್ಯಾಕ್ಸ್ಗೆ ಕುದುರುತ್ತಾ.? ಅದೇ ರೀಲ್ ಮೇಲಿರೋ ಸತ್ಯ. ಆ ಸಕ್ಸಸ್ ನಂಬಿಕೆಯಲ್ಲೇ ಇದ್ದಾರೆ ಬಾದ್ ಷಾ. ಇದೀಗ ಮ್ಯಾಕ್ಸ್ ಮನೋರಂಜನೆಗೆ ಕೌಂಟ್ಡೌನ್ ಸ್ಟಾರ್ಟ್ ಆಗಿದೆ. ಖಾಕಿ ಹಾಕಿ ಕೈಯಲ್ಲಿ ಲಾಟಿ ಹಿಡಿದಿರೋ ಕಿಚ್ಚನ ಮ್ಯಾಕ್ಸ್ ಸಾಂಗ್ ರಿಲೀಸ್ ಆಗಿದೆ.
ಮ್ಯಾಕ್ಸ್ ನಲ್ಲಿ ಒಂದೇ ರಾತ್ರಿಯಲ್ಲಿ ನಡೆಯೋ ಕಥೆ ಇದೆ. ಅರ್ಜುನ್ ಮಹಾಕ್ಷಯ್ ಅನ್ನೋ ಇನ್ಸ್ಪೆಕ್ಟ್ ರೋಲ್ ಕಿಚ್ಚನದ್ದು. ಸಸ್ಪೆಂಡ್ ಆಗಿ ಎರಡು ತಿಂಗಳ ಬಳಿಕ ಹೊಸ ಪೊಲೀಸ್ ಠಾಣೆಗೆ ಕೆಲಸಕ್ಕೆ ಬರೋ ಇನ್ಸ್ಪೆಕ್ಟರ್ ಅರ್ಜುನ್ ಮಹಾಕ್ಷಯ್ಗೆ ಹೊಸ ಠಾಣೆಯಲ್ಲಿ ದೊಡ್ಡ ಸಮಸ್ಯೆಯೊಂದು ಎದುರಾಗುತ್ತೆ. ಆ ಸಮಸ್ಯೆಯನ್ನ ಹೇಗೆ ಬೇದಿಸುತ್ತಾನೆ ಅನ್ನೋದೆ ಮ್ಯಾಕ್ಸ್ ಸ್ಟೋರಿ. ಆದ್ರೆ ಈಗ ಬಂದಿರೋ ಹಾಡಿನಲ್ಲಿ ಕಳ್ಳ ನರಿ ಮತ್ತು ಸಿಂಹದ ಕಥೆ ಹೇಳಿದ್ದಾರೆ. ಇಲ್ಲಿ ನರಿ ಯಾರು ಸಿಂಹ ಯಾರು ಅನ್ನೋದು ಮ್ಯಾಕ್ಸ್ ಸಿನಿಮಾದಲ್ಲೇ ನೋಡಬೇಕು.