Aug 15, 2023, 9:47 AM IST
ಬಾಲಿವುಡ್‌ನಲ್ಲಿ ಮತ್ತೊಮ್ಮೆ ಧೂಳೆಬ್ಬಿಸೋಕೆ ಶಾರೂಖ್ ಖಾನ್ ಜವಾನ್(Jawaan) ರೂಪದಲ್ಲಿ ಬರ್ತಿದ್ದಾರೆ. ಜವಾನ್ ಸಿನಿಮಾದ 2ನೇ ಟ್ರ್ಯಾಕ್ ರಿಲೀಸ್ ಆಗಿದ್ದು, ಈ ಸಾಂಗ್‌ನಲ್ಲಿ(Song) ಶಾರೂಖ್ ಖಾನ್(Shah Rukh Khan) ಮತ್ತು ನಯನತಾರಾ(Nayanthara) ಶಖತ್ ರೊಮ್ಯಾಂಟಿಕ್ ಆಗಿ ಡಾನ್ಸ್ ಮಾಡಿದ್ದಾರೆ.ಬಿಟೌನ್‌ನ ಫೈಯರ್ ಅಂತ ಕರೆಯುತ್ತಿರೋ ಕಿಂಗ್ ಖಾನ್ ಶಾರುಕ್ ಖಾನ್ ಜವಾನ್ ಸಿನಿಮಾದ ಹಾಡೊಂದು ರಿಲೀಸ್ ಆಗಿದೆ. ಈ ಸಾಂಗ್ ನೋಡಿ ಶಾರುಖ್ ಅಭಿಮಾನಿಗಳ ದಿಲ್ ಖುಷ್ ಆಗಿದೆ. ಯಾಕಂದ್ರೆ ಸೌತ್ನ ಲೇಡಿ ಸೂಪರ್ ಸ್ಟಾರ್ ನಯನತಾರ ಜೊತೆ ಕಿಂಗ್ ಖಾನ್ ಸಿಕ್ಕಾಪಟ್ಟೆ ರೊಮ್ಯಾನ್ಸ್ ಮಾಡಿದ್ದಾರೆ. ಈ ರೊಮ್ಯಾಟಿಂಕ್ ಸಾಂಗ್ ರಿಯಲ್ ಲವ್ ಬರ್ಡ್ಸ್ ಎದೆಯಲ್ಲಿ ಆಸೆಯ ಕಿಚ್ಚು ಹಚ್ಚಿಕೊಂಡು ಓಡಾಡೋ ಹಾಗೆ ಮಾಡಿದ್ದು, ಬಾಲಿವುಡ್‌ನ ನಯಾ ಕ್ಯೂಟ್ ಪೇರ್ ಶಾರುಖ್ ಖಾನ್ ಹಾಗೂ ನಯನತಾರ ಅಂತ ಹೇಳುತ್ತಿದ್ದಾರೆ. ಅಷ್ಟೆ ಅಲ್ಲ ಮತ್ತೊಂದು ಇಂಟ್ರೆಸ್ಟಿಂಗ್ ಏನ್ ಗೊತ್ತಾ..? ಈ ಹಾಡು ಬಿಡುಗಡೆ ಆಗಿ ಒಂದೇ ಗಂಟೆಯಲ್ಲಿ ಮಿಲಿನ್ಸ್ ವೀವ್ಸ್ ಆಗಿದ್ದು, ಸಂಗೀತ ಪ್ರೀಯರ ಮನ ಗೆಲ್ಲುತ್ತಿದೆ. ಅಟ್ಲಿ ನಿರ್ದೇಶನದ ಜವಾನ್ ಸಿನಿಮಾ ಸೆಪ್ಟೆಂಬರ್ 7 ರಂದು ವರ್ಲ್ಡ್ ವೈಡ್ ರಿಲೀಸ್ ಆಗುತ್ತಿದೆ.
ಇದನ್ನೂ ವೀಕ್ಷಿಸಿ: ಗೆದ್ದು ಬೀಗಿದ ರಜನಿ..ಸೋತು ಸುಣ್ಣವಾದ ಚಿರಂಜೀವಿ..! ನಿರ್ಮಾಪಕರ ಕೈ ಹಿಡಿತಾರಂತೆ ಚಿರಂಜೀವಿ..!