Dec 1, 2021, 6:16 PM IST
30 ಕೋಟಿ ಬಜೆಟ್‌ನಲ್ಲಿ ನಿರ್ಮಾಣವಾಗಿರುವ ರೋರಿಂಗ್ ಸ್ಟಾರ್ ಶ್ರೀಮುರಳಿ (SriiMurali) ಅಭಿನಯದ ಬಹು ನಿರೀಕ್ಷಿತ 'ಮದಗಜ' (Madhagaja) ಚಿತ್ರ ಇದೇ ಡಿಸೆಂಬರ್ 3ರಂದು ದೇಶದಾದ್ಯಂತ 1400 ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ಹೀಗಾಗಿ ಇತ್ತೀಚೆಗೆ ಬೆಂಗಳೂರಿನ ಖಾಸಗಿ ಹೊಟೇಲ್‌ನಲ್ಲಿ ಚಿತ್ರತಂಡ ಸುದ್ದಿಗೋಷ್ಠಿಯನ್ನು ನಡೆಸಿ ಚಿತ್ರದ ಬಗ್ಗೆ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ಶ್ರೀಮುರಳಿ, ಗರುಡ ರಾಮ್, ಆಶಿಕಾ ರಂಗನಾಥ್ ಚಿತ್ರದಲ್ಲಿ ತಮ್ಮ ಪಾತ್ರದ ಬಗ್ಗೆ ತಿಳಿಸಿದರು. 'ಅಯೋಗ್ಯ' ಖ್ಯಾತಿಯ ಮಹೇಶ್ ಕುಮಾರ್ (Mahesh Kumar) ನಿರ್ದೇಶನದ ಈ ಚಿತ್ರಕ್ಕೆ ಉಮಾಪತಿ ಶ್ರೀನಿವಾಸ್ ಗೌಡ (Umapathy Srinivas Gowda) ಬಂಡವಾಳ ಹೂಡಿದ್ದಾರೆ.
Madhagaja: ಈ 10 ಕಾರಣಗಳಿಗೆ ಶ್ರೀಮುರಳಿ ಸಿನಿಮಾ ನೋಡಲೇಬೇಕು!
ಈಗಾಗಲೇ 'ಮದಗಜ' ಚಿತ್ರದ ಟೀಸರ್ (Teaser), ಟ್ರೈಲರ್ (Trailer) ಹಾಗೂ ಮೇಕಿಂಗ್ ವಿಡಿಯೋ ಸಿನಿ ರಸಿಕರ ಗಮನ ಸೆಳೆದಿದ್ದು, ಚುಟು ಚುಟು ಆಶಿಕಾ ರಂಗನಾಥ್ (Ashika Ranganath) ಹಳ್ಳಿ ಹುಡುಗಿಯಾಗಿ ಶ್ರೀಮುರಳಿ ಅವರಿಗೆ ಜೋಡಿಯಾಗಿದ್ದಾರೆ. ಜೊತೆಗೆ ಟಾಲಿವುಡ್ನ ಖ್ಯಾತ ನಟ ಜಗಪತಿ ಬಾಬು (Jagapati Babu), ತೆಲುಗು ನಟಿ ದೇವಯಾನಿ, ಚಿಕ್ಕಣ್ಣ, ಧರ್ಮಣ್ಣ, ಶಿವರಾಜ್ ಕೆ.ಆರ್. ಪೇಟೆ ಸೇರಿದಂತೆ ದೊಡ್ಡ ತಾರಾಬಳಗ ಚಿತ್ರಕ್ಕಿದ್ದು, ಹರೀಶ್ ಕೊಮ್ಮೆಯವರ ಸಂಕಲನ, 'ಕೆಜಿಎಫ್' ಖ್ಯಾತಿಯ ರವಿ ಬಸ್ರೂರ್ (Ravi Basrur) ಸಂಗೀತ ಸಂಯೋಜನೆಯಿದೆ.
ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment