ShivrajKumar: ಆನಂದ್' ಸಿನಿಮಾದಿಂದ 'ವೇದ' ಚಿತ್ರದವರೆಗೆ ಹೆಜ್ಜೆ: ನೆನಪು ಮೆಲುಕು ಹಾಕಿದ ಶಿವಣ್ಣ

Dec 24, 2022, 2:28 PM IST

ಶಿವಣ್ಣನ 125ನೇ ಸಿನಿಮಾ ವೇದ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಈ ಬಗ್ಗೆ ಅವರು ಸುವರ್ಣ ನ್ಯೂಸ್ ಜೊತೆ ಮಾತನಾಡಿದ್ದಾರೆ. ನಾನು 125ನೇ ಸಿನಿಮಾ ಮುಗಿಸಿಲ್ಲ ಎಂದು ಅನಿಸುತ್ತದೆ. ಮೊದಲನೇ ಸಿನಿಮಾ ಮಾಡುವಾಗ ಎಷ್ಟು ಜೋಶ್‌ ಇತ್ತೋ ಈಗಲೂ ಅದೇ ಜೋಶ್‌ ಇದೆ. ಅದೇ ಗುಂಗು ಇದೆ. ಸಿನಿಮಾದಲ್ಲಿ ನಂಬರ್‌ ಅಂತ ಬಂದಾಗ ತುಂಬಾ ಮುಖ್ಯವಾಗುತ್ತದೆ. ಮೊದನೇ ಸಿನಿಮಾ ಆನಂದ್‌, 25ನೇ ಸಿನಿಮಾ ಮನ ಮಿಡಿಯಿತು. 50ನೇ ಸಿನಿಮಾ ಎಕೆ 47,  75ನೇ ಸಿನಿಮಾ ಶ್ರೀರಾಮ, 100ನೇ ಸಿನಿಮಾ ಜೋಗಯ್ಯ ಹಾಗೂ 125ನೇ ಸಿನಿಮಾ ವೇದ. ಹೀಗೆ ಎಲ್ಲಾದರಲ್ಲೂ ನಂಬರ್‌ ಮುಖ್ಯವಾಗುತ್ತದೆ. ನಾವು ಹೇಗೆ ಮುಂದೆ ಹೋಗಬಹುದು ಎನ್ನುವುದಕ್ಕೆ, ಎಲ್ಲಾ ಟೈಮಿನಲ್ಲೂ ಒಳ್ಳೆ ಸಿನಿಮಾ ಆಗಬೇಕೆಂದು ಇಲ್ಲ. ಆದರೆ ಒಳ್ಳೆ ಸಿನಿಮಾ ಮಾಡಲು ಪ್ರಯತ್ನಿಸಬೇಕು ಎಂದು ಶಿವಣ್ಣ ಹೇಳಿದರು.