Feb 19, 2022, 2:35 PM IST
ಕನ್ನಡದ ವರನಟ ಡಾ. ರಾಜಕುಮಾರ್ (Dr.Rajkumar) ಅವರ ಅಭಿನಯದ ಕ್ಲಾಸಿಕ್ ಚಿತ್ರಗಳಲ್ಲಿ ಒಂದಾದ 'ಬಬ್ರುವಾಹನ' (Babruvahana) ಚಿತ್ರ ತೆರೆಕಂಡು 45 ವರ್ಷಗಳಾಗಿದೆ. ಹೌದು! ರಾಜ್‌ಕುಮಾರ್ ಸಿನಿಜೀವನದಲ್ಲಿ ಒಂದಾದ 'ಬಬ್ರುವಾಹನ' ಚಿತ್ರವು 1977ರ ಫೆಬ್ರವರಿ 16ರಂದು ಬಿಡುಗಡೆಯಾಗಿತ್ತು. ಮಹಾಭಾರತದ (Mahabharat) ಕಥೆಯನ್ನು ಆಧರಿಸಿ, ಹುಣಸೂರು ಕೃಷ್ಣಮೂರ್ತಿ (Hunsur Krishnamurthy) ಚಿತ್ರಕಥೆ ಬರೆದು ನಿರ್ದೇಶಿಸಿದ ಈ ಚಿತ್ರದಲ್ಲಿ ರಾಜಕುಮಾರ್ ದ್ವಿಪಾತ್ರಗಳಲ್ಲಿ ಕಾಣಿಸಿಕೊಂಡಿದ್ದರು. ಅರ್ಜುನ ಮತ್ತು ಅವನ ಮಗ ಬಬ್ರುವಾಹನನ ಪಾತ್ರಗಳಲ್ಲಿ ಮಿಂಚಿದ್ದರು.
ಡಾ.ರಾಜ್‌ಕುಮಾರ್ ಕಂಚಿನ ಪ್ರತಿಮೆಯನ್ನು ಗುಜರಿ ಅಂಗಡಿಗೆ ಹಾಕಿದ್ದ ಕಳ್ಳರ ಸೆರೆ!
'ಯಾರು ತಿಳಿಯರು ನಿನ್ನ ಭುಜಬಲದ ಪರಾಕ್ರಮ', 'ನಿನ್ನ ಕಣ್ಣ ನೋಟದಲ್ಲಿ' ಸೇರಿದಂತೆ ಚಿತ್ರದ ಎಲ್ಲ ಹಾಡುಗಳು ಈಗಲೂ ಜನಪ್ರಿಯವಾಗಿದೆ. ಕೆ.ಸಿ.ಎನ್. ಗೌಡ (KCN Gowda) ನಿರ್ಮಾಣದ ಈ ಚಿತ್ರದಲ್ಲಿ ಬಿ. ಸರೋಜಾದೇವಿ (B.Sarojadevi), ಕಾಂಚನಾ (Kanchana), ರಾಮಕೃಷ್ಣ (Ramakrishna) ಮುಂತಾದವರು ನಟಿಸಿದ್ದರು. ಈ ಚಿತ್ರವು ಕನ್ನಡದಲ್ಲಿ ಯಶಸ್ವಿ ಪ್ರದರ್ಶನ ಕಂಡಿದ್ದಷ್ಟೇ ಅಲ್ಲ, ತೆಲುಗಿಗೆ 'ಅರ್ಜುನ ಗರ್ವಭಂಗಂ' (Arjuna Garvabhangam) ಮತ್ತು ಹಿಂದಿಗೆ 'ವೀರ್ ಅರ್ಜುನ್' (Veer Arjun) ಎಂಬ ಹೆಸರಿನಲ್ಲಿ ಡಬ್ (Dub) ಆಗಿದ್ದು ವಿಶೇಷ.
ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment