Max Movie:ಕ್ರಿಕೆಟ್ ಮೈದಾನದಿಂದ 'ಮ್ಯಾಕ್ಸ್' ಮೈದಾನಕ್ಕೆ ಕಿಚ್ಚ..! ಕ್ಲೈಮ್ಯಾಕ್ಸ್ ಶೂಟಿಂಗ್‌ನಲ್ಲಿ ಬ್ಯುಸಿಯಾದ ಬಾದ್‌ ಷಾ..!

Max Movie:ಕ್ರಿಕೆಟ್ ಮೈದಾನದಿಂದ 'ಮ್ಯಾಕ್ಸ್' ಮೈದಾನಕ್ಕೆ ಕಿಚ್ಚ..! ಕ್ಲೈಮ್ಯಾಕ್ಸ್ ಶೂಟಿಂಗ್‌ನಲ್ಲಿ ಬ್ಯುಸಿಯಾದ ಬಾದ್‌ ಷಾ..!

Published : Dec 28, 2023, 10:33 AM IST

ಭಾರತೀಯ ಚಿತ್ರರಂಗದ ಬಾದ್ ಷಾ ಕಿಚ್ಚ ಸುದೀಪ್ ಮತ್ತೆ ಸಿನಿಮಾದಲ್ಲಿ ಆ್ಯಕ್ಟೀವ್ ಆಗಿದ್ದಾರೆ. ಕಳೆದ 15 ದಿನದಿಂದ ಕ್ರಿಕೆಟ್ ಹಬ್ಬ ಮಾಡುತ್ತಿದ್ದ ಕಿಚ್ಚ ಈಗ ಕ್ರಿಕೆಟ್ ಮೂಡ್ನಿಂದ ಮ್ಯಾಕ್ಸ್ ಮೂಡ್‌ಗೆ ಜಾರಿದ್ದಾರೆ. ಕಿಚ್ಚನ ಮ್ಯಾಕ್ಸ್ ಶೂಟಿಂಗ್ ಮತ್ತೆ ಶುರುವಾಗ್ತಿದೆ. ಅಷ್ಟೆ ಅಲ್ಲ ಮ್ಯಾಕ್ಸ್ ರಿಲೀಸ್‌ಗೂ ದೊಡ್ಡ ಪ್ಲಾನ್ ಆಗಿದೆ. 

ಭಾರತೀಯ ಚಿತ್ರರಂಗದ ಆರಡಿ ಕಟೌನ್ ಕಿಚ್ಚ ಸುದೀಪ್(Sudeep) ಕೆಸಿಸಿ ಕ್ರಿಕೆಟ್(KCC Cricket) ಹಬ್ಬ ಮಾಡಿದ್ರು. ಕಿಚ್ಚನ ಕ್ರಿಕೆಟ್ ಜೋಶ್ ಜೋರಾಗಿತ್ತು. ಇಡೀ ಸ್ಯಾಂಡಲ್‌ವುಡ್‌ ಬಿಗ್ ಸ್ಟಾರ್‌ಗಳು ಕೆಸಿಸಿ ಕ್ರಿಕೆಟ್ ಆಡಿದ್ರು. ಈಗ ಕಿಚ್ಚ ಕ್ರಿಕೆಟ್ ಮೈದಾನದಿಂದ ಮತ್ತೆ ತನ್ನ ಸಿನಿಮಾ ಮ್ಯಾಕ್ಸ್ ಶೂಟಿಂಗ್ ಮೈದಾನಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಚೆನ್ನೈನಲ್ಲಿ ಮ್ಯಾಕ್ಸ್ ಕ್ಲೈಮ್ಯಾಕ್ಸ್(Max movie) ಶೂಟಿಂಗ್ ಶುರುವಾಗುತ್ತೆ. ಮ್ಯಾಕ್ಸ್.. ಈ ಸಿನಿಮಾದ ಸ್ಯಾಂಪಲ್ಸ್‌ಗಳು ಕಿಚ್ಚನ ಫ್ಯಾನ್ಸ್ಗೆ ಹುಚ್ಚು ಹಿಡಿಸಿವೆ. ಮ್ಯಾಕ್ಸ್ನಲ್ಲಿ ಕಿಚ್ಚನ ಲಾಟಿ ಖದರ್ ನೋಡಿರೋ ಅಭಿಮಾನಿ ಬಳಗ ಸಿನಿಮಾಗಾಗಿ ಕಾಯ್ತಾ ಇದ್ದಾರೆ. ಹೀಗಾಗಿ ಈಗ 80 ಪರ್ಸೆಂಟ್ ಮ್ಯಾಕ್ಸ್ ಶೂಟಿಂಗ್ ಮುಗಿಸೋ ಅಭಿನಯ ಚಕ್ರವರ್ತಿ ಇನ್ನುಳಿದ 20 ಪರ್ಸೆಂಟ್ ಚಿತ್ರೀಕರಣವನ್ನ ಚೆನ್ನೈನಲ್ಲಿ ಶುರು ಮಾಡುತ್ತಿದ್ದಾರೆ. ಜನವರಿ ಮುಗಿಯೋ ಒಳಗೆ ಮ್ಯಾಕ್ಸ್ ಶೂಟಿಂಗ್ ಕಂಪ್ಲೀಟ್ ಮಾಡೋ ಪ್ಲಾನ್ ಮಾಡಿರೋ ಬಾದ್ ಷಾ ಫೆಬ್ರವರಿ ಕೊನೇ ವಾರದಲ್ಲಿ ಸಿನಿಮಾ ರಿಲೀಸ್ ಮಾಡೋಕೆ ಸಿದ್ಧತೆ ಮಾಡಿದ್ದಾರೆ. ವಿಕ್ರಾಂತ್ ರೋಣ ಸಿನಿಮಾ ಆದ್ಮೇಲೆ ಕಿಚ್ಚ ಕಡಿಮೆ ಬಜೆಟ್ನಲ್ಲಿ ದೊಡ್ಡ ಸಿನಿಮಾ ಮಾಡೋ ಪ್ಲಾನ್ ಮಾಡಿದ್ರು. ಅದರ ಮೊದಲ ಹೆಜ್ಜೆ ಮ್ಯಾಕ್ಸ್ ಸಿನಿಮಾ. ಕಿಚ್ಚ ಕ್ರಿಯೇಷನ್ಸ್ ಹಾಗು ಕಲೈ ಪುಲಿ ಎಸ್ ತನು ನಿರ್ಮಾಣ ಮಾಡುತ್ತಿದ್ದಾರೆ. ಈ ಸಿನಿಮಾ ಐದು ಭಾಷೆಯಲ್ಲಿ ಸಿದ್ಧವಾಗ್ತಿದ್ದು ಡೈರೆಕ್ಟರ್ ವಿಜಯ್ ಕಾರ್ತಿಕೇಯ್ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಈ ಮೂಲಕ ಕಿಚ್ಚ ಮತ್ತೆ ಮ್ಯಾಕ್ಸ್ ಮೈದಾನಕ್ಕೆ ಎಂಟ್ರಿ ಕೊಟ್ಟಿದ್ದು, ಮುಂದಿನ ವರ್ಷ ಬಾದ್ ಷಾ ಪ್ಯಾನ್ ಇಂಡಿಯಾದಲ್ಲಿ ದರ್ಬಾರ್ ಮಾಡ್ತಾರೆ.

ಇದನ್ನೂ ವೀಕ್ಷಿಸಿ:  ಕನ್ನಡದಲ್ಲಿ ಮೆಗಾ ಸಂಭ್ರಮಕ್ಕೆ ಸಿದ್ಧವಾಗ್ತಿದೆ ವೇದಿಕೆ..! ದರ್ಶನ್-ಪ್ರೇಮ್ ಕಾಂಬಿನೇಷನ್ ಸಿನಿಮಾದಲ್ಲಿ ಚಿರಂಜೀವಿ..?

24:18ರಿಷಬ್​​ ಶೆಟ್ಟಿ ಮಡಿಲಲ್ಲಿ ಮಲಗಿದ ದೈವ ನರ್ತಕ: ದೈವಾರಾಧಕರ ಆಕ್ರೋಶ, ಏನಿದು ಪಂಜುರ್ಲಿ?
03:42ಜೀ ಕನ್ನಡದಲ್ಲಿ ಆದಿ ಲಕ್ಷ್ಮೀ ಪುರಾಣ ಆರಂಭ.. ಡೆವಿಲ್​ ಜೊತೆ ಪಿವೋಟ್ ಚಿತ್ರ ರಿಲೀಸ್!
04:13ಡೆವಿಲ್ Vs ಮಾರ್ಕ್.. ಯಾರಿಗೆಷ್ಟು ಮಾರ್ಕ್ಸ್? ಬಾಕ್ಸಾಫೀಸ್​ ಗಳಿಕೆಯಲ್ಲಿ ಯಾರು ಗೆಲ್ತಾರೆ?
02:16ಬೇರೆಯದೇ ಸಂದೇಶ ಕೊಡುತ್ತಿರೋ 'ದಿ ಡೆವಿಲ್’ ಟ್ರೈಲರ್; ದರ್ಶನ್ ಫ್ಯಾನ್ಸ್‌ ಮುಖದಲ್ಲಿ ಮೂಡ್ತಿದೆ ಮಂದಹಾಸ!
05:19ದರ್ಶನ್ ಕಷ್ಟಕ್ಕೆ ಕಾರಣ ಅದೇನಾ..? 'ಡೆವಿಲ್' ನೆಗೆಟಿವ್ ಟೈಟಲ್ ಸುದ್ದಿಗೆ ಬಿಗ್ ಟ್ವಿಸ್ಟ್; ಸೀಕ್ರೆಟ್ ಹೊರಬಂತು!
02:55ನಿಜವಾಗಿಯೂ ಬಿಗ್ ಬಾಸ್ ಒಳಗೆ ಏನ್ ನಡಿತಾ ಇದೆ? ಜಾಹ್ನವಿ ಹೇಳಿದ ದೊಡ್ಮನೆ ಸತ್ಯ ಕಥೆ ನೋಡಿ..!
04:11'ನಾನ್ ಬರ್ತಿದ್ದೀನಿ ಚಿನ್ನಾ'.. ದರ್ಶನ್ ವಾಯ್ಸ್ ಕೇಳಿ ಕುಣಿದು ಕುಪ್ಪಳಿಸುತ್ತಿರೋ ಫ್ಯಾನ್ಸ್; ಏನಾಗ್ತಿದೆ ಈಗ?
02:58ವೈರಲ್ ಆಯ್ತು ಜೂನಿಯರ್ ದರ್ಶನ್ ಡ್ಯಾನ್ಸ್ ಧಮಾಕಾ! ಅಪ್ಪನ ಹಾಡಿಗೆ ನರ್ತಿಸಿದ ವಿನೀಶ್ ದರ್ಶನ್
05:37ಐದೇ ವಾರಕ್ಕೆ ಔಟ್ ಆದ ರಿಷಾ ಗೌಡ; ಬಿಗ್​ಬಾಸ್ ಟ್ರೋಫಿ ಗೊಲ್ಲೋರ ಸೀಕ್ರೆಟ್ ಹೇಳಿದ ನಟಿ!
03:15ಕಾಂತಾರ ನಂತರ ಮತ್ತೆ ತೆರೆ ಮೇಲೆ ಕೊರಗಜ್ಜನ ಖದರ್: ಬಾಲಿವುಡ್ ನಟನ ದೈವ ಸಿನಿಮಾ ಹೇಗಿರುತ್ತೆ?
Read more