ರೂಪಾಂತರ ಚಿತ್ರದ ಮೂಲಕ ಬೆಂಗಳೂರು ರೌಡಿಸಂಗೆ Raj B Shetty ಎಂಟ್ರಿ!

ರೂಪಾಂತರ ಚಿತ್ರದ ಮೂಲಕ ಬೆಂಗಳೂರು ರೌಡಿಸಂಗೆ Raj B Shetty ಎಂಟ್ರಿ!

Published : Jan 26, 2022, 01:43 PM ISTUpdated : Jan 26, 2022, 01:47 PM IST

'ಗರುಡ ಗಮನ ವೃಷಭ ವಾಹನ' ಸಿನಿಮಾದ ಯಶಸ್ಸಿನಲ್ಲಿರುವ ನಟ, ನಿರ್ದೇಶಕ ರಾಜ್‌ ಬಿ. ಶೆಟ್ಟಿ ವಿಭಿನ್ನ ಶೈಲಿಯ ಕಥೆಯಿರುವ ಮತ್ತೊಂದು ಸಿನಿಮಾದಲ್ಲಿ ನಟಿಸಿದ್ದಾರೆ. ಅದೂ ಬೆಂಗಳೂರಿಗನ ಡಾನ್ ಪಾತ್ರ ಇದಾಗಿರುವುದು ವಿಶೇಷ.

'ಒಂದು ಮೊಟ್ಟೆಯ ಕಥೆ' (Ondu Mottea kathe) ಚಿತ್ರದ ಮೂಲಕ ಜನಾರ್ದನ್ ಆಗಿ ಪರಿಚಯವಾದ ನಟ ರಾಜ್‌ ಬಿ ಶೆಟ್ಟಿ (Raj B Shetty) ಅತಿ ಹೆಚ್ಚು ಬೇಡಿಕೆಯ ನಟನಾಗಿ ಗುರುತಿಸಿಕೊಂಡಿದ್ದಾರೆ. ಇತ್ತೀಚಿನ ಸಿನಿಮಾ 'ಗರುಡಗಮನ ವೃಷಭವಾಹನ' ಗ್ಯಾಂಗ್‌ಸ್ಟರ್‌ ಚಿತ್ರದಲ್ಲಿಯೂ ರಾಜ್ ಸಖತ್ ಆಗಿ ಮಿಂಚಿದ್ದಾರೆ. ಇದೀಗ ವಿಭಿನ್ನ ಶೈಲಿಯ ನಿರೂಪಣೆಯ ಸಿನಿಮಾದಲ್ಲಿ ಅವರು ನಟಿಸಿದ್ದು, ಅದರ ಹೆಸರು 'ರೂಪಾಂತರ' (Roopantara). ಈ ಚಿತ್ರದಲ್ಲಿ ರಾಜ್ ಬಿ ಶೆಟ್ಟಿ ರೌಡಿಯ ಪಾತ್ರ ನಿರ್ವಹಿಸಿದ್ದಾರೆ. ಅದೂ ಬೆಂಗಳೂರಿಗನ ಡಾನ್ ಪಾತ್ರ ಇದಾಗಿರುವುದು ವಿಶೇಷ.

ಮುದ್ದು ಮಗಳಿಗೆ ವೀಕೆಂಡ್‌ನಲ್ಲಿ ಕನ್ನಡದ ಪಾಠ ಮಾಡಿದ Yash!

ಈಗಾಗಲೇ 'ರೂಪಾಂತರ' ಚಿತ್ರದ ಚಿತ್ರೀಕರಣವೂ ಮುಗಿದಿದೆ. ಮಿಥಿಲೇಶ್‌ ಎಡವಲದ್‌ ಎಂಬುವರು ಈ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ.  'ಒಂದು ಮೊಟ್ಟೆಯ ಕಥೆ' ಸಿನಿಮಾವನ್ನು ನಿರ್ಮಾಣ ಮಾಡಿದ್ದ ಸುಹಾಸ್‌ 'ರೂಪಾಂತರ'ಕ್ಕೂ ಹಣ ಹೂಡಿದ್ದಾರೆ. 'ಗರುಡ ಗಮನ ವೃಷಭ ವಾಹನ' ರೀತಿ ನನಗೆ ಖುಷಿ ಕೊಟ್ಟ ಪ್ರಾಜೆಕ್ಟ್ ಇದು. ಇಂಟ್ರೆಸ್ಟಿಂಗ್‌ ಕಥೆಯನ್ನು ಈ ಸಿನಿಮಾ ಹೊಂದಿದೆ. ಮನುಷ್ಯ ಬೇರೆ ಬೇರೆ ಸಂದರ್ಭಗಳಲ್ಲಿ ಬದಲಾಗುತ್ತಾನೆ. ಅಂತಹ ಒಂದು ಬದಲಾವಣೆಯ ಕಥೆ ಈ ಚಿತ್ರದಲ್ಲಿದೆ. ನಾನು ಇದರಲ್ಲಿ ಬೆಂಗಳೂರು ಮೂಲದ ರೌಡಿಯಾಗಿರುತ್ತೇನೆ ಎಂದು ರಾಜ್ ಬಿ ಶೆಟ್ಟಿ ತಿಳಿಸಿದ್ದಾರೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment

02:59ಜಯಪ್ರಕಾಶ್ ಶೆಟ್ಟಿ ನಟನೆ, ಕನ್ನಡ-ತುಳು ಭಾಷೆಯ 'ಬನ' ರಿಲೀಸ್ ಡೇಟ್ ಅನೌನ್ಸ್!
02:24ನೆಪೋಟಿಸಂ ಬಗ್ಗೆ ಪ್ರಿಯಾಂಕಾ ಉಪೇಂದ್ರ ಹೇಳಿದ್ದೇನು..?!
04:57ಅಪ್ಪನ ಆಸೆ.. ಮಗಳ ಕನಸು.. ಅಪ್ಪ ಇಟ್ಟ ಹೆಸರಲ್ಲೇ ಬಿಜಿನೆಸ್​ಶುರು ಮಾಡಿದ ಅಪ್ಪು ಪುತ್ರಿ ವಂದಿತಾ..!
02:36Yash: ನಟ ಯಶ್​ ಹೃದಯವಂತ, ಜೊತೆ ಕೆಲಸ ಮಾಡಿದ್ದು ಅದ್ಭುತ ಅನುಭವ: ತಾರಾ ಸುತಾರಿಯಾ
08:02Toxic Movie: ಲಸ್ಟ್ ಸ್ಟೋರೀಸ್, ಕಬೀರ್ ಸಿಂಗ್ ಆಯ್ತು; ಮದುವೆಯಾಗಿ ಮಗು ಆದ್ರೂ ಕಮ್ಮಿಯಾಗಿಲ್ಲ Kiara Advani ಬ್ಯೂಟಿ
09:56Yash Toxic Movie Tabaahi Song: ಯಶ್‌, ಕಿಯಾರಾ ಅಡ್ವಾಣಿ ಕೆಮಿಸ್ಟ್ರಿಗೆ ದಂಗಾದ ಇಂಟರ್‌ನೆಟ್‌ ಜಗತ್ತು!
04:04ಶಿವಣ್ಣ-ಧನಂಜಯ್ ಮತ್ತೊಮ್ಮೆ ಜೊತೆಯಾಟ.. ಹೇಮಂತ್ ರಾವ್ ನಿರ್ದೇಶನದಲ್ಲಿ '...ಡ್ರೀಮ್ ಥಿಯೇಟರ್..!
09:57Darshan Thoogudeepa: ಡಿ ಗ್ಯಾಂಗ್ ರಹಸ್ಯ- ನಟ ದರ್ಶನ್ ಬಚಾವ್ ಮಾಡೋಕೆ ನಡಿತಿರೋ ಸಾಕ್ಷ್ಯನಾಶದ ಸೂತ್ರಧಾರಿ ಯಾರು?
05:49Toxic: Ladies & Ladies Teaser: 3 ಟೀಸರ್.. 100 ಮ್ಯಾಟರ್: ಇದ್ರಲ್ಲಿ ಲೇಡೀಸ್ ಗ್ಯಾಂಗ್ ಆರ್ಭಟ!
07:55Toxic: ಟಾಕ್ಸಿಕ್ ಸೌಂದರ್ಯ & ಸಮರ; ಲೇಡೀಸ್ ಸ್ಪೆಷಲ್ ಟೀಸರ್ ಸೆನ್ಸೇಷನ್‌ ಏನ್ ಹೇಳ್ತಿದೆ?
Read more