Sandalwood: 2024ಕ್ಕೆ ಕನ್ನಡ ಚಿತ್ರ ಪ್ರೇಮಿಗಳಿಗೆ ಸಿನಿಮಾ ಹಬ್ಬ..! ಮುಂದಿನ ವರ್ಷ ಇಂಡಿಯಾದಲ್ಲಿ ಕನ್ನಡ ಚಿತ್ರಗಳದ್ದೇ ಸೌಂಡ್..!

Sandalwood: 2024ಕ್ಕೆ ಕನ್ನಡ ಚಿತ್ರ ಪ್ರೇಮಿಗಳಿಗೆ ಸಿನಿಮಾ ಹಬ್ಬ..! ಮುಂದಿನ ವರ್ಷ ಇಂಡಿಯಾದಲ್ಲಿ ಕನ್ನಡ ಚಿತ್ರಗಳದ್ದೇ ಸೌಂಡ್..!

Published : Dec 28, 2023, 10:48 AM IST

ಈ ವರ್ಷ ಮುಗೀತು. ಈ ವರ್ಷ ಆಗಿದ್ದೆಲ್ಲಾ ಇನ್ಮುಂದೆ ಇತಿಹಾಸ. ಮುಂದಿನ ವರ್ಷ ಆಗೋದೆಲ್ಲವೂ ಇತಿಹಾಸ ಆಗಬೇಕು ರೆಕಾರ್ಡ್ ಬುಕ್ ಸೇರಬೇಕು. ಅದು ಕಂಡಿತಾ ನೆಡದೇ ನಡೆಯುತ್ತೆ ಅನ್ನೋ ನಂಬಿಕೆ ಸ್ಯಾಂಡಲ್‌ವುಡ್‌ನಲ್ಲಿ ಗಟ್ಟಿಯಾಗಿ ಬೇರೂರಿದೆ. ಯಾಕಂದ್ರೆ ಕನ್ನಡದಲ್ಲಿ ಮುಂದಿನ ವರ್ಷ ಬಿಗ್ ಸ್ಟಾರ್ಗಳ ಸಾಲು ಸಾಲು ಸಿನಿಮಾಗಳು ತೆರೆ ಕಾಣುತ್ತಿವೆ.

2023 ಇನ್ನು ನೆನಪು ಮಾತ್ರ. ನೀವೆಲ್ಲಾ 2023ಕ್ಕೆ ರಿಪ್ ಅಂತ ಪೋಸ್ಟ್ ಹಾಕೊಳ್ತೀರಾ. ಆದ್ರೆ ಹಿಂದೆ ಏನಾಯ್ತು ಅಂತ ಯೋಚ್ನೆ ಮಾಡೋದಕ್ಕಿಂತ ಮುಂದೆ ಏನು ಆಗಬೇಕು ಅಂತ ಪ್ಲಾನ್ ಮಾಡಿ ಮುಂದಕ್ಕೆ ಹೀಗೋದೇ ಬೆಸ್ಟ್. ಹಾಗಾಗಿ ಈ ವರ್ಷಕ್ಕಿಂತಲೂ ಮುಂದಿನ ವರ್ಷ ಸ್ಯಾಂಡಲ್‌ವುಡ್‌ಗೆ(Sandalwood) ಬೆಸ್ಟ್ ಈಯರ್ ಆಗುತ್ತೆ ಅನ್ನೋ ನಂಬಿಕೆ ನಮ್ಮ ಕನ್ನಡ ಸಿನಿ ಪ್ರೇಮಿಗಳಲ್ಲಿದೆ. ಯಾಕಂದ್ರೆ 2024ರಲ್ಲಿ ಕನ್ನಡ ಸಿನಿಮಾಗಳ ಹಬ್ಬ ನಡೆಯುತ್ತೆ. ಪ್ಯಾನ್ ಇಂಡಿಯಾದಲ್ಲಿ ಕನ್ನಡ ಸಿನಿಮಾಗಳದ್ದೇ ಸೌಂಡ್ ಇರುತ್ತೆ. ಪ್ರತಿ ವರ್ಷ ನೂರಾರು ಸಿನಿಮಾಗಳು ರಿಲೀಸ್ ಆಗ್ತಾವೆ. ಎಲ್ಲಾ ಸಿನಿಮಾಗಳು ಹಿಟ್ ಆಗಲ್ಲ. ಆದ್ರೆ  ಚೆನ್ನಾಗಿರೋ ಸಿನಿಮಾಗಳಿಗೂ ಜನರು ಚಿತ್ರಮಂದಿರಕ್ಕೆ ಬಂದು ನೋಡಿಲ್ಲ. ಈ ವರ್ಷ ಅಂತಹ ಅನುಭವ ಸ್ಯಾಂಡಲ್‌ವುಡ್‌ಗೆ ಆಗಿವೆ. ಅಷ್ಟೆ ಅಲ್ಲ ಈ ವರ್ಷ ಸ್ಟಾರ್ ನಟರ ಸಿನಿಮಾಗಳು(Movies) ತೆರೆಕಂಡಿದ್ದು ಬೆರಳೆಣಿಕೆಯಷ್ಟು. ಆದ್ರೆ 2024 ಹಾಗಾಗಲ್ಲ. ಕನ್ನಡದಲ್ಲಿ ಬಿಗ್ ಸ್ಟಾರ್ ನಟರ ಸಿನಿಮಾಗಳು ಒಂದರ ಹಿಂದೊಂದು ಬರೋದಕ್ಕೆ ಪ್ಲಾನ್ ಮಾಡಿಕೊಂಡಿವೆ. ಆ ಸಿನಿಮಾಗಳಲ್ಲಿ ಮೊದಲಿಗೆ ಸಿಗೋದೇ ದುನಿಯಾ ವಿಜಯ್ರ(Duniya Vijay) ಭೀಮ(Bheema movie). 2023 ಕನ್ನಡ ಚಿತ್ರರಂಗಕ್ಕೆ ಶುಕ್ರದೆಸೆ ಇರಲಿಲ್ಲ. ಆದ್ರೆ 2024 ಹಾಗಾಗಲ್ಲ. ಜನವರಿ ಮಧ್ಯದವರೆಗೆ ಶೂನ್ಯ ಮಾಸ ನಡೆಯಲಿದ್ದು, ಅದಾದ ನಂತರ ಕನ್ನಡದಲ್ಲಿ ಸಾಲು ಸಾಲು ಬಿಗ್ ಸ್ಟಾರ್ ಸಿನಿಮಾಗಳು ತೆರೆ ಕಾಣುತ್ತೆವೆ. ನಟ ದುನಿಯಾ ವಿಜಯ್ ನಿರ್ದೇಶಿಸಿ ನಟಿಸಿರೋ ಭೀಮ ಸಿನಿಮಾದ ಶೂಟಿಂಗ್ ಮುಗಿದಿದ್ದು, ಜನವರಿ ಕೊನೆವಾರ ತೆರೆ ಮೇಲೆ ಬರಲಿದೆ.

ಇದನ್ನೂ ಓದಿ:  Max Movie:ಕ್ರಿಕೆಟ್ ಮೈದಾನದಿಂದ 'ಮ್ಯಾಕ್ಸ್' ಮೈದಾನಕ್ಕೆ ಕಿಚ್ಚ..! ಕ್ಲೈಮ್ಯಾಕ್ಸ್ ಶೂಟಿಂಗ್‌ನಲ್ಲಿ ಬ್ಯುಸಿಯಾದ ಬಾದ್‌ ಷಾ..!

04:57ಅಪ್ಪನ ಆಸೆ.. ಮಗಳ ಕನಸು.. ಅಪ್ಪ ಇಟ್ಟ ಹೆಸರಲ್ಲೇ ಬಿಜಿನೆಸ್​ಶುರು ಮಾಡಿದ ಅಪ್ಪು ಪುತ್ರಿ ವಂದಿತಾ..!
02:36Yash: ನಟ ಯಶ್​ ಹೃದಯವಂತ, ಜೊತೆ ಕೆಲಸ ಮಾಡಿದ್ದು ಅದ್ಭುತ ಅನುಭವ: ತಾರಾ ಸುತಾರಿಯಾ
08:02Toxic Movie: ಲಸ್ಟ್ ಸ್ಟೋರೀಸ್, ಕಬೀರ್ ಸಿಂಗ್ ಆಯ್ತು; ಮದುವೆಯಾಗಿ ಮಗು ಆದ್ರೂ ಕಮ್ಮಿಯಾಗಿಲ್ಲ Kiara Advani ಬ್ಯೂಟಿ
09:56Yash Toxic Movie Tabaahi Song: ಯಶ್‌, ಕಿಯಾರಾ ಅಡ್ವಾಣಿ ಕೆಮಿಸ್ಟ್ರಿಗೆ ದಂಗಾದ ಇಂಟರ್‌ನೆಟ್‌ ಜಗತ್ತು!
04:04ಶಿವಣ್ಣ-ಧನಂಜಯ್ ಮತ್ತೊಮ್ಮೆ ಜೊತೆಯಾಟ.. ಹೇಮಂತ್ ರಾವ್ ನಿರ್ದೇಶನದಲ್ಲಿ '...ಡ್ರೀಮ್ ಥಿಯೇಟರ್..!
09:57Darshan Thoogudeepa: ಡಿ ಗ್ಯಾಂಗ್ ರಹಸ್ಯ- ನಟ ದರ್ಶನ್ ಬಚಾವ್ ಮಾಡೋಕೆ ನಡಿತಿರೋ ಸಾಕ್ಷ್ಯನಾಶದ ಸೂತ್ರಧಾರಿ ಯಾರು?
05:49Toxic: Ladies & Ladies Teaser: 3 ಟೀಸರ್.. 100 ಮ್ಯಾಟರ್: ಇದ್ರಲ್ಲಿ ಲೇಡೀಸ್ ಗ್ಯಾಂಗ್ ಆರ್ಭಟ!
07:55Toxic: ಟಾಕ್ಸಿಕ್ ಸೌಂದರ್ಯ & ಸಮರ; ಲೇಡೀಸ್ ಸ್ಪೆಷಲ್ ಟೀಸರ್ ಸೆನ್ಸೇಷನ್‌ ಏನ್ ಹೇಳ್ತಿದೆ?
22:40ಗೆಳತಿ ಮನೆಯಲ್ಲಿ Vaishak​​ ನೇಣಿಗೆ ಶರಣಾಗಿದ್ದೇಕೆ ? ದುರಂತದ ಆ ರಾತ್ರಿ ಕೃಷಿ ತಾಪಂಡ ಮನೆಯಲ್ಲಿ ನಡೆದಿದ್ದೇನು?
06:59ಜಿಮ್ ಮಾಡ್ತಿದ್ದ ದರ್ಶನ್ 'ಯೋಗ' ಮಾಡುವಂತಾಗಿದ್ದು ಹೀಗೆ.. ಅವರು ಹೇಳಿಲ್ಲಾ ಅಂದ್ರೆ ಇವರು ಮಾಡ್ತಿರ್ಲಿಲ್ಲ!?
Read more