ಘೋಸ್ಟ್ ಸುದ್ದಿಗೋಷ್ಠಿಯಲ್ಲಿ ಅಮ್ಮನ ನೆನಪಲ್ಲಿ ಶಿವಣ್ಣ! ಹ್ಯಾಟ್ರಿಕ್‌ ಹಿರೋ ಆನಂದ್ ಲುಕ್ ಹೇಗೆ ಸೃಷ್ಟಿಯಾಯ್ತು ?

ಘೋಸ್ಟ್ ಸುದ್ದಿಗೋಷ್ಠಿಯಲ್ಲಿ ಅಮ್ಮನ ನೆನಪಲ್ಲಿ ಶಿವಣ್ಣ! ಹ್ಯಾಟ್ರಿಕ್‌ ಹಿರೋ ಆನಂದ್ ಲುಕ್ ಹೇಗೆ ಸೃಷ್ಟಿಯಾಯ್ತು ?

Published : Oct 17, 2023, 10:04 AM IST

ಅದೆಷ್ಟೇ ದೊಡ್ಡ ಸೂಪರ್ ಸ್ಟಾರ್ ಆಗಲಿ. ಕೋಟ್ಯಾಂತರ ಅಭಿಮಾನಿಗಳಿರಲಿ. ಆದ್ರೆ ಅಮ್ಮನಿಗೆ ಮಗ ಮಗಾನೆ. ಹಾಗೇನೆ ಆ ಮಗನಿಗೂ ಕೂಡ ಅಮ್ಮನೇ ಎಲ್ಲಾ. ಅಷ್ಟಕ್ಕೂ ಈಗ ಯಾಕೆ ಈ ಮಾತು ಹೇಳ್ತಿದ್ದೇವೆ ಗೊತ್ತಾ ? ಅಮ್ಮನ ಬಗ್ಗೆ ಶಿವಣ್ಣ ಹೇಳಿದ ಆ ಮಾತು ಏನು ಗೊತ್ತಾ ? ಅಷ್ಟಕ್ಕೂ ಶಿವಣ್ಣ ಈ ಮಾತು ಹೇಳೋಕೆ ಕಾರಣ ಘೋಸ್ಟ್ ಸಿನಿಮಾದಲ್ಲಿ ಶಿವಣ್ಣನ ಯಂಗರ್ ಲುಕ್. 

ನಟ ಶಿವರಾಜ್‌ ಕುಮಾರ್‌ ಅವರಿಗೆ ಈಗ 61 ವರ್ಷ ವಯಸ್ಸು. ಆದರೆ 38 ವರ್ಷದ ಹಿಂದೆ ಆನಂದ್ ಸಿನಿಮಾ ಬಂದಾಗ ಶಿವಣ್ಣ ಹೇಗಿದ್ರೋ ಅದೇ ಲುಕ್ ಘೋಸ್ಟ್‌ನಲ್ಲಿದೆ. ಹೀಗಾಗಿ ಇವತ್ತು ನನ್ನಮ್ಮ ಪಾರ್ವತಮ್ಮ ಇದ್ರಿದ್ರೆ ಈ ಲುಕ್ ನೋಡಿ ತುಂಬಾ ಖುಷಿ ಪಡುತ್ತಿದ್ರು ಅಂತ ಭಾವುಕರಾಗಿದ್ರು ಶಿವಣ್ಣ. ಪಾರ್ವತಮ್ಮ ರಾಜ್ ಕುಮಾರ್.. ಅದೆಷ್ಟೋ ಜನರಿಗೆ ಅನ್ನ ಹಾಕಿದ ಕೈ ಇದು. ರಾಜ್ ಕುಮಾರ್ ಆದಿಯಾಗಿ ಶಿವಣ್ಣ, ಅಪ್ಪು, ರಾಘಣ್ಣನ ಏಳಿಗೆಯಲ್ಲಿ ಪಾರ್ವತಮ್ಮನೇ ಎಲ್ಲ. ಪಾರ್ವತಮ್ಮ ನಿಧನ ಹೊಂದಿ 5 ವರ್ಷ ಆಗಿದೆ. ಇಂದಿಗೂ ನನ್ನಮ್ಮ ಇಲ್ಲ ಅನ್ನೋ ನೋವು ಶಿವಣ್ಣನ ಕಾಡುತ್ತಲೇ ಇದೆ ಅಂತ ಶಿವಣ್ಣನ ಈ ಮಾತುಗಳನ್ನ ಕೇಳಿದ್ರೆ ಗೊತ್ತಾಗುತ್ತೆ. ಘೋಸ್ಟ್‌ನಲ್ಲಿ(Ghost) ಶಿವಣ್ಣ ಬಾಲಿವುಡ್ ನಟ ಅನುಪಮ್ ಖೇರ್(Anupam Kher) ಕಮಾಲ್ ಮಾಡ್ತಾರೆ. ಇಂಟ್ರೆಸ್ಟಿಂಗ್ ಏನ್ ಗೊತ್ತಾ.? ಶಿವಣ್ಣ ಹಾಗೂ ಅನುಪಮ್ ಖೇರ್ ನಡೆದುಕೊಂಡು ಬರೋ ದೃಶ್ಯವೊಂದು ಇತ್ತೀಚೆಗೆ ವೈರಲ್ ಆಗಿತ್ತು. ಇದನ್ನ ಶೂಟ್ ಮಾಡಿದ್ದೇ ಅನುಪಮ್ ಖೇರ್. ಆ ದೃಶ್ಯ ವೈರಲ್ ಆದ್ಮೇಲೆ ಘೋಸ್ಟ್ ಸಿನಿಮಾದಲ್ಲೂ ಬಳಸಿಕೊಳ್ಳಲಾಯ್ತಂತೆ. 

ಇದನ್ನೂ ವೀಕ್ಷಿಸಿ:  RSS ಕಥೆಗೆ ರಾಜಮೌಳಿ ಡೈರೆಕ್ಟರ್‌..ಇದು ನಿಜಾನ ? ಮೌಳಿ ಚಿತ್ರದಲ್ಲಿ ದೈವ ಭಕ್ತಿ, ಧರ್ಮ ಪರಿಪಾಲನೆ..!

02:59ಜಯಪ್ರಕಾಶ್ ಶೆಟ್ಟಿ ನಟನೆ, ಕನ್ನಡ-ತುಳು ಭಾಷೆಯ 'ಬನ' ರಿಲೀಸ್ ಡೇಟ್ ಅನೌನ್ಸ್!
02:24ನೆಪೋಟಿಸಂ ಬಗ್ಗೆ ಪ್ರಿಯಾಂಕಾ ಉಪೇಂದ್ರ ಹೇಳಿದ್ದೇನು..?!
04:57ಅಪ್ಪನ ಆಸೆ.. ಮಗಳ ಕನಸು.. ಅಪ್ಪ ಇಟ್ಟ ಹೆಸರಲ್ಲೇ ಬಿಜಿನೆಸ್​ಶುರು ಮಾಡಿದ ಅಪ್ಪು ಪುತ್ರಿ ವಂದಿತಾ..!
02:36Yash: ನಟ ಯಶ್​ ಹೃದಯವಂತ, ಜೊತೆ ಕೆಲಸ ಮಾಡಿದ್ದು ಅದ್ಭುತ ಅನುಭವ: ತಾರಾ ಸುತಾರಿಯಾ
08:02Toxic Movie: ಲಸ್ಟ್ ಸ್ಟೋರೀಸ್, ಕಬೀರ್ ಸಿಂಗ್ ಆಯ್ತು; ಮದುವೆಯಾಗಿ ಮಗು ಆದ್ರೂ ಕಮ್ಮಿಯಾಗಿಲ್ಲ Kiara Advani ಬ್ಯೂಟಿ
09:56Yash Toxic Movie Tabaahi Song: ಯಶ್‌, ಕಿಯಾರಾ ಅಡ್ವಾಣಿ ಕೆಮಿಸ್ಟ್ರಿಗೆ ದಂಗಾದ ಇಂಟರ್‌ನೆಟ್‌ ಜಗತ್ತು!
04:04ಶಿವಣ್ಣ-ಧನಂಜಯ್ ಮತ್ತೊಮ್ಮೆ ಜೊತೆಯಾಟ.. ಹೇಮಂತ್ ರಾವ್ ನಿರ್ದೇಶನದಲ್ಲಿ '...ಡ್ರೀಮ್ ಥಿಯೇಟರ್..!
09:57Darshan Thoogudeepa: ಡಿ ಗ್ಯಾಂಗ್ ರಹಸ್ಯ- ನಟ ದರ್ಶನ್ ಬಚಾವ್ ಮಾಡೋಕೆ ನಡಿತಿರೋ ಸಾಕ್ಷ್ಯನಾಶದ ಸೂತ್ರಧಾರಿ ಯಾರು?
05:49Toxic: Ladies & Ladies Teaser: 3 ಟೀಸರ್.. 100 ಮ್ಯಾಟರ್: ಇದ್ರಲ್ಲಿ ಲೇಡೀಸ್ ಗ್ಯಾಂಗ್ ಆರ್ಭಟ!
07:55Toxic: ಟಾಕ್ಸಿಕ್ ಸೌಂದರ್ಯ & ಸಮರ; ಲೇಡೀಸ್ ಸ್ಪೆಷಲ್ ಟೀಸರ್ ಸೆನ್ಸೇಷನ್‌ ಏನ್ ಹೇಳ್ತಿದೆ?
Read more