Aug 12, 2023, 2:42 PM IST
ಪ್ರೇಕ್ಷಕರ ಮನರಂಜನೆಗಾಗಿ ಸದಾಕಾಲ ಹೊಸತನವನ್ನು ನೀಡುತ್ತಿರುವ ಸ್ಟಾರ್ ಸುವರ್ಣ ವಾಹಿನಿಯು ಇದೀಗ ಸುವರ್ಣ ವರ್ಲ್ಡ್ ಪ್ರೀಮಿಯರ್ ಮೂವಿ ನಟ ರಾಕ್ಷಸ ಡಾಲಿ ಧನಂಜಯ್ ಅಭಿನಯದ "ಗುರುದೇವ್ ಹೊಯ್ಸಳ" ಸಿನಿಮಾವನ್ನು(Gurudev Hoysala movie) ಪ್ರಸಾರ ಮಾಡಲು ಸಜ್ಜಾಗಿದೆ. ಸ್ವಾತಂತ್ಯ ದಿನಾಚರಣೆಯ ಪ್ರಯುಕ್ತ ಈ ಸಿನಿಮಾವು ಕಿರುತೆರೆಯಲ್ಲಿ ರಾರಾಜಿಸಲಿದೆ. ಇದೇ ಆಗಸ್ಟ್ 13 ರಂದು ಭಾನುವಾರ ಸಂಜೆ 6 ಗಂಟೆಗೆ ಈ ಸಿನಿಮಾ ಪ್ರದರ್ಶನ ಗೊಳ್ಳುತ್ತಿದೆ. ಈ ನಿಟ್ಟಿನಲ್ಲಿ ಸ್ಟಾರ್ ಸುವರ್ಣ(Star Suvarna) ವಾಹಿನಿಯು ಪ್ರೇಕ್ಷಕರಿಗಾಗಿ ಉಡುಗೊರೆಯನ್ನು ನೀಡಲು ಸಜ್ಜಾಗಿದೆ. 'ಗುರುದೇವ್ ಹೊಯ್ಸಳ' ಸಿನಿಮಾವನ್ನು ಟಿವಿಯಲ್ಲಿ ನೋಡಿ, ಅಲ್ಲಿ ಕೇಳುವ 2 ಸರಳ ಪ್ರಶ್ನೆಗಳಿಗೆ ಸರಿಯಾದ ಉತ್ತರ ನೀಡಿದರಿಗೆ 43 ಇಂಚಿನ LED TV ಯನ್ನು ಗಿಫ್ಟ್ ಆಗಿ ಕೊಡುತ್ತಿದ್ದಾರೆ.
ಇದನ್ನೂ ವೀಕ್ಷಿಸಿ: ರೈತರ ಪರ ಧ್ವನಿ ಎತ್ತಿದ 'ಕ್ಷೇತ್ರಪತಿ': ಖಡಕ್ ಡೈಲಾಗ್ ಹೊಡೆದು ಅಬ್ಬರಿಸಿದ ಗುಲ್ಟು ಹೀರೋ !