Aug 1, 2023, 2:28 PM IST
ಕ್ರೇಜಿಸ್ಟಾರ್ ರವಿಚಂದ್ರನ್ ಹಾಗೂ ಹ್ಯಾಟ್ರಿಕ್ ಹೀರೋ ಡಾಕ್ಟರ್ ಶಿವರಾಜ್ ಕುಮಾರ್(Shivraj Kumar) ಬೆಸ್ಟ್ ಫ್ರೆಂಡ್ಸ್. ಇವರಿಬ್ಬರ ಮಧ್ಯೆ ಇರೋ ಗೆಳೆತನ ಕನ್ನಡ ಚಿತ್ರರಂಗದಲ್ಲಿ ಮತ್ಯಾವ ಹೀರೋಗಳಲ್ಲೂ ಕಾಣ ಸಿಗಲ್ಲ. ಸುಮಾರು 40ಕ್ಕೂ ಹೆಚ್ಚು ವರ್ಷದ ಹಳೆಯ ಸ್ನೇಹ(Friendship) ಇವರಿಬ್ಬರದ್ದು, ಇಬ್ಬರ ಮಧ್ಯೆ ಫ್ರೆಂಡ್ ಶಿಪ್ ಹೇಗಾಯ್ತು ಗೊತ್ತಾ.? ಅದಕ್ಕೆ ಕಾರಣ ಕ್ರೇಜಿಸ್ಟಾರ್ ರವಿಚಂದ್ರನ್( Ravichandran) ತಂದೆ ವೀರಸ್ವಾಮಿ ಅವರ ಈಶ್ವರಿ ಪ್ರೊಡಕ್ಷನ್ ಹೌಸ್. ಈ ಸಂಸ್ಥೆಯಲ್ಲಿ ಡಾಕ್ಟರ್ ರಾಜ್ ಕುಮಾರ್ರ ಹಲವು ಸಿನಿಮಾಗಳು ನಿರ್ಮಾಣ ಆಗಿದೆ. ಸಿನಿಮಾ ಶೂಟಿಂಗ್ ಸೆಟ್ಗೆ ವೀರಸ್ವಾಮಿ ಅವರ ಪುತ್ರ ರವಿಚಂದ್ರನ್ ಆಗಾಗ ಹೋಗುತ್ತಿದ್ರು. ಅತ್ತ ಕಡೆ ಡಾಕ್ಟರ್ ರಾಜ್ ಕುಮಾರ್ ಹಿರಿ ಮಗ ಶಿವರಾಜ್ ಕುಮಾರ್ ಕೂಡ ಶೂಟಿಂಗ್ಗೆ ಬರ್ತಿದ್ರು. ಇಲ್ಲಿಂದ ಇಬ್ಬರ ಸ್ನೇಹ ಹುಟ್ಟಿಕೊಳ್ತು. ಶಿವಣ್ಣ ಹಾಗು ರವಿ ಚಂದ್ರನ್ಗೆ ಒಂದೇ ವಯಸ್ಸು, ಶಿವಣ್ಣನಿಗೆ 61 ವರ್ಷ ಆದ್ರೆ ರವಿಚಂದ್ರನ್ಗೆ 62 ವರ್ಷ. ಅಷ್ಟೆ ಅಲ್ಲ ಚಿತ್ರರಂಗದಕ್ಕೆ ಒಟ್ಟಿಗೆ ಬಂದವರು ಈ ಕೋದಂಡ ರಾಮ ಜೋಡಿ. ರಾಜ್ಕುಮಾರ್ ಅವರ ಧೂಮಕೇತು ಸಿನಿಮಾದಲ್ಲಿ ಚೈಲ್ಡ್ ಆರ್ಟಿಸ್ಟ್ ಆಗಿ ರವಿಚಂದ್ರನ್ ನಟಿಸಿದ್ರು. ಅತ್ತ ಶಿವಣ್ಣ ಶ್ರೀನಿವಾಸ ಕಲ್ಯಾಣ ಸಿನಿಮಾದಲ್ಲಿ ಬಾಲ ನಟನಾಗಿ ಬಣ್ಣ ಹಚ್ಚಿದ್ರು. ಅಷ್ಟೆ ಅಲ್ಲ ಶಿವಣ್ಣ 24 ವರ್ಷ ಹುಡುಗನಾಗಿದ್ದಾಗ ಆನಂದ್ ಸಿನಿಮಾ ಮೂಲಕ ಹೀರೋ ಆಗಿ ಬೆಳ್ಳಿತೆರೆ ಪ್ರವೇಶಿಸಿದ್ರು. ಅತ್ತ ಕಡೆ ಅದೇ ವಯಸ್ಸಿನಲ್ಲಿ ಕ್ರೇಜಿಸ್ಟಾರ್ ನಿರ್ಮಾಪಕನಾಗಿ ಚಿತ್ರರಂಗಕ್ಕೆ ಬಂದ್ರು. ಹೀಗೆ ಸಿನಿಮಾ ರಂಗದಲ್ಲಿ ಒಟ್ಟೊಟ್ಟಿಗೆ ಬೆಳೆದ ಈ ಕಿಲಾಡಿ ಜೋಡಿ ಸ್ಯಾಂಡಲ್ವುಡ್ನ ಸ್ನೇಹಿತರಿಗೆ ಮಾಧರಿ.
ಇದನ್ನೂ ವೀಕ್ಷಿಸಿ: ಸುವರ್ಣ ನ್ಯೂಸ್‌ನಲ್ಲಿ ವರದಿಯಾಗ್ತಿದ್ದಂತೆ ಫೀಲ್ಡ್‌ಗೆ ಇಳಿದ ಜಿಲ್ಲಾಡಳಿತ: ಮಹಿಳಾ ಸಚಿವರೇ ಇಲ್ನೋಡಿ..!