2025ಕ್ಕೆ ಬಂದೇ ಬಿಡುತ್ತಾ ಕೆಜಿಎಫ್-3..! ರಾಕಿ ಭಾಯ್ ಫ್ಯಾನ್ಸ್‌ಗೆ ಗುಡ್‌ನ್ಯೂಸ್‌ ಕೊಟ್ಟ ಹೊಂಬಾಳೆ ಫಿಲ್ಮ್ಸ್..!

2025ಕ್ಕೆ ಬಂದೇ ಬಿಡುತ್ತಾ ಕೆಜಿಎಫ್-3..! ರಾಕಿ ಭಾಯ್ ಫ್ಯಾನ್ಸ್‌ಗೆ ಗುಡ್‌ನ್ಯೂಸ್‌ ಕೊಟ್ಟ ಹೊಂಬಾಳೆ ಫಿಲ್ಮ್ಸ್..!

Published : Dec 21, 2023, 10:06 AM IST

ಪ್ರಶಾಂತ್‌ ನೀಲ್‌ ನಿರ್ದೇಶನದ. ಪ್ರಭಾಸ್ ನಟನೆಯ ‘ಸಲಾರ್’ ರಿಲೀಸ್‌ಗೆ ಕೌಂಟ್‌ಡೌನ್‌ ಶುರುವಾಗಿದೆ. ಈಗೇನಿದ್ದರೂ ಸಿನಿಮಾ ಸ್ಕ್ರೀನ್‌ಗೆ ಬಂದ್ಮೇಲೆನೇ ಅಸಲಿಯತ್ತು ಏನು ಅನ್ನೊದು ಗೊತ್ತಾಗಬೇಕು ಅಷ್ಟೆ. ಆದರೆ ಹೊಂಬಾಳೆ ಫಿಲ್ಮ್ಸ್ ಸಲಾರ್ ಬಿಡುಗಡೆಯ ಮುಂಚೆಯೇ ಅಭಿಮಾನಿಗಳಿಗೆ ಗುಡ್‌ನ್ಯೂಸ್‌ ಕೊಟ್ಟಿದ್ದಾರೆ. ಈ ನ್ಯೂಸ್ ಕೇಳಿದ್ದೇ ಕೇಳಿದ್ದು ರಾಕಿಭಾಯ್ ಅಭಿಮಾನಿಗಳು ಫುಲ್ ಥ್ರಿಲ್ ಆಗೋಗಿ ಬಿಟ್ಟಿದ್ದಾರೆ. 

ಕೆಜಿಎಫ್‌ನಲ್ಲಿ ರಾಕಿ ಭಾಯ್ ಎಂಟ್ರಿ ಸ್ಟೈಲ್‌ಗೆ ಫಿದಾ ಆಗದವರೇ ಯಾರು ಇಲ್ಲ. ಇದೇ ರಾಕಿಭಾಯ್‌ಗೆ ಮತ್ತೆ ಸಲಾಂ ಹೊಡೆಯೋ ಟೈಮ್ ಬಂದೇ ಬಿಟ್ಟಿದೆ. ಇದೇ ಗುಡ್‌ನ್ಯೂಸ್ ಕೊಟ್ಟಿದ್ದಾರೆ ಹೊಂಬಾಳೆ ಫಿಲ್ಮ್ಸ್(Hombale Films). ಕೆಜಿಎಫ್‌ನಲ್ಲಿ(KGF) ರಾಕಿ ಭಾಯ್ ಎಂಟ್ರಿ ಸ್ಟೈಲ್‌ಗೆ ಫಿದಾ ಆಗದವರೇ ಯಾರು ಇಲ್ಲ. ಇದೇ ರಾಕಿಭಾಯ್‌ಗೆ ಮತ್ತೆ ಸಲಾಂ ಹೊಡೆಯೋ ಟೈಮ್ ಬಂದೇ ಬಿಟ್ಟಿದೆ. ಇದೇ ಗುಡ್‌ನ್ಯೂಸ್ ಕೊಟ್ಟಿದ್ದಾರೆ ಹೊಂಬಾಳೆ ಫಿಲ್ಮ್ಸ್. ಕೆಜಿಎಫ್-1& ಕೆಜಿಎಫ್-2 ಇದು ಸೌಂಡ್ ಮಾಡಿದ್ದು ಅಷ್ಟಿಷ್ಟಲ್ಲ. ಅದರಲ್ಲೂ ರಾಕಿಭಾಯ್ ವಲ್ಡ್‌ವೈಡ್ ಹಿರೋ ಆಗ್ಹೋಗಿ ಬಿಟ್ಟಿದ್ದ. ಸಿನಿಮಾ ರಿಲೀಸ್ ಆಗಿ 5 ವರ್ಷ ಆಗಿದ್ರೂ, ಅಭಿಮಾನಿಗಳ ತಲೆಯಿಂದ ರಾಕಿಭಾಯ್ ಹ್ಯಾಂಗ್‌ ಓವರ್ ಇನ್ನೂ ಕಡಿಮೆ ಆಗಿಲ್ಲ. ಕೆಜಿಎಫ್-3(KGF-3) ಬರಲೇಬೇಕು ಎಂದು ಅಭಿಮಾನಿಗಳು ನಿರೀಕ್ಷೆ ಮಾಡ್ತಿದ್ದಾರೆ. ಅವರೆಲ್ಲರ ಆಸೆ ಈಡೇರುವ ಘಳಿಗೆ ಈಗ ಬಂದೇ ಬಿಟ್ಟಿದೆ. ಎಸ್. ಸಲಾರ್ ಬಿಡುಗಡೆ ನಂತರ ಡೈರೆಕ್ಟರ್ ಪ್ರಶಾಂತ್‌ ನೀಲ್‌, ಕೆಜಿಎಫ್-3 ಪ್ರಾಜೆಕ್ಟ್ ಕೈಗೆತ್ತಿಕೊಳ್ಳೊದಕ್ಕೆ ರೆಡಿಯಾಗಿದ್ದಾರೆ. ಈ ನಡುವೆ ಪ್ರಶಾಂತ್(Prashanth Neel) ಮತ್ತು ನಟ ಯಶ್ ನಡುವೆ ಮನಸ್ತಾಪ ಇದೆ ಅನ್ನೋ ಗುಸುಗುಸು ಸುದ್ದಿ ಇತ್ತು. ಅದೆಲ್ಲವನ್ನೂ ಪಕ್ಕಕ್ಕಿಟ್ಟು ಯಶ್ ಕೂಡ ಕೆಜಿಎಫ್-3ಕ್ಕೆ ಬೇಕಾಗಿರೋ ಪ್ರಿಪರೇಶನ್ ಶುರು ಮಾಡ್ತಿದ್ದಾರೆ. ಎಲ್ಲವೂ ಇವರೆಲ್ಲರ ಲೆಕ್ಕಾಚಾರದಂತೆ ಆಗಿದ್ದೇ ಆದರೆ ಮುಂದಿನ 2025ಕ್ಕೆ ಕೆಜಿಎಫ್-3 ಬರೋದು ಕನ್ಫರ್ಮ. ಕೆಜಿಎಫ್-3 ಸುಮಾರು 200 ಕೋಟಿ ರೂಪಾಯಿ ಬಜೆಟ್ ಸಿನಿಮಾ ಆಗೋ ಲೆಕ್ಕಾಚಾರವಿದೆ. ಇನ್ನೂ ನಟ ಯಶ್ ಸದ್ಯಕ್ಕೆ ಟಾಕ್ಸಿಕ್‌ನಲ್ಲಿ ಬ್ಯುಸಿಯಾಗಿದ್ದು, ಇದರ ಕೆಲಸ ಮುಗಿತಿದ್ದ ಹಾಗೆಯೇ ಕೆಜಿಎಫ್-3 ಟೀಮ್ ಜೊತೆ ಜಾಯ್ನ ಆಗುತ್ತಾರೆ. ಅಲ್ಲಿ ತನಕ ಕೆಜಿಎಫ್ ತಂಡ ಬೇರೆ ಬೇರೆ ಕೆಲಸಗಳನ್ನ ಮುಗಿಸಿಕೊಳ್ಳಲಿದೆ. ಸದ್ಯಕ್ಕೆ ಹೊಂಬಾಳೆ ಫಿಲ್ಮ್ಸ್ ನಟ ಯಶ್ ಒಬ್ಬರ ಹೊರತಾಗಿ ಇನ್ಯಾವ ಸ್ಟಾರ್ಸ್ ಬಗ್ಗೆಯೂ ಸ್ಪಷ್ಟವಾಗಿ ಹೇಳಿಲ್ಲ. ಒಟ್ಟಿನಲ್ಲಿ ಕೆಜಿಎಫ್-3 ಮತ್ತೆ ಸುನಾಮಿಯಂತೆ ತೆರೆಗಪ್ಪಳಿಸಿ ಎಲ್ಲರನ್ನೂ ಶಾಕ್ ಮಾಡೋದು ಗ್ಯಾರಂಟಿ ಎಂತ ಹೊಂಬಾಳೆ ಫಿಲ್ಮ್ಸ್ ಗ್ರಿನ್ ಸಿಗ್ನಲ್ ಕೊಟ್ಟಿದೆ. 

ಇದನ್ನೂ ವೀಕ್ಷಿಸಿ:  Today Horoscope: ನಿಮ್ಮ ರಾಶಿಯ ಇಂದಿನ ಭವಿಷ್ಯ ಹೇಗಿದೆ? ಯಾವ ರಾಶಿಯವರಿಗೆ ಶುಭ-ಅಶುಭ ?

02:06ಬಾಕ್ಸಾಫೀಸ್​​ನಲ್ಲಿ ದಾಖಲೆ ಬರೆದ ಧುರಂಧರ್: ವೆಬ್​ ಸರಣಿ ನಿರ್ದೇಶನಕ್ಕೆ ಕೈ ಹಾಕಿದ ಪಿ.ಸಿ.ಶೇಖರ್
05:38ಒಂದೇ ಒಂದು ಹಾಡಿನಿಂದ ಟ್ರೆಂಡಿಂಗ್ ಟಾಪ್​ಸಿಂಗರ್​ಆಗ್ಬಿಟ್ರಾ ಸಾನ್ವಿ? ಅಪ್ಪನಂತೇ ಮಗಳು, ಸಂಗೀತದ ಬೆರಗು..!
03:37ಇತ್ತ ಡೆವಿಲ್.. ಅತ್ತ ಟ್ರಯಲ್.. ದಾಸನಿಗೆ ಟ್ರಬಲ್: ಪವಿತ್ರಾ ಗೌಡಗೂ ಟಿವಿ ಕೊಡಿ, ವಕೀಲರ ಮನವಿ!
04:23'ತ್ರಿಮೂರ್ತಿ'ಗಳ ಹಾಲಿವುಡ್‌ ರೇಂಜ್ ಮೇಕಿಂಗ್ '45' ಸಿನಿಮಾ ಟ್ರೈಲರ್ ನೋಡಿದವ್ರು ಏನಂತಿದಾರೆ?!
05:37ಡೆವಿಲ್ ಸಿನಿಮಾದಲ್ಲಿ ದರ್ಶನ್ ಸಿಎಂ..! ಕಿಚ್ಚ ಸುದೀಪ್ ಹೇಳಿದ ಪಾಲಿಟಿಕ್ಸ್ ಸೀಕ್ರೆಟ್ ಏನು?
04:38Video: ನಟಿ ರಮ್ಯಾಗೆ ಸಂದರ್ಶನದಲ್ಲೇ ತಿರುಗೇಟು ಕೊಟ್ಟ Actor Darshan Wife Vijayalakshmi
04:51ಎಲ್ಲೆಲ್ಲೂ 'ಗಿಲ್ಲಿ ನಟ'ನದೇ ದರ್ಬಾರ್.. ಬಿಗ್ ಬಾಸ್‌ನಲ್ಲೂ ಬಿಗ್ ಸ್ಕ್ರೀನ್‌ನಲ್ಲೂ ಸಖತ್ ಸದ್ದು..!
05:21ರಾಜ್ಯಾದ್ಯಂತ Devil ಜಾತ್ರೆ.. ಮ್ಯಾಸಿವ್ ಓಪನಿಂಗ್: ದರ್ಶನ್ ನೋಡಿದ ಅಭಿಮಾನಿಗಳು ಹೇಳಿದ್ದೇನು?
04:44ನಾ ಬಂದೆ ಚಿನ್ನ: 'ದಿ ಡೆವಿಲ್' ಗ್ರ್ಯಾಂಡ್ ಎಂಟ್ರಿ.. ರಾಜ್ಯಾದ್ಯಂತ 400+ ಸ್ಕ್ರೀನ್‌ಗಳಲ್ಲಿ ದರ್ಶನ್ ಆಟ ಶುರು
05:38ದರ್ಶನ್ ಜೈಲಿನಲ್ಲಿ.. 'ದಿ ಡೆವಿಲ್‌' ಗೆಲ್ಲಿಸ್ತಾರಾ ಪ್ಯಾನ್ಸ್‌..? ಮತ್ತೊಂದು 'ಸಾರಥಿ' ಆಗುತ್ತಾ ಈ ಸಿನಿಮಾ?
Read more