ರಿಲೀಸ್‌ಗೂ ಮುನ್ನ ಬಾಕ್ಸಾಫೀಸ್‌ನಲ್ಲಿ ಶುರುವಾಯ್ತು ಡಾನ್ ಜಯರಾಜ್ ಹಫ್ತಾ ವಸೂಲಿ!

Oct 20, 2022, 11:16 AM IST

ಡಾನ್ ಜಯರಾಜ್... ಒಂದ್ ಕಾಲದಲ್ಲಿ ಇಡೀ ಬೆಂಗಳೂರನ್ನ ನಡುಗಿಸಿದ್ದ ಅಂಡರ್‌ವರ್ಲ್ಡ್‌ ಜಗತ್ತಿನ ದೊರೆ. ಬೆಂಗಳೂರು ಭೂಗತ ಜಗತ್ತನ್ನ ಒಂದು ರೌಂಡ್ ಸುತ್ತು ಹೊಡೆದ್ರೆ ಇಂದಿಗೂ ಸಿಗೋ ಕುರುಹುಗಳೇನಾದ್ರು ಇದ್ರೆ ಅದು ಜಯರಾಜ್ ಮಾತ್ರ. ಜಯರಾಜ್ ಎಲ್ಲಿಂದೆಲ್ಲಾ ಹಫ್ತಾ ವಸೂಲಿ ಮಾಡುತ್ತಿದ್ದ ಅನ್ನೋದಕ್ಕೆ ಹಲವು ಕತೆಗಳು ಇವೆ. ಇದೀಗ ಈ ಡಾನ್ ಜಯರಾಜ್ ಸ್ಯಾಂಡಲ್ವುಡ್ ಬಾಕ್ಸಾಫೀಸ್‌ನಲ್ಲೂ ಹಫ್ತಾ ವಸೂಲಿಗೆ ಇಳಿದಿದ್ದಾರೆ. ಅದು ಹೆಡ್‌ಬುಷ್ ಸಿನಿಮಾ ಮೂಲಕ. ಹೆಡ್ ಬುಷ್. ಡಾಲಿ ಧನಂಜಯ್ ಡಾನ್ ಜಯರಾಜ್ ಪಾತ್ರದಲ್ಲಿ ನಿಮ್ಮ ಎದೆ ನಡುಗಿಸೋಕೆ ಸಿದ್ಧವಾಗಿರೋ ಸಿನಿಮಾ. ಜಯರಾಜ್ ಅವರ ಲೈಫ್ ಜರ್ನಿಯ ಕಥೆ ಹೇಳೋ ಈ ಮೂವಿ ಈಗಾಗ್ಲೆ ಟ್ರೈಲರ್, ಹಾಡು, ಟೀಸರ್ ಮೂಲಕ ಹಲವು ದಾಖಲೆಗಳನ್ನ ಬರೆದಿದೆ. ಜಯರಾಜ್ ಆರ್ಭಟ ನೋಡೋದಕ್ಕೆ ಇನ್ನೆರಡು ದಿನ ಬಾಕಿ ಇದೆ. 

ಅಷ್ಟರೊಳಗೆ ಡಾನ್ ಜಯರಾಜ್ ಅಲಿಯಾಸ್ ಡಾನ್ ಡಾಲಿ ಧನಂಜಯ್ ಸ್ಯಾಂಡಲ್‌ವುಡ್ ಡಾಖಲೆ ಪುಟದಲ್ಲಿ ಹೊಸ ಅಧ್ಯಾಯ ಬರೆದಿದ್ದಾರೆ. ಅದು ಬರೋಬ್ಬರಿ 22 ಕೋಟಿಗೆ ಹೆಡ್ಬುಷ್ ಮಾರಾಟವಾಗೋ ಮೂಲಕ ಧನಂಜಯ್ ಗಲ್ಲಾಪೆಟ್ಟಿಗೆಯಲ್ಲಿ ನೂತನ ರೆಕಾರ್ಡ್ ಬರೆದಿದ್ದಾರೆ. ಹೆಡ್ಬುಷ್ ಧನಂಜಯ್ರ ಡಾಲಿ ಪ್ರೊಡಕ್ಷನ್ ನಿರ್ಮಾಣದ ಎರಡನೇ ಸಿನಿಮಾ. ಈ ಸಿನಿಮಾದ ಕ್ವಾಲಿಟಿ, ಕಂಟೆಂಟ್ ನೋಡಿರೋ ಜೀ ಸ್ಟುಡಿಯೋ ಫಿದಾ ಆಗಿದ್ದು, ಡಾಲಿ ಜಯರಾಜ್ ಕ್ರೇಜ್ ನೋಡಿ  ದೊಡ್ಡ ಡೀಲ್ ಮಾಡಿದೆ. ಹೆಡ್ಬುಷ್ ಸಿನಿಮಾದ ಟಿವಿ ರೈಟ್ಸ್, ಡಿಜಿಟಲ್ ಹಕ್ಕು, ಒಪಭಾಷಾ ಡಬ್ಬಿಂಗ್ ಹಕ್ಕು, ಹಾಗು ವಿತರಣಾ ಹಕ್ಕು ಎಲ್ಲವೂ ಸೇರಿ ಬರೋಬ್ಬರಿ 22 ಕೋಟಿ ಕೊಟ್ಟು ಧನಂಜಯ್‌ರ ಹೆಡ್ಬುಷ್ ಸಿನಿಮಾವನ್ನ ಖರೀದಿಸಿದ್ದಾರೆ. ಡಾನ್ ಜಯರಾಜ್ ಅಂದ್ರೆ ಬೆಂಗಳೂರು ಅಂಡರ್ವರ್ಲ್ಡ್ ಮಾತ್ರ ಅಲ್ಲ. ಮುಂಬೈ, ಹೈದರಾಬಾದ್, ಚನ್ನೈಗೂ ಗೊತ್ತು. ಹೀಗಾಗಿ ಈ ಸಿನಿಮಾನ ದೇಶಾದ್ಯಂತ ಬಿಡುಗಡೆ ಮಾಡೋದಕ್ಕೆ ಪ್ಲಾನ್ ಮಾಡಿದ್ದಾರೆ. 

ಹೆಡ್‌ಬುಷ್: ರೌಡಿ ಗಂಗನ ಪಾತ್ರಕ್ಕೆ ಯೋಗಿ ಒಪ್ಪಿದ್ದೇಕೆ ಗೊತ್ತಾ?

ಹೀಗಾಗಿ ಬಾಲಿವುಡ್, ಕಾಲಿವುಡ್, ಟಾಲಿವುಡ್ ಸಿನಿಮಾ ವಿಮರ್ಷಕರೂ ಕೂಡ ಹೆಡ್ಬುಷ್ ಟ್ರೈಲರ್ ನೋಡಿ ಮೆಚ್ಚಿಕೊಂಡಿದ್ದಾರೆ. ಅಷ್ಟೆ ಅಲ್ಲ ಈಗಾಗ್ಲೆ ಕನ್ನಡದಲ್ಲಿ ಟಿಕೆಟ್ ಬುಕ್ಕಿಂಗ್ ಕೂಡ ಶುರುವಾಗಿದೆ. ಈಗ ಸ್ಯಾಂಡಲ್ವುಡ್ ಮಂದಿಗೆ ಹಬಿಬಿ ಯಾರುಯ ಅಂತ ಕೇಳಿದ್ರೆ ಹೆಡ್ಬುಷ್ ಸಿನಿಮಾದ ಪಾಯಲ್ ರಜಪುತ್ ಅಂತ ಹೇಳ್ತಾರೆ. ಆ ಮಟ್ಟಕ್ಕೆ ಪಾಯಲ್ರ ಹಬಿಬಿ ಸಾಂಗ್ ಹಿಟ್ ಆಗಿದೆ. ಈ ಹಾಡು ಈಗ ದುಬೈನಲ್ಲೂ ಸೆನ್ಸೇಷನ್ ಸೃಷ್ಟಿಸಿದ್ದು, ಅಲ್ಲಿನ ಬೆಲ್ಲಿ ಡಾನ್ಸರ್ಸ್ ಈ ಹಬಿಬಿ ಹಾಡಿಗೆ ಸೊಂಟ ಬಳುಕಿಸಿದ್ದಾರೆ. ಅಷ್ಟೆ ಅಲ್ಲ ದುಬೈ ಮರಗಳು ಗಾಡಿನಲ್ಲಿ ಜಯರಾಜ್ ಆ್ಯಂಡ್ ಗ್ಯಾಂಗ್ ರೌಂಡ್ಸ್ ಹೊಡೆದಿದ್ದು, ನಟ ನೀನಾಸಂ ಸತೀಶ್ ಈ ಡಾನ್ ಗ್ಯಾಂಗ್ಅನ್ನ ತಮ್ಮ ಕ್ಯಾಮೆರಾದಲ್ಲಿ ಸೆರೆ ಹಿಡಿದಿದ್ದಾರೆ. ಅಕ್ಟೋಬರ್ 21ಕ್ಕೆ ತೆರೆ ಮೇಲೆ ಬರೋ ಹೆಡ್ಬುಷ್ ಸಿನಿಮಾ ದೀಪಾವಳಿ ಹಬ್ಬವನ್ನ ಡಾನ್ ಜಯರಾಜ್ ಜೊತೆ ಆಚರಿಸೋ ಅವಕಾಶ ಕೊಡುತ್ತಿದೆ. ಯಾಕಂದ್ರೆ ಹೆಡ್ಬುಷ್ನ ಪಾತ್ರಗಳ ಪಟಾಕಿ ಈಗ ಮಾರ್ಕೆಟ್ಗೆ ಬಂದಿದೆ. ಡಾಲಿ ಬಾಂಬ್ ಆದ್ರೆ ಜಯರಾಜ್ ರಾಕೆಟ್ ಆಗಿದ್ದಾರೆ. ಹಬೀಬಿ ಫ್ಲವರ್ ಪಾಟ್ ಆಗಿದ್ರೆ ಗಂಗಾ ಮರ್ಚಿ ಪಟಾಕಿಯಾಗಿದ್ದಾರೆ. ಲಾಂಗು ಮಚ್ಚು. ಹಿಡಿದು ಆರ್ಭಟಿಸುತ್ತಿದ್ದ ಜಯರಾಜ್ ಗ್ಯಾಂಗ್ ಈಗ ಸಿಡಿ ಮದ್ದುಗಳಾಗಿ ಬದಲಾಗಿದೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕ್ಕಿಸಿ: Asianet Suvarna Entertainment