Feb 7, 2023, 1:00 PM IST
ಕೆಜಿಎಫ್ ಸಿನಿಮಾ ಬಳಿಕ ರಾಕಿಂಗ್ ಸ್ಟಾರ್ ಯಶ್, ತಮ್ಮ ಇಬ್ಬರು ಮಕ್ಕಳ ಜೊತೆ ಆಟ ಪಾಠ ಮಾಡಿಕೊಂಡು ಆರಾಮಾಗಿ ಇದ್ದಾರೆ. ಈ ಅಪ್ಪ ಮಕ್ಕಳ ಹಲವು ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಲೇ ಇರುತ್ತವೆ. ಇದೀಗ ಯಶ್ ಪುತ್ರ ಯಥರ್ವ್ ಹಾಗೂ ರಾಕಿಂಗ್ ಸ್ಟಾರ್ ಇಬ್ಬರಲ್ಲಿ ಯಾರು ಹೆಚ್ಚು ಸ್ಟ್ರಾಂಗ್ ಅಂತ ತೋರಿಸೋಕೆ ವಿಡಿಯೋ ಒಂದನ್ನು ರಾಕಿ ಶೇರ್ ಮಾಡಿದ್ದಾರೆ. ಯಶ್ ತಮ್ಮ ತೋಳ್ಬಲ ಎಷ್ಟಿದೆ ಅಂತ ಸುಪುತ್ರ ಯಥರ್ವ್'ಗೆ ತೋರಿಸುತ್ತಾರೆ. ಆದ್ರೆ ಈ ಪುಟಾಣಿ ಅಪ್ಪನಿಗೆ ಸವಾಲ್ ಹಾಕಿ ನಾನೇನು ನಿಮಗಿಂತಾ ಕಮ್ಮಿನಾ ಅಂತ ತನ್ನ ತೋಳ್ಬಲವನ್ನು ಯಶ್ ಅವರಿಗೆ ತೋರಿಸುತ್ತಾನೆ. ಇದನ್ನು ನೋಡಿದ ಯಶ್ ಫುಲ್ ಖುಷಿಯಾಗ್ತಾರೆ. ಅಪ್ಪ ಮನಗ ಈ ತುಂಟಾದ ವೀಡಿಯೋ ಈಗ ಸಿಕ್ಕಾಪಟ್ಟ ವೈರಲ್ ಆಗ್ತಿದೆ.