ಅಣ್ಣಾವ್ರ ‘ತಾಯಿ ತಕ್ಕ ಮಗ’ ರಿಲೀಸ್ ವೇಳೆ ನಡೆದಿತ್ತು ಅನಾಹುತ;ಸಂಜಯ್ ಥಿಯೇಟರ್​ನಲ್ಲಿ ಇಬ್ಬರ ಬಲಿ

Dec 31, 2024, 3:55 PM IST

ಪುಷ್ಪ-2 ಸಿನಿಮಾ ರಿಲೀಸ್ ಟೈಂನಲ್ಲಿ ಆದ ಕಾಲ್ತುಳಿತಕ್ಕೆ ಒಬ್ಬ ಮಹಿಳೆ ಬಲಿಯಾಗಿದ್ದು, ಆ ಕೇಸ್​ನಲ್ಲಿ ನಾಯಕನಟ ಅಲ್ಲು ಅರ್ಜುನ್ ಜೈಲಿಗೆ ಹೋಗಿದ್ದು ನಿಮಗೆ ಗೊತ್ತೇ ಇದೆ. ಇಂಥದ್ದೇ ಕಾಲ್ತುಳಿತ ಪ್ರಕರಣ ಬೆಂಗಳೂರಿನಲ್ಲೂ ನಡೆದು ಇಬ್ಬರು ಚಿತ್ರಪ್ರಿಯರು ಬಲಿಯಾಗಿದ್ದ ಸಂಗತಿ ನಿಮಗೆ ಗೊತ್ತಾ..? 1978 ಡಿಸೆಂಬರ್ 13ನೇ ತಾರೀಖು ಡಾ.ರಾಜ್​ಕುಮಾರ್ ನಟನೆಯ ತಾಯಿಗೆ ತಕ್ಕ ಮಗ ಸಿನಿಮಾ ರಿಲೀಸ್ ಆಗಿತ್ತು. ಅದು ಅಣ್ಣಾವ್ರು ಪೀಕ್​ನಲ್ಲಿದ್ದ ಕಾಲ. ರಾಜ್​ಕುಮಾರ್ ಸಿನಿಮಾ ರಿಲೀಸ್ ಆಗುತ್ತೆ ಚಿತ್ರಮಂದಿರದಮುಂದೆ ಜನಜಾತ್ರೆನೇ ಸೇರ್ತಾ ಇತ್ತು. ವರನಟನನ್ನ ತೆರೆ ಮೇಲೆ ನೋಡೋದಕ್ಕೆ ಅಭಿಮಾನಿಗಳು ಮಗಿಬೀಳ್ತಾ ಇದ್ರು.ತಾಯಿಗೆ ತಕ್ಕ ಮಗ ರಿಲೀಸ ಆದ ದಿನ ಬೆಂಗಳೂರಿನ ಚಾಮರಾಜ್ ಪೇಟೆಯ ಸಂಜಯ್ ಚಿತ್ರಮಂದಿರದಲ್ಲಿ ಅದ್ಯಾಪರಿ ಜನ ಸೇರಿದ್ರು ಅಂದ್ರೆ ಟಿಕೆಟ್ ಕೊಡುವಾಗ ಕಾಲ್ತುಳಿತ ಸಂಭವಿಸಿ ಇಬ್ಬರು ಅಲ್ಲಿಯೇ ಪ್ರಾಣ ಬಿಟ್ಟಿದ್ರು.ಹೌದು ಟಿಕೆಟ್ ತೆಗೆದುಕೊಳ್ಳೋಕೆ ಹೋಗಿ ಇಬ್ಬರು ಅಭಿಮಾನಿಗಳು ಪ್ರಾಣ ಬಿಟ್ಟಿದ್ದನ್ನ ನೋಡಿ ಡಾ.ರಾಜ್​ಕುಮಾರ್ ಅತೀವ ದುಃಖ ಪಟ್ಟಿದ್ರು. ಹೇಳಿ ಕೇಳಿ ಅಭಿಮಾನಿಗಳನ್ನ ದೇವರು ಅಂತ ಕರೆದವರು ಅಣ್ಣಾವ್ರು. 

ಒಂದು ನಿಮಿಷವೂ ಯೋಚಿಸದೇ ತಲೆ ಬೋಳಿಸಿದ ರಾಮಾಚಾರಿ ಚಾರುಲತಾ; ಫೋಟೋ ವೈರಲ್