ಹೀರೋ ಆಗಿ ಮಾತಾಡ್ಲೋ? ಅಪ್ಪನಾಗಿ ಮಾತಾಡ್ಲೋ ಎನ್ನುತ ಮಾತು ಪ್ರಾರಂಭಿಸಿದ ಶರಣ್, ಈ ಸಿನಿಮಾದಿಂದ ನನ್ನ ಮಗ ಒಬ್ಬ ಅದ್ಭುತ ನಟನಾದನೋ ಏನು ಗೊತ್ತಿಲ್ಲ ಆದರೆ ಒಬ್ಬ ಒಳ್ಳೆ ಮನುಷ್ಯನಾದ ಎಂದು ಹೇಳಿದರು.
ಸ್ಯಾಂಡಲ್‌ವುಡ್‌ನಲ್ಲಿ ಈಗ ಗುರುಶಿಷ್ಯರದ್ದೆ ಹವಾ. ಯಾರದು ಅದು ಅಂತೀರಾ ಗುರು ಶಿಷ್ಯರು ಸಿನಿಮಾದ ಬಗ್ಗೆ ಹೇಳುತ್ತಿರುವುದು. ಹೌದು, ಈ ಸಿನಿಮಾ ಸದ್ಯ ರಿಲೀಸ್ ಗೆ ರೆಡಿಯಾಗಿದೆ. ಈ ಬಾರಿ ಗುರು ಶಿಷ್ಯರಾಗಿ ತೆರೆಮೇಲೆ ಬರ್ತಿದ್ದಾರೆ ಕಾಮಿಡಿ ಅಧ್ಯಕ್ಷ ಶರಣ್. ಸದ್ಯ ಗುರು ಶಿಷ್ಯರು ಸಿನಿಮಾದ ಟ್ರೈಲರ್ ರಿಲೀಸ್ ಮಾಡಲಾಗಿದೆ. ಶಿಕ್ಷಕರ ದಿನಾಚರಣೆ ಅಂಗವಾಗಿ ಬಿಡಗಡೆಯಾದ ಗುರುಶಿಷ್ಯರು ಟ್ರೈಲರ್‌ಗೆ ಭರ್ಜರಿ ಪ್ರತಿಕ್ರಿಯೆ ವ್ಯಕ್ತವಾಗಿದೆ. ವಿಶೇಷ ಎಂದರೆ ಈ ಸಿನಿಮಾದಲ್ಲಿ ಸ್ಯಾಂಡಲ್ ವುಡ್ ಸ್ಟಾರ್ ಕಿಡ್ಸ್ ಕೂಡ ನಟಿಸಿದ್ದಾರೆ. ಶರಣ್ ಜೊತೆ ಪುತ್ರ, ನೆನಪಿರಲಿ ಪ್ರೇಮ್ ಪುತ್ರ, ರವಿಶಂಕರ್ ಪುತ್ರ ಈ ಸಿನಿಮಾದಲ್ಲಿ ನಟಿಸಿದ್ದಾರೆ. ಖೋ ಖೋ ಆಟದ ಬಗ್ಗೆ ಇರುವ ಈ ಸಿನಿಮಾ ಈಗಾಗಲೇ ಟ್ರೈಲರ್ ಮೂಲಕ ಅಭಿಮಾನಿಗಳ ನಿರೀಕ್ಷೆ ಹೆಚ್ಚಿಸಿದೆ. ಅಂದಹಾಗೆ ಟ್ರೈಲರ್ ರಿಲೀಸ್ ಈವೆಂಟ್ ನಲ್ಲಿ ನಟ ಶರಣ್ ಮಗನ ಬಗ್ಗೆ ಮಾತನಾಡಿದ್ರು. ಹೀರೋ ಆಗಿ ಮಾತಾಡ್ಲೋ? ಅಪ್ಪನಾಗಿ ಮಾತಾಡ್ಲೋ ಎನ್ನುತ ಮಾತು ಪ್ರಾರಂಭಿಸಿದ ಶರಣ್, ಈ ಸಿನಿಮಾದಿಂದ ಮಗ ಒಬ್ಬ ನಟನಾದನೋ ಏನು ಗೊತ್ತಿಲ್ಲ ಆದರೆ ಒಬ್ಬ ಒಳ್ಳೆ ಮನುಷ್ಯನಾದ ಎಂದು ಹೇಳಿದರು. ಅವರಿಗೆ ಹೀರೋ ಆಗುವ ಆಸೆ ಇದೆ ಎಂದು ಮಕ್ಕಳ ಬಗ್ಗೆ ಹೇಳಿದ್ರು.