Dec 14, 2023, 9:56 AM IST
ಕನ್ನಡ ಚಿತ್ರರಂಗದಲ್ಲಿ ಕಳೆದ ಮೂರು ವಾರಗಳಿಂದ ಸಾಲು ಸಾಲು ಸಿನಿಮಾಗಳು ರಿಲೀಸ್ ಆಗಿದ್ವು. ಆದ್ರೆ ಆ ಸಿನಿಮಾಗಳಲ್ಲಿ ಸಕ್ಸಸ್ ಆಗಿದ್ದು ಮಾತ್ರ ಧನ್ವೀರ್(Dhanveer) ಹಾಗೂ ನಿರ್ದೇಶಕ ಜಯತೀರ್ಥ ಕಾಂಬಿನೇಷನ್‌ನಲ್ಲಿ ಮೂಡಿ ಬಂದ ಕೈವ(Kaiva) ಸಿನಿಮಾ. ಕಳೆದ ವಾರ ಬಿಡುಗಡೆ ಆಗಿದ್ದ ಕೈವ ಕಥೆಗೆ ಸಿನಿ ಪ್ರೇಕ್ಷಕ ಬೆಸ್ಟ್ ರಿವ್ಯೂ ಕೊಟ್ಟಿದ್ದಾರೆ. ಇದರ ಫಲ ಕೈವ ಚಿತ್ರಮಂದಿರಗಳಲ್ಲಿ ಭರ್ಜರಿ ಪ್ರದರ್ಶನ ಮುಂದುವರೆಸಿದೆ. ಹೀಗಾಗಿ ಕೈವ ಚಿತ್ರತಂಡ ಸ್ಯಾಂಡಲ್‌ವುಡ್(Sandalwood) ಕಲಾವಿದರಿಗೆ ಅಂತ ಸೆಲೆಬ್ರಿಟಿ ಶೋ ಹಾಕಿತ್ತು. ಈ ಶೋ ಗೆ ನಟಿ ತಾರಾ ಅನುರಾಧ, ಬೃಂದಾ ಆಚಾರ್ಯ, ನಿರ್ದೇಶಕ ಶಶಾಂಕ್, ಆಶಿಕಾ ರಾಂಗನಾಥ್, ನಟ ದರ್ಶನ್ ಸೇರಿದಂತೆ ಹಲವು ನಟ ನಟಿಯರು ಸಿನಿಮಾ ನೋಡಿ ಖುಷಿ ಪಟ್ಟಿದ್ದು ತಮ್ಮದೇ ಸ್ಟೈಲ್ ನಲ್ಲಿ ವಿಮರ್ಶೆ ಮಾಡಿದ್ದಾರೆ. ಬೆಂಗಳೂರು ಕರಗದ ಹಿನ್ನೆಲೆ ಕಥೆಯ ಕೈವ ಸಿನಿಮಾದಲ್ಲಿ ನಟ ಧನ್ವೀರ್‌ಗೆ ಜೋಡಿಯಾಗಿ ಮೇಘಾ ಶೆಟ್ಟಿ(Megha Shetty) ನಟಿಸಿದ್ದಾರೆ. ಈ ಸಿನಿಮಾವನ್ನ ರವೀಂದ್ರ ಕುಮಾರ್ ನಿರ್ಮಾಣ ಮಾಡಿದ್ದಾರೆ.
ಇದನ್ನೂ ವೀಕ್ಷಿಸಿ: ಐರಾ ಯಶ್‌ಗೆ ಐದನೇ ವರ್ಷದ ಅದ್ಧೂರಿ ಹುಟ್ಟುಹಬ್ಬ..! ಮಗಳ ಹುಟ್ಟುಹಬ್ಬ ಆಚರಿಸಿದ ರಾಕಿಂಗ್ ಸ್ಟಾರ್- ರಾಧಿಕಾ..!