Shriram Bhat | Updated: Mar 26, 2025, 1:11 PM IST
ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಯಾವಾಗಲೂ ಪಾಲಿಟಿಕ್ಸ್ ನಿಂದ ದೂರನೇ ಇರ್ತಾರೆ. ಚಿತ್ರರಂಗದ ರಾಜಕೀಯದಿಂದಲೂ ಧ್ರುವ ದೂರವೇ ಇದ್ದಾರೆ. ತಾನಾಯ್ತು ತನ್ನ ಕೆಲಸ ಆಯ್ತು ಇರೋ ಈ ಸ್ಟಾರ್ ಇದೇ ಮೊದಲ ಬಾರಿ ಪಾಲಿಟಿಕ್ಸ್ನಲ್ಲಿ ಒಬ್ಬರಿಗೆ ಸಪೋರ್ಟ್ ಮಾಡಿದ್ದಾರೆ. DK ಸಪೋರ್ಟ್ ಗೆ KD ನಿಂತುಕೊಂಡಿದ್ದಾರೆ.
ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ತಾವಾಯ್ತು ತನ್ನ ಪಾಡಾಯ್ತು ಅಂತ ಇರೋ ನಟ. ಸದಾ ತನ್ನ ಸಿನಿಮಾ- ವರ್ಕೌಟ್ ಅಂತ ದೂರ ಇರೋ ಧ್ರುವ ಯಾವತ್ತಿಗೂ ರಾಜಕೀಯದಿಂದ ದೂರ ದೂರ. ಅದು ಸಿನಿರಂಗದ ಪಾಲಿಟಿಕ್ಸ್ ಆಗಲಿ, ರಾಜಕೀಯ ರಂಗದ ಅಸಲಿ ಪಾಲಿಟಿಕ್ಸ್ ಧ್ರುವ ಅದೆಲ್ಲದೆರಿಂದ ದೂರವೇ ಇರ್ತಾರೆ.
ಅದೆಷ್ಟೇ ದೊಡ್ಡ ಫ್ಯಾನ್ ಫಾಲೋವಿಂಗ್ ಇದ್ದರೂ ಌಕ್ಷನ್ ಪ್ರಿನ್ಸ್ ಧ್ರುವ ಯಾರ ಪ್ರಚಾರ ಕೂಡ ಮಾಡಿದವರಲ್ಲ. ಆದ್ರೆ ಫಾರ್ ಫಸ್ಟ್ ಟೈಂ ಧ್ರುವ ಒಬ್ಬ ರಾಜಕಾರಣಿ ಬೆಂಬಲಕ್ಕೆ ನಿಂತುಕೊಂಡಿದ್ದಾರೆ. ಅವರು ಮುಂದಿನ ಸಿಎಂ ಅಂತ ಹಾಡಿಹೊಗಳಿದ್ದಾರೆ. ಕೆಡಿ ಹೀಗೆ ಸಪೋರ್ಟ್ ಮಾಡಿರೋದು ಡಿಕೆ ಸಾಹೇಬ್ರಿಗೆ.
ಡಿಸಿಎಂ ಡಿ.ಕೆ.ಶಿವಕುಮಾರ್ ರಾಜ್ಯದ ಮುಂದಿನ ಸಿಎಂ ಆಗಬೇಕು ಅನ್ನೋದು ಅವರ ಕುಟುಂಬಸ್ಥರು, ಅಭಿಮಾನಿಗಳ ಕನಸು. ಸ್ವತಃ ಡಿಕೆಶಿ ಕೂಡ ಮುಖ್ಯಮಂತ್ರಿ ಕುರ್ಚಿಗೇರಲು ಎಲ್ಲಾ ಕಸರತ್ತು ನಡೆಸ್ತಿದ್ದಾರೆ. ಈ ಮಧ್ಯೆ ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಕೂಡ ಮುಂದಿನ ಸಿಎಂ ಡಿಕೆಶಿ ಅಂತ ಹೇಳುವ ಮೂಲಕ ಭಾರಿ ಕುತೂಹಲ ಮೂಡಿಸಿದ್ದಾರೆ.
ಡಿಸಿಎಂ ಡಿಕೆಶಿ ಮಾಲೀಕತ್ವದ ಗ್ಲೋಬಲ್ ಅಕಾಡೆಮಿ ಆಫ್ ಟೆಕ್ನಾಲಜಿ ಕಾರ್ಯಕ್ರಮದಲ್ಲಿ ಸ್ಪೆಷಲ್ ಗೆಸ್ಟ್ ಆಗಿ ಭಾಗಿಯಾಗಿದ್ದ ಧ್ರುವ ಸರ್ಜಾ.. ವೇದಿಕೆ ಉದ್ದೇಶಿಸಿ ಮಾತನಾಡಿ ಡಿಸಿಎಂ ಪುತ್ರಿ ಐಶ್ವರ್ಯರನ್ನ ಹಾಡಿ ಹೊಗಳಿದ್ದಾರೆ. ಜೊತೆಗೆ ಡಿಕೆಶಿ ಮುಂದಿನ ಸಿಎಂ ಅಂದಿದ್ದಾರೆ.
ಇನ್ನೂ ನೆರೆದಿದ್ದ ವಿಧ್ಯಾರ್ಥಿಗಳಿಗೆ ಒಂದೆರಡು ಬುದ್ದಿ ಮಾತು ಹೇಳಿರುವ ಧ್ರುವ, ತಮ್ಮ ಕೆಡಿ ಸಿನಿಮಾದ ಒಂದು ಮಾಸ್ ಟೈಲಾಗ್ನ ಹೇಳಿ ವಿಧ್ಯಾರ್ಥಿಗಳನ್ನ ರಂಜಿಸಿದ್ದಾರೆ.
ಒಟ್ಟಾರೆ ಇಷ್ಟು ದಿನ ರಾಜಕಾರಣಿಗಳು ಮತ್ತು ರಾಜಕಾರಣದಿಂದ ದೂರವಿರ್ತಾ ಇದ್ದ ಧ್ರುವ ಡಿ.ಕೆಶಿಗೆ ಸಪೋರ್ಟ್ ಮಾಡಿರೋದು ಎಲ್ಲರಿಗೂ ಅಚ್ಚರಿ ತಂದಿದೆ. KD DK ಗೆ ಸಪೋರ್ಟ್ ಮಾಡ್ತಿರೋದ್ರ ಹಿಂದೆ ಏನೋ ಮರ್ಮ ಇದೆ ಅಂತ ಎಲ್ಲರೂ ಯೋಚನೆಗೆ ಬಿದ್ದಿದ್ದಾರೆ. ಹೆಚ್ಚಿನ ಮಾಹಿತಿಗೆ ವಿಡಿಯೋ ನೋಡಿ..