ನಟಿ ರಚಿತಾ ರಾಮ್‌ಗೆ ಸ್ಯಾಂಡಲ್‌ವುಡ್‌ನಲ್ಲಿ ಬಹು ಬೇಡಿಕೆ ಇದೆ. ಚಂದನವನದಲ್ಲಿ ಹೆಚ್ಚು ಸಂಭಾವನೆ ಪಡೆಯುವ ನಟಿಯರ ಪೈಕಿ ರಚಿತಾ ರಾಮ್ ಕೂಡ ಒಬ್ಬರು. ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ಬಿಜಿಯಾಗಿರುವ ನಟಿ ರಚಿತಾ ರಾಮ್‌ಗೆ ಕೆಲ ದಿನಗಳಿಂದ ತೀವ್ರ ಆಯಾಸ ಉಂಟಾಗುತ್ತಿದೆ. ಅದರಲ್ಲೂ, ಡಿಸೆಂಬರ್ ಆರಂಭದಿಂದಲೂ ರಚಿತಾ ರಾಮ್ ಶೆಡ್ಯೂಲ್ ತುಂಬಾ ಟೈಟ್ ಆಗಿತ್ತು.
ನಟಿ ರಚಿತಾ ರಾಮ್‌ಗೆ (Rachita Ram) ಸ್ಯಾಂಡಲ್‌ವುಡ್‌ನಲ್ಲಿ ಬಹು ಬೇಡಿಕೆ ಇದೆ. ಚಂದನವನದಲ್ಲಿ ಹೆಚ್ಚು ಸಂಭಾವನೆ ಪಡೆಯುವ ನಟಿಯರ ಪೈಕಿ ರಚಿತಾ ರಾಮ್ ಕೂಡ ಒಬ್ಬರು. ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ಬಿಜಿಯಾಗಿರುವ ನಟಿ ರಚಿತಾ ರಾಮ್‌ಗೆ ಕೆಲ ದಿನಗಳಿಂದ ತೀವ್ರ ಆಯಾಸ ಉಂಟಾಗುತ್ತಿದೆ. ಅದರಲ್ಲೂ, ಡಿಸೆಂಬರ್ ಆರಂಭದಿಂದಲೂ ರಚಿತಾ ರಾಮ್ ಶೆಡ್ಯೂಲ್ ತುಂಬಾ ಟೈಟ್ ಆಗಿತ್ತು. ಒಂದ್ಕಡೆ 'ಏಕ್ ಲವ್ ಯಾ (Ek Love Ya), ಇನ್ನೊಂದ್ಕಡೆ 'ಲವ್ ಯೂ ರಚ್ಚು' (Love You Rachchu) ಪ್ರಚಾರ ಕಾರ್ಯಗಳಲ್ಲಿ ರಚಿತಾ ರಾಮ್ ಬಿಜಿಯಾಗಿದ್ದರು. ‘ಏಕ್ ಲವ್ ಯಾ’ ಪ್ರಮೋಷನ್ ನಿಮಿತ್ತ ಇತ್ತೀಚೆಗಷ್ಟೇ ಶಿವಮೊಗ್ಗಕ್ಕೂ ನಟಿ ರಚಿತಾ ರಾಮ್ ಭೇಟಿ ನೀಡಿದ್ದರು.
Ek Love Ya: ಸಿಗರೇಟ್ ಸೀನ್‌ಗೆ ಸಂಬಂಧಪಟ್ಟಂತೆ ನೇರವಾಗಿ ಉತ್ತರಿಸಿದ ರಚಿತಾ ರಾಮ್
ನಾನ್ ಸ್ಟಾಪ್ ಶೂಟಿಂಗ್ ಮತ್ತು ಪ್ರಮೋಷನ್ ಕಾರ್ಯಕ್ರಮಗಳಿಂದ ನಟಿ ರಚಿತಾ ರಾಮ್ ಅತಿಯಾದ ಒತ್ತಡಕ್ಕೆ ಒಳಗಾಗಿದ್ದರು. ಒಂದ್ಕಡೆ ಸ್ಟ್ರೆಸ್, ಇನ್ನೊಂದ್ಕಡೆ ಶೀತ ಹಾಗೂ ಜ್ವರ ಕೂಡ ರಚಿತಾ ರಾಮ್‌ಗೆ ಕಾಣಿಸಿಕೊಳ್ತು. ಹೀಗಾಗಿ, ಶಿವಮೊಗ್ಗದಿಂದ ವಾಪಸ್ ಬಂದ್ಮೇಲೆ ನಟಿ ರಚಿತಾ ರಾಮ್ ಆಸ್ಪತ್ರೆಗೆ ದಾಖಲಾಗಿದ್ದರು. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಚೇತರಿಸಿಕೊಂಡಿರುವ ನಟಿ ರಚಿತಾ ರಾಮ್ ಡಿಸೆಂಬರ್ 28 ರಂದು ಡಿಸ್ಚಾರ್ಜ್ ಆಗಿದ್ದಾರೆ. ಸದ್ಯ ಮನೆಯಲ್ಲಿ ರಚಿತಾ ರಾಮ್ ವಿಶ್ರಾಂತಿ ಪಡೆಯುತ್ತಿದ್ದಾರೆ. ಆದರೂ ಸಿನಿಮಾ ಪ್ರಚಾರಕ್ಕೆ ಸಾಥ್ ನೀಡಿದ ರಚಿತಾ 'ಲವ್ ಯೂ ರಚ್ಚು' ಸಿನಿಮಾ ನೋಡುವಂತೆ ವೀಡಿಯೋ ಮೂಲಕ ತಿಳಿಸಿದ್ದಾರೆ.
ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment