
ನಟ ದರ್ಶನ್ ಜೈಲಿನಿಂದ ಬಿಡುಗಡೆಯಾದ ನಂತರ ಮತ್ತೆ ತಮ್ಮ ಐರಾವತ ಕಾರಿನಲ್ಲಿ ಸುತ್ತಾಡಲು ಪ್ರಾರಂಭಿಸಿದ್ದಾರೆ. ಚಾಮುಂಡಿಬೆಟ್ಟಕ್ಕೆ ಭೇಟಿ ನೀಡಿ ದೇವಿಯ ದರ್ಶನ ಪಡೆದ ದರ್ಶನ್, ಗನ್ ಲೈಸೆನ್ಸ್ಗಾಗಿ ಪ್ರಾರ್ಥಿಸಿದ್ದಾರೆ. ಮಂಡ್ಯದ ಆರತಿ ಉಕ್ಕಡ ಮಾರಮ್ಮ ದೇವಿಗೂ ನಮಿಸಿ, ಸಂಕಷ್ಟಗಳ ಪರಿಹಾರಕ್ಕಾಗಿ ಪ್ರಾರ್ಥಿಸಿದ್ದಾರೆ.
ನಟ ದರ್ಶನ್ ಮತ್ತೆ ಹಳೇ ಚಾಳಿ ಶುರು ಮಾಡಿದ್ದಾರೆ. ಕೊಲೆ ಕೇಸ್ನಲ್ಲಿ ಅಂದರ್ ಆಗಿ ಹೊರ ಬಂದಿರೋ ದರ್ಶನ್ ಎಲ್ಲಾ ಕಷ್ಟ ನಷ್ಟಗಳನ್ನ ಹಿಂದೆ ತಳ್ಳಿ ತನ್ನ ಐರಾವತ ಏರಿ ರೌಂಡ್ ಹೊಡೆಯುತ್ತಿದ್ದಾರೆ. ಅಷ್ಟೆ ಅಲ್ಲ ಆತ್ಮರಕ್ಷಣೆಗೆ ಅಂತ ಇಟ್ಟಿದ್ದ ಗನ್ಗೆ ಲೈಸೆನ್ಸ್ ಬೇಕೇ ಬೇಖು ಅಂತ ಚಾಮುಂಡೇಶ್ವರಿ ಎದುರು ದಾಸ ಶಪತ ಮಾಡಿದ್ದಾರೆ.ಸೂಪರ್ ಕಾರುಗಳನ್ನ ಎತ್ತಿಕೊಂಡು ಬೆಂಗಳೂರು ಟು ಮೈಸೂರು ಹೊರಟ್ರು ಅಂದ್ರೆ ಸಾಕು.. ದರ್ಶನ್ ಹಿಂದೆ ಹತ್ತಾರು ಕಾರುಗಳು ರೊಯ್ ಅಂತ ಹೋಗುತ್ತಿದ್ವು. ಅಕ್ಕ ಪಕ್ಕ ಬರೋ ಫ್ಯಾನ್ಸ್ಗಳನ್ನ ಮಾತಾಡಿಸಿಕೊಂಡು ಒಂದುಷ್ಟು ಕಿಚಾಯಿಸಿ ಬೈದು ಹೋಗುತ್ತಿದ್ರು. ಈಗ ಮತ್ತದೇ ಹಳೇ ಚಾಳಿ ಶುರು ಮಾಡಿದ್ದಾರೆ ದರ್ಶನ್.ಸಂಕ್ರಾಂತಿ ಹಬ್ಬಕ್ಕೆ ಮೈಸೂರಿಗೆ ತೆರಳಿದ್ದ ದರ್ಶನ್, ಪತ್ನಿ ಸ್ನೇಹಿತರ ಜೊತೆ ಚಾಮುಂಡಿಬೆಟ್ಟಕ್ಕೆ ಭೇಟಿ ನೀಡಿ ದೇವಿಯ ದರ್ಶನ ಪಡೆದಿದ್ದಾರೆ. ದರ್ಶನ್ ಚಾಮುಂಡೇಶ್ವರಿಯ ದೊಡ್ಡ ಭಕ್ತ. ಪಾಪ ಕರ್ಮಗಳ ವಿಮೋಚನೆಗೆ ತಿಂಗಳಿಗೆ ಒಮ್ಮೆಯಾದ್ರು ಆ ತಾಯಿ ದರ್ಶನ ಪಡೆಯೋದು ದರ್ಶನ್ ವಾಡಿಕೆ. ಜೈಲಿನಿಂದ ಹೊರ ಬಂದ ಮೇಲೆ ಇದೇ ಮೊದಲ ಭಾರಿಗೆ ದರ್ಶನ್ ಚಾಮುಂಡೇಶ್ವರಿಗೆ ನಮಿಸಿ ಬಂದಿದ್ದಾರೆ. ಪಾಪ ಕರ್ಮಗಳೆಲ್ಲಾ ವಿಮೋಚನೆ ಆಗ್ಲಿ, ಗನ್ ಬಳಸಲು ಲೈಸನ್ಸ್ ಸಿಗಲಿ ಅಂತ ಕೇಳಿಕೊಂಡಿದ್ದಾರೆ. ಅಷ್ಟೆ ಅಲ್ಲ ಮಂಡ್ಯ ಜಿಲ್ಲೆಯಲ್ಲಿರೋ ಆರತಿ ಉಕ್ಕಡ ಮಾರಮ್ಮ ದೇವಿಗೂ ನಮಿಸಿರೋ ದರ್ಶನ್ ಸಂಕಷ್ಟಗಳ ಪರಿಹಾರಕ್ಕೆ ತಡೆ ಒಡೆಸಿ ಬಂದಿದ್ದಾರೆ..
ಫೆ.14ಕ್ಕೆ ಪ್ರೇಮಿಗಳಿಗೆ ಜೋಗಿ ಪ್ರೇಮ್ ಸರ್ಪ್ರೈಸ್; ಮ್ಯಾಜಿಕ್ ಮಾಡಿರೋ ಕೆಡಿಯ ಶಿವ ಶಿವ ಸಾಂಗ್!