Dec 22, 2023, 9:14 AM IST
ಕಾಂತಾರ- 2 (Kantara-2 )ಸಿನಿಮಾದ ಫಸ್ಟ್ ಲುಕ್ ನೋಡಿ ಅಭಿಮಾನಿಗಳು, ಸಿನಿಮಾ ರಿಲೀಸ್‌ಗಾಗಿ ಕಾಯ್ತಿದ್ದಾರೆ. ಅದ್ರಲ್ಲೂ ಈ ಸಿನಿಮಾದಲ್ಲಿ ಯಾರೆಲ್ಲಾ ನಟಿಸುತ್ತಾರೆ ಅನ್ನೋ ಕುತೂಹಲವೂ ಇದೆ. ಹಲವಾರು ಪಾತ್ರಗಳು ಇರುವುದರಿಂದ ಕಲಾವಿದರ ವಯಸ್ಸನ್ನೂ ನಿಗದಿ ಪಡಿಸಿ, ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದರು. ಅದಕ್ಕೆ ಸಾಕಷ್ಟು ರೆಸ್ಪಾನ್ಸ್ ಬಂದಿದೆ. ಚಿತ್ರತಂಡವೇ ಹೇಳಿಕೊಂಡಂತೆ 25 ಸಾವಿರಕ್ಕೂ ಹೆಚ್ಚು ಜನರು ಅರ್ಜಿ ಸಲ್ಲಿಸಿದ್ದಾರೆ. ಇನ್ನು ಕಿರಿಕ್ ಪಾರ್ಟಿ ಮಾಡಿದಾಗಲೂ ಆಡಿಷನ್‌ಗೆ ಚಿತ್ರತಂಡ ಕಾಲ್ ಮಾಡಿತ್ತು. ಆಗ ಎರಡು ಸಾವಿರಕ್ಕೂ ಹೆಚ್ಚು ಕಲಾವಿದರು ಶೆಟ್ಟರ ಸಿನಿಮಾದಲ್ಲಿ ಪಾತ್ರ ಮಾಡೋಕೆ ಅರ್ಜಿ ಹಾಕಿದ್ರು. ಆದ್ರೀಗ ಕಾಂತಾರ 1 ಚಿತ್ರಕ್ಕೆ ನಿರೀಕ್ಷೆಗೂ ಮೀರಿ ಜನರು ಅರ್ಜಿ ಸಲ್ಲಿಸಿದ್ದಾರೆ. ಈಗಾಗಲೇ ಚಿತ್ರತಂಡ ಆ ಎಲ್ಲಾ 25 ಸಾವಿರ ಅರ್ಜಿ ಪರಿಶೀಲಿಸುವ ಕೆಲಸದಲ್ಲಿ ಬ್ಯುಸಿಯಾಗಿದೆ. ಸಾಮಾನ್ಯ ಕಲಾವಿದರು ಮಾತ್ರವಲ್ಲ, ಈಗಾಗಲೇ ಸಾಕಷ್ಟು ಚಿತ್ರಗಳಲ್ಲಿ ನಟಿಸಿರುವ ನಾಯಕಿಯರು ಅರ್ಜಿ ಹಾಕಿ ಶೆಟ್ಟರಿಗೆ ಅವಕಾಶ ಕೇಳಿದ್ದಾರಂತೆ. ಈ ಮಧ್ಯೆ, ಚಿತ್ರದ ಫಸ್ಟ್ ಲುಕ್(Frist Look) ಮೂಲಕ ಗಮನ ಸೆಳೆದಿರುವ ರಿಷಬ್ ಶೆಟ್ಟಿ, ಸಾಮಾಜಿಕ ಮಾಧ್ಯಮದಲ್ಲಿ ಚಿತ್ರಕ್ಕೆ ಕಲಾವಿದರು ಬೇಕಾಗಿದ್ದಾರೆ. 30 ರಿಂದ 60 ವರ್ಷ ವಯಸ್ಸಿನ ನಟರು ಮತ್ತು 18 ರಿಂದ 60 ವರ್ಷದೊಳಗಿನ ನಟಿಯರ ಅಗತ್ಯವಿರುವುದಾಗಿ ಕೇಳಿದ್ದರು. ಇದಕ್ಕೆ ವ್ಯಾಪಕ ಪ್ರತಿಕ್ರಿಯೆ ಲಭ್ಯವಾಗಿದ್ದು, ಬರೋಬ್ಬರಿ 25,000 ಮಂದಿ ಅರ್ಜಿ ಸಲ್ಲಿಸಿದ್ದಾರೆ. ಚಿತ್ರತಂಡ ಇನ್ನೂ ನಾಯಕಿ ಯಾರೆಂಬುದನ್ನು ಅಂತಿಮಗೊಳಿಸಿಲ್ಲ. ತಮ್ಮ ಪಾತ್ರಕ್ಕೆ ಸೂಕ್ತವಾಗುವ ಈಗಾಗಲೇ ಗುರುತಿಸಿಕೊಂಡ ಮುಖ ಅಥವಾ ಹೊಸಬರ ಹುಡುಕಾಟದಲ್ಲಿ ತಂಡ ತೊಡಗಿಕೊಂಡಿದೆ. ಚಿತ್ರದಲ್ಲಿನ ವಿವಿಧ ಪಾತ್ರಗಳಿಗೆ ಎಚ್ಚರಿಕೆಯಿಂದ ಆಯ್ಕೆ ಮಾಡಲಾಗುತ್ತದೆ ಮತ್ತು ಆಯ್ಕೆಯು ಅರ್ಜಿದಾರರ ಕೌಶಲ್ಯಗಳ ಮೇಲೆ ಅವಲಂಬಿತವಾಗಿರುತ್ತದೆ. ಅಂತಿಮ ಆಡಿಷನ್ ಸುತ್ತುಗಳಲ್ಲಿ ನಿರ್ದಿಷ್ಟವಾಗಿ ಯಾರು ಸೂಕ್ತ ಎಂಬುದು ಸ್ಪಷ್ಟವಾಗಿರುತ್ತದೆ. ಕಾಂತಾರ 1ಕ್ಕೆ ಅಜನೀಶ್ ಲೋಕನಾಥ್ ಅವರ ಸಂಗೀತ ಸಂಯೋಜನೆ ಮತ್ತು ಅರವಿಂದ್ ಕಶ್ಯಪ್ ಅವರ ಡಿಒಪಿ ಅಂತಿಮವಾಗಿದೆ.
ಇದನ್ನೂ ವೀಕ್ಷಿಸಿ: Today Horoscope: ಇಂದು ಗೀತಾ ಜಯಂತಿ ಇದ್ದು, ನಮ್ಮ ದುಃಖ-ಸಂಕಟ ಪರಿಹಾರಕ್ಕೆ ಕೃಷ್ಣನ ಸಲಹೆ ಏನು..?