Aug 4, 2023, 9:48 AM IST
ಫುಲ್ ಆಕ್ಷನ್ ಪ್ಯಾಕ್ಡ್ , ಡೈಲಾಗ್ ಧಮಾಖ ಜೊತೆ ಕಿಕ್ ಕೊಟ್ಟಿದ್ದಾರೆ ಜೈಲರ್ (jailer) ಸೂರ್ಸ್ಟಾರ್ ರಜಿನಿಕಾಂತ್(rajanikanth). ತಲೈವ ಫ್ಯಾನ್ಸ್ ಟ್ರೈಲರ್ ನೋಡಿ ಫುಲ್ ಹಬ್ಬ ಮಾಡ್ತಿದ್ದಾರೆ. 72ರಲ್ಲೂ ರಜಿನಿಕಾಂತ್ ಅದೇ ಜೋಷ್ ಅದೇ ಸ್ಟೈಲ್.. ಚಿತ್ರದ ಟ್ರೈಲರ್ನಲ್ಲೆ ಸಿನಿಮಾ ಒನ್ ಲೈನ್ ಸ್ಟೊರಿಯನ್ನೂ ಬಿಚ್ಚಿಟ್ಟಿದ್ದಾರೆ ಡೈರೆಕ್ಟರ್ ನೆಲ್ಸನ್. ವಿಶ್ವಾಧ್ಯಂತ ಅಭಿಮಾನಿಗಳನ್ನು ಹೊಂದಿರೋ ತಲೈವಾ ರಜಿನಿಕಾಂತ್ ಜೈಲರ್ ಟ್ರೈಲರ್ ರಿಲೀಸ್ (Trailer release) ಆಗುತ್ತಿದ್ದಂತೆ ಸೋಷಿಯಲ್ ಮೀಡಿಯಾದಲ್ಲಿ ಅಭಿಮಾನಿಗಳ ಸೆಲೆಬ್ರೇಷನ್ ಜೋರಾಗಿದೆ. ಟ್ರೈಲರ್ನ ಹೈಲೈಟ್ಸ್ ಹೇಳೋದಾದ್ರೆ.. ರಜಿನಿಕಾಂತ್ ಮೆಚ್ಯೂರ್ಡ್ ಸಾಲ್ಟ್ ಅಮಡ್ ಪೆಪ್ಪರ್ ಲುಕ್ನಲ್ಲೆ ಕಾಣಿಸಿಕೊಂಡಿದ್ದಾರೆ. ಬಹಳ ವರ್ಷಗಳ ನಂತರ ಪಡೆಯಪ್ಪ ಜೋಡಿ ರಜಿನಿ ರಮ್ಯಾ ಕೃಷ್ಣ ಜೋಡಿಯಾಗಿ ನಟಿಸಿದ್ದಾರೆ. ವೈದ್ಯನೋರ್ವ ನಾಯಕನಿಗಿರುವ ವಿಚಿತ್ರ ರೋಗವೊಂದರ ಬಗ್ಗೆ ತಿಳಿಸುತ್ತಾ ಇಂತಹ ರೋಗ ಇರುವವರು ನೋಡೋಕೆ ಪಾಪದ ಬೆಕ್ಕಿನ ಹಾಗೆ ಕಾಣ್ತಾರೆ, ಆದರೆ ದಿಢೀರನೆ ಹುಲಿಯಾಗಿಬಿಡ್ತಾರೆ ಎಂದು ಬಿಲ್ಡಪ್ ಕೊಡುವ ಮೂಲಕ ರಜಿನಿಕಾಂತ್ ಅವರ ಪಾತ್ರದ ಪರಿಚಯ ಮಾಡಿಸಿದ್ದಾರೆ.
ಇದನ್ನೂ ವೀಕ್ಷಿಸಿ: ರಾಜಕೀಯ ದ್ವೇಷ: ಪೋಷಕರ ಮೇಲಿನ ಸೇಡು..ಮಕ್ಕಳಿಗೆ ವಿಷ ಉಣಿಸಲು ಯತ್ನ