Upendra: 'ಕಬ್ಜ' ಬಗ್ಗೆ ಸುಳ್ಳು ಸುದ್ದಿ ಹಬ್ಬಿಸಿದವರಿಗೆ ಚಂದ್ರು ಖಡಕ್ ವಾರ್ನಿಂಗ್!

Upendra: 'ಕಬ್ಜ' ಬಗ್ಗೆ ಸುಳ್ಳು ಸುದ್ದಿ ಹಬ್ಬಿಸಿದವರಿಗೆ ಚಂದ್ರು ಖಡಕ್ ವಾರ್ನಿಂಗ್!

Published : Apr 06, 2022, 02:48 PM IST

ಕಬ್ಜ ಸಿನಿಮಾದಿಂದ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಹೊರ ಬಂದಿದ್ದಾರೆ ಅಂತ ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಸುದ್ದಿ ಹಬ್ಬಿಸಿದ್ರು. ಆದ್ರೆ ಈ ಸುಳ್ಳುಗಾರ ಸೋಷಿಯಲ್ ಮೀಡಿಯಾ ಪ್ರಭುಗಳಿಗೆ ಆರ್ ಚಂದ್ರು ಖಡಕ್ ಆಗೆ ಉತ್ತರ ಕೊಟ್ಟಿದ್ದಾರೆ. 

ರಿಯಲ್ ಸ್ಟಾರ್ ಉಪೇಂದ್ರ (Upendra) ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ (Kiccha Sudeep) ಕಾಂಬಿನೇಷನ್‌ನ ಪ್ಯಾನ್ ಇಂಡಿಯಾ ಸಿನಿಮಾ 'ಕಬ್ಜ' (Kabza). 'ಕೆಜಿಎಫ್' ಸಿನಿಮಾ ಭಾರತೀಯ ಚಿತ್ರರಂಗದಲ್ಲಿ ಸೃಷ್ಟಿಸಿದ ಇತಿಹಾಸವನ್ನ ಪ್ರೇರಣೆಯಾಗಿ ಪಡೆದು ನಿರ್ದೇಶಕ ಆರ್ ಚಂದ್ರು (R Chandru) ಕಬ್ಜ ಸಿನಿಮಾವನ್ನ ಸಿದ್ಧಪಡಿಸುತ್ತಿದ್ದಾರೆ. ಇದೀಗ ಅಪ್ಪಟ ಕನ್ನಡಿಗರ ಈ ಪ್ಯಾನ್ ಇಂಡಿಯಾ ಕಬ್ಜ ಸಿನಿಮಾ ಬಗ್ಗೆ ಮತ್ತೊಂದು ಎಕ್ಸ್‌ಕ್ಲೂಸಿವ್ ಸುದ್ದಿ ಹೊರ ಬಂದಿದೆ. ಅದು ಕಬ್ಜ ಸಿನಿಮಾದ ಆಕ್ಷನ್ ಸೀನ್ ಹಾಗು ಕ್ಲೈಮ್ಯಾಕ್ಸ್ ಸೀನ್ ಚಿತ್ರೀಕರಣದ ಬಗ್ಗೆ. ಕಬ್ಜ ಶೂಟಿಂಗ್ ಎಲ್ಲಿವರೆಗೂ ಬಂದಿದೆ ಅಂತ ಕಾಯುತ್ತಿದ್ದ ಉಪ್ಪಿ ಹಾಗು ಕಿಚ್ಚನ ಅಭಿಮಾನಿಗಳಿಗೆ ಕಬ್ಜ ಟೀಂ ಸರ್ಪ್ರೈಸ್ ವಿಷಯವನ್ನ ಹಂಚಿಕೊಂಡಿದೆ. ಕಬ್ಜ ಸಿನಿಮಾದ ಶೂಟಿಂಗ್ ಈಗ ಕ್ಲೈಮ್ಯಾನ್ಸ್ ಹಂತಕ್ಕೆ ಬಂದಿದೆ.

ಕಬ್ಜ ಸಿನಿಮಾದ ಸ್ಯಾಂಪಲ್ಸ್‌ಗಳು ಭಾರತೀಯ ಚಿತ್ರರಂಗ ಸ್ಯಾಂಡಲ್‌ವುಡ್ ಅನ್ನ ಮತ್ತೊಮ್ಮೆ ತಿರುಗಿ ನೋಡುವಂತೆ ಮಾಡಿವೆ. ಹೀಗಾಗಿ ಬಹುಕೋಟಿ ವ್ಯಚ್ಚದಲ್ಲಿ ನಿರ್ದೇಶಕ ಆರ್ ಚಂದ್ರು ಕಬ್ಜವನ್ನ ಸಿದ್ಧಮಾಡುತ್ತಿದ್ದು, ಈ ಸಿನಿಮಾದ ಶೂಟಿಂಗ್ ಕ್ಲೈಮ್ಯಾಕ್ಸ್ ಹಂತಕ್ಕೆ ತಲುಪಿದೆ. ಸದ್ಯ ಮಂಗಳೂರಿನ ಹಾರ್ಬರ್‌ನಲ್ಲಿ ಏಳು ದಿನಗಳ ಕಾಲ ಭರ್ಜರಿ ಆಕ್ಷನ್ ದೃಶ್ಯವನ್ನ ಸೆರೆ ಹಿಡಿಯುತ್ತಿದ್ದು, ಮೇ ಮೊದಲ ವಾರ ಹೈದರಾಬಾದ್‌ನಲ್ಲಿ ಕ್ಲೈಮ್ಯಾಕ್ಸ್ ಚಿತ್ರೀಕರಣ ಮಾಡಲಿದೆ ಕಬ್ಜ ಟೀಂ. ಹೈದರಾಬಾದ್‌ನಲ್ಲಿ 10 ದಿನಗಳ ಕಾಲ ಶೂಟಿಂಗ್ ಮಾಡಿ ಚಿತ್ರೀಕರಣಕ್ಕೆ ಕುಂಬಳಕಾಯಿ ಒಡೆಯಲಿದ್ದಾರೆ ಆರ್ ಚಂದ್ರು, ಉಪೇಂದ್ರ, ಕಿಚ್ಚ. 

Kabza Movie: ಉಪ್ಪಿ ಅಡ್ಡಾಕ್ಕೆ ಎಂಟ್ರಿ ಕೊಟ್ಟ ನಟಿ ಶ್ರೀಯಾ ಶರಣ್‌

ಕಬ್ಜ ಸಿನಿಮಾದಿಂದ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಹೊರ ಬಂದಿದ್ದಾರೆ ಅಂತ ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಸುದ್ದಿ ಹಬ್ಬಿಸಿದ್ರು. ಆದ್ರೆ ಈ ಸುಳ್ಳುಗಾರ ಸೋಷಿಯಲ್ ಮೀಡಿಯಾ ಪ್ರಭುಗಳಿಗೆ ಆರ್ ಚಂದ್ರು ಖಡಕ್ ಆಗೆ ಉತ್ತರ ಕೊಟ್ಟಿದ್ದಾರೆ. ಕಬ್ಜ ಸಿನಿಮಾಗೆ ಉಪ್ಪಿ ಹೇಗೆ ಒಂದು ಶಕ್ತಿಯೋ ಅದೇ ತರ ಕಿಚ್ಚ ಸುದೀಪ್ ಕೂಡ ಒಂದು ಶಕ್ತಿ.. ಈ‌ ಸಿನಿಮಾದಲ್ಲಿ ಕಿಚ್ಚ ಸುದೀಪ್ ಅವರು ಭಾರ್ಗವಗ ಭಕ್ಷಿ ರೋಲ್ ಮಾಡುತ್ತಿದ್ದಾರೆ. ಇವರ ಪಾತ್ರದ ಶೂಟಿಂಗ್ ಕೂಡ ಆಗಿದೆ. ಸುಳ್ಳು ಸುದ್ದಿ ಹಬ್ಬಿಸಬೇಡಿ ಅಂದಿದ್ದಾರೆ ಚಂದ್ರು. ಸದ್ಯ ಕಬ್ಜ ಶೂಟಿಂಗ್ ಕ್ಲೈಮ್ಯಾಕ್ಸ್ ಹಂತಕ್ಕೆ ತಲುಪಿದ್ದು, ಆದಷ್ಟು ಬೇಗ ಸಿನಿಮಾ ಬಿಡುಗಡೆ ದಿನಾಂಕ ಕೂಡ ಅನೌನ್ಸ್ ಆಗಲಿದೆ.

ಸಿನಿಮಾ ಹಂಗಾಮಾ ವೀಡಿಯೋಗಳನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ಕಿಸಿ: https://kannada.asianetnews.com/movies

03:37ಇತ್ತ ಡೆವಿಲ್.. ಅತ್ತ ಟ್ರಯಲ್.. ದಾಸನಿಗೆ ಟ್ರಬಲ್: ಪವಿತ್ರಾ ಗೌಡಗೂ ಟಿವಿ ಕೊಡಿ, ವಕೀಲರ ಮನವಿ!
04:23'ತ್ರಿಮೂರ್ತಿ'ಗಳ ಹಾಲಿವುಡ್‌ ರೇಂಜ್ ಮೇಕಿಂಗ್ '45' ಸಿನಿಮಾ ಟ್ರೈಲರ್ ನೋಡಿದವ್ರು ಏನಂತಿದಾರೆ?!
05:37ಡೆವಿಲ್ ಸಿನಿಮಾದಲ್ಲಿ ದರ್ಶನ್ ಸಿಎಂ..! ಕಿಚ್ಚ ಸುದೀಪ್ ಹೇಳಿದ ಪಾಲಿಟಿಕ್ಸ್ ಸೀಕ್ರೆಟ್ ಏನು?
04:38Video: ನಟಿ ರಮ್ಯಾಗೆ ಸಂದರ್ಶನದಲ್ಲೇ ತಿರುಗೇಟು ಕೊಟ್ಟ Actor Darshan Wife Vijayalakshmi
04:51ಎಲ್ಲೆಲ್ಲೂ 'ಗಿಲ್ಲಿ ನಟ'ನದೇ ದರ್ಬಾರ್.. ಬಿಗ್ ಬಾಸ್‌ನಲ್ಲೂ ಬಿಗ್ ಸ್ಕ್ರೀನ್‌ನಲ್ಲೂ ಸಖತ್ ಸದ್ದು..!
05:21ರಾಜ್ಯಾದ್ಯಂತ Devil ಜಾತ್ರೆ.. ಮ್ಯಾಸಿವ್ ಓಪನಿಂಗ್: ದರ್ಶನ್ ನೋಡಿದ ಅಭಿಮಾನಿಗಳು ಹೇಳಿದ್ದೇನು?
04:44ನಾ ಬಂದೆ ಚಿನ್ನ: 'ದಿ ಡೆವಿಲ್' ಗ್ರ್ಯಾಂಡ್ ಎಂಟ್ರಿ.. ರಾಜ್ಯಾದ್ಯಂತ 400+ ಸ್ಕ್ರೀನ್‌ಗಳಲ್ಲಿ ದರ್ಶನ್ ಆಟ ಶುರು
05:38ದರ್ಶನ್ ಜೈಲಿನಲ್ಲಿ.. 'ದಿ ಡೆವಿಲ್‌' ಗೆಲ್ಲಿಸ್ತಾರಾ ಪ್ಯಾನ್ಸ್‌..? ಮತ್ತೊಂದು 'ಸಾರಥಿ' ಆಗುತ್ತಾ ಈ ಸಿನಿಮಾ?
24:18ರಿಷಬ್​​ ಶೆಟ್ಟಿ ಮಡಿಲಲ್ಲಿ ಮಲಗಿದ ದೈವ ನರ್ತಕ: ದೈವಾರಾಧಕರ ಆಕ್ರೋಶ, ಏನಿದು ಪಂಜುರ್ಲಿ?
03:42ಜೀ ಕನ್ನಡದಲ್ಲಿ ಆದಿ ಲಕ್ಷ್ಮೀ ಪುರಾಣ ಆರಂಭ.. ಡೆವಿಲ್​ ಜೊತೆ ಪಿವೋಟ್ ಚಿತ್ರ ರಿಲೀಸ್!
Read more