Nov 21, 2023, 12:22 PM IST
ಕೈವಾ ಸಿನಿಮಾದ ರೊಮ್ಯಾಂಟಿಕ್ ಸಾಂಗ್ ರಿಲೀಸ್ ಆಗಿದೆ. ನಟಿ ಮೇಘಾ ಶೆಟ್ಟಿ(Megha Shetty) ಹಾಗೂ ಧನ್ವೀರ್ (Dhanveer)ಸಂಕ್ರಾಂತಿ ಸಂಜೆಯಲ್ಲಿ ಪ್ರೀತಿಯ ಮತ್ತಲ್ಲಿ ತೇಲಿದ್ದಾರೆ. ಅಜನೀಶ್ ಲೋಕನಾಥ್ ಮಾಡಿರೋ ಮ್ಯೂಸಿಕ್ನ ಈ ಹಾಡಿಗೆ ನಾಗೇಂಧ್ರ ಪ್ರಸಾದ್ ಪದ ಪೋಣಿಸಿದ್ದು, ಈ ಹಾಡು ಸಂಗೀತ ಪ್ರೀಯರ ಗಮನ ಸೆಳೆಯುತ್ತಿದೆ. ಕೈವದಲ್ಲಿ(Kaiva movie) ನಟ ಧನ್ವೀರ್ ಲುಕ್ ಬದಲಾಗಿದೆ. ಮೇಘಾ ಶೆಟ್ಟಿ ಮುಸ್ಲಿಂ ಹುಡುಗಿ ರೋಲ್ ಮಾಡಿದ್ದು, ಮೇಘಾ ಶೆಟ್ಟಿ ಬ್ಯೂಟಿಫುಲ್ ಆಗಿ ಕಾಣಿಸಿದ್ದಾರೆ. 1983 ಕಾಲಘಟ್ಟದ ಕತೆಯ ಸಿನಿಮಾ ಕೈವ. ಎಲ್ಲವೂ ರೆಟ್ರೋ ಸ್ಟೈಲ್ನಲ್ಲೇ ಚಿತ್ರೀಕರಿಸಿದ್ದಾರೆ ಡೈರೆಕ್ಟರ್ ಜಯತೀರ್ಥ. ರವೀಂದ್ರ ಬಂಡವಾಳ ಹೂಡಿರೋ ಕೈವ ಡಿಸೆಂಬರ್ ಮೊದಲ ವಾರ ರಿಲೀಸ್ ಆಗಲಿದೆ. ಈ ಕೈವದಲ್ಲಿ ನಾಯಕ ಧನ್ವೀರ್.. ನಾಯಕಿ ಮೇಘಾ ಶೆಟ್ಟಿ. ಈ ಕಾಂಬಿನೇಷನ್ನ ಕೈವಾ ಹೇಗಿರುತ್ತೆ ಅಂತ ಕೈವಾ ಟೀಸರ್ ಹೇಳಿತ್ತು.
ಇದನ್ನೂ ವೀಕ್ಷಿಸಿ: ಡಿಸೆಂಬರ್ ಲಕ್ ಹಿಂದೆ ಬಿದ್ದ ಸ್ಯಾಂಡಲ್‌ವುಡ್ ಲಕ್ಕಿ!'YASH-19' ಅನೌನ್ಸ್, ಶೂಟಿಂಗ್‌ಗೆ ಮಹಾ ಪ್ಲ್ಯಾನ್!