ಮಹಿಳಾ ಡೈರೆಕ್ಟರ್ ಜೊತೆ ರಾಕಿ ಸಿನಿಮಾ: ಯಶ್‌ಗೆ ನಿರ್ದೇಶನ ಮಾಡೋ ಡೈರೆಕ್ಟರ್ ಯಾರು ?

ಮಹಿಳಾ ಡೈರೆಕ್ಟರ್ ಜೊತೆ ರಾಕಿ ಸಿನಿಮಾ: ಯಶ್‌ಗೆ ನಿರ್ದೇಶನ ಮಾಡೋ ಡೈರೆಕ್ಟರ್ ಯಾರು ?

Published : Aug 23, 2023, 09:33 AM IST

ಕೆವಿಎನ್ ಪ್ರೊಡಕ್ಷನ್‌ನಲ್ಲಿ ರಾಕಿ 19ನೇ ಸಿನಿಮಾ..?
ಬಿಗ್ ಅನೌನ್ಸ್ಮೆಂಟ್ ಸೂಚನೆ ಕೊಟ್ಟ ಕೆವಿಎನ್..!
'ಯಶ್ 19' ಸಿನಿಮಾ ಅನೌನ್ಸ್‌ಗೆ ಭಾರಿ ತಯಾರಿ..?

ರಾಕಿಂಗ್ ಸ್ಟಾರ್ ಯಶ್ ಸಿನಿಮಾ ಅನೌನ್ಸ್‌ಗೆ ಕೌಂಟ್ ಡೌನ್ ಸ್ಟಾರ್ಟ್ ಆಗಿದೆ. ವರ ಮಹಾಲಕ್ಷ್ಮಿ ಹಬ್ಬ ಮುಗಿಯುತ್ತಿದ್ದಂತೆ ರಾಕಿ 19ನೇ ಅಡ್ವೆಂಚರ್ ಆರಂಭ ಆಗಲಿದೆಯಂತೆ. ಈ ಸುದ್ದಿ ಹೇಳಿದ್ದು ರಾಕಿಯ ಅತ್ಯಾಪ್ತ ಬಳಗ. ಇದೀಗ ಇದೇ ಯಶ್ ಆಪ್ತ ಮೂಲಕಗಳಿಂದ ಮತ್ತೊಂದು ಸುದ್ದಿ ಪಕ್ಕಾ ಆಗಿದೆ. ರಾಕಿ 19ನೇ ಸಿನಿಮಾಗೆ ನಿರ್ದೇಶನ ಮಾಡೋ ಡೈರೆಕ್ಟರ್ ಫೈನಲ್ ಆಗಿದ್ದಾರೆ. ರಾಕಿಂಗ್ ಸ್ಟಾರ್ ಯಶ್‌ಗೆ(Rocking star Yash) ಆ್ಯಕ್ಷನ್ ಕಟ್ ಹೇಳೋ ಡೈರೆಕ್ಟರ್ ಯಾರು ಅನ್ನೋ ಬಗ್ಗೆ ದೊಡ್ಡ ಕುತೂಹಲ ಇತ್ತು. ಯಾಕಂದ್ರೆ ರಾಕಿ ಕೆಜಿಎಫ್ 3 ಮಾಡ್ತಾರೆ, ಬಾಲಿವುಡ್‌ನ ಮಹಾ ಭಾರತದಲ್ಲಿ ನಟಿಸುತ್ತಾರೆ ಅಂತ ಸುದ್ದಿ ಆಗಿತ್ತು. ಅಷ್ಟೆ ಅಲ್ಲ ನಿರ್ದೇಶಕ ನರ್ತನ್, ತಮಿಳು ಸ್ಟಾರ್ ಡೈರೆಕ್ಟರ್ ಶಂಕರ್ ಕೂಡ ಯಶ್‌ಗೆ ಆ್ಯಕ್ಷನ್ ಕಟ್ ಹೇಳೋ ನಿರ್ದೇಶಕರ ಲಿಸ್ಟ್ ಸೇರಿದ್ರು. ಅಷ್ಟೇ ಅಲ್ಲ ಯಶ್ರ ಸಿನಿಮಾ ನಿರ್ದೇಶನಕ್ಕೆ ಫೀಮೇಲ್ ಡೈರೆಕ್ಟರ್ ಗೀತು ಮೋಹನ್ ದಾಸ್(Geetu Mohan Das) ಹೆಸ್ರು ಕೂಡ ಲೀಡಿಂಗ್‌ನಲ್ಲಿತ್ತು. ಆದ್ರೆ ಈಗ ಯಶ್ 19 (Yash 19) ಅನೌನ್ಸ್ ಹೊಸ್ತಿಲಲ್ಲಿ ಯಾರು ನಿರ್ದೇಶಕರು ಅನ್ನೋದು ಫಿಕ್ಸ್‌ ಆಗಿದೆ. ಅವರೇ ಫೀಮೇಲ್ ಸ್ಟಾರ್ ಡೈರೆಕ್ಟರ್ ಗೀತು ಮೋಹನ್ ದಾಸ್. ರಾಕಿಂಗ್ ಸ್ಟಾರ್ ಯಶ್ರ 19ನೇ ಸಿನಿಮಾಗೆ ನಿರ್ದೇಶನ ಮಾಡೋದು ಮಹಿಳಾ ನಿರ್ದೇಶಕ ಗೀತು ಮೋಹನ್ ದಾಸ್. ಇದರಲ್ಲಿ ನಿಮ್ಗೆ ಯಾವ್ದೇ ಡೌಡ್ ಬೇಡ. ಯಾಕಂದ್ರೆ ಈ ವಿಷಯವನ್ನ ರಿವೀಲ್ ಮಾಡಿದ್ದು ರಾಕಿಗೆ ದಿನನಿತ್ಯ ಸಿಗೋ ಆಪ್ತ ಸ್ನೇಹಿತರು. ಕೆಜಿಎಫ್‌ಗಿಂತ ಒಂದು ಹೆಜ್ಜೆ ಮುಂದೆ ಹೋಗಿ ಯಶ್19 ಸಿನಿಮಾ ಕಟ್ಟಿಕೊಡೋ ಜವಾಬ್ಧಾರಿಯನ್ನ ಗೀತು ಮೋಹನ್ ದಾನ್ ಹೆಗಲಿಗೇರಿಸಿಕೊಂಡಿದ್ದಾರಂತೆ. ಅದಕ್ಕಾಗಿ ಬೇಕಾದ ಎಲ್ಲಾ ಪೂರ್ವ ತಯಾರಿಯೂ ಆಗಿದ್ದು, ಹಾಲಿವುಡ್ನ ಫೇಮಸ್ ಟೆಕ್ನೀಷಿಯನ್ಸ್ ಈ ಸಿನಿಮಾದಲ್ಲಿ ವರ್ಕ್ಸ್ ಮಾಡ್ತಾರಂತೆ. 

ಇದನ್ನೂ ವೀಕ್ಷಿಸಿ:  Today Rashibhavishy: ಈ ದಿನ ಮೇಷ ರಾಶಿಯವರು ಮೋಸ ಹೋಗುವ ಸಾಧ್ಯತೆ..ಉಳಿದ ರಾಶಿಗಳ ಭವಿಷ್ಯ ಹೀಗಿದೆ

02:06ಬಾಕ್ಸಾಫೀಸ್​​ನಲ್ಲಿ ದಾಖಲೆ ಬರೆದ ಧುರಂಧರ್: ವೆಬ್​ ಸರಣಿ ನಿರ್ದೇಶನಕ್ಕೆ ಕೈ ಹಾಕಿದ ಪಿ.ಸಿ.ಶೇಖರ್
05:38ಒಂದೇ ಒಂದು ಹಾಡಿನಿಂದ ಟ್ರೆಂಡಿಂಗ್ ಟಾಪ್​ಸಿಂಗರ್​ಆಗ್ಬಿಟ್ರಾ ಸಾನ್ವಿ? ಅಪ್ಪನಂತೇ ಮಗಳು, ಸಂಗೀತದ ಬೆರಗು..!
03:37ಇತ್ತ ಡೆವಿಲ್.. ಅತ್ತ ಟ್ರಯಲ್.. ದಾಸನಿಗೆ ಟ್ರಬಲ್: ಪವಿತ್ರಾ ಗೌಡಗೂ ಟಿವಿ ಕೊಡಿ, ವಕೀಲರ ಮನವಿ!
04:23'ತ್ರಿಮೂರ್ತಿ'ಗಳ ಹಾಲಿವುಡ್‌ ರೇಂಜ್ ಮೇಕಿಂಗ್ '45' ಸಿನಿಮಾ ಟ್ರೈಲರ್ ನೋಡಿದವ್ರು ಏನಂತಿದಾರೆ?!
05:37ಡೆವಿಲ್ ಸಿನಿಮಾದಲ್ಲಿ ದರ್ಶನ್ ಸಿಎಂ..! ಕಿಚ್ಚ ಸುದೀಪ್ ಹೇಳಿದ ಪಾಲಿಟಿಕ್ಸ್ ಸೀಕ್ರೆಟ್ ಏನು?
04:38Video: ನಟಿ ರಮ್ಯಾಗೆ ಸಂದರ್ಶನದಲ್ಲೇ ತಿರುಗೇಟು ಕೊಟ್ಟ Actor Darshan Wife Vijayalakshmi
04:51ಎಲ್ಲೆಲ್ಲೂ 'ಗಿಲ್ಲಿ ನಟ'ನದೇ ದರ್ಬಾರ್.. ಬಿಗ್ ಬಾಸ್‌ನಲ್ಲೂ ಬಿಗ್ ಸ್ಕ್ರೀನ್‌ನಲ್ಲೂ ಸಖತ್ ಸದ್ದು..!
05:21ರಾಜ್ಯಾದ್ಯಂತ Devil ಜಾತ್ರೆ.. ಮ್ಯಾಸಿವ್ ಓಪನಿಂಗ್: ದರ್ಶನ್ ನೋಡಿದ ಅಭಿಮಾನಿಗಳು ಹೇಳಿದ್ದೇನು?
04:44ನಾ ಬಂದೆ ಚಿನ್ನ: 'ದಿ ಡೆವಿಲ್' ಗ್ರ್ಯಾಂಡ್ ಎಂಟ್ರಿ.. ರಾಜ್ಯಾದ್ಯಂತ 400+ ಸ್ಕ್ರೀನ್‌ಗಳಲ್ಲಿ ದರ್ಶನ್ ಆಟ ಶುರು
05:38ದರ್ಶನ್ ಜೈಲಿನಲ್ಲಿ.. 'ದಿ ಡೆವಿಲ್‌' ಗೆಲ್ಲಿಸ್ತಾರಾ ಪ್ಯಾನ್ಸ್‌..? ಮತ್ತೊಂದು 'ಸಾರಥಿ' ಆಗುತ್ತಾ ಈ ಸಿನಿಮಾ?