Dhruva Sarja : ಧ್ರುವ ಸರ್ಜಾ ಕೊಡ್ತಾರೆ ಡಬಲ್ ಧಮಕಾ! ಒಂದೇ ವರ್ಷದಲ್ಲಿ ರಿಲೀಸ್ ಆಗ್ತಿದೆ ಎರಡು ಸಿನಿಮಾ!

Dhruva Sarja : ಧ್ರುವ ಸರ್ಜಾ ಕೊಡ್ತಾರೆ ಡಬಲ್ ಧಮಕಾ! ಒಂದೇ ವರ್ಷದಲ್ಲಿ ರಿಲೀಸ್ ಆಗ್ತಿದೆ ಎರಡು ಸಿನಿಮಾ!

Published : Apr 08, 2024, 10:42 AM IST

ಸ್ಯಾಂಡಲ್‌ವುಡ್ ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾರನ್ನ ತೆರೆ ಮೇಲೆ ಕಣ್ತುಂಬಿಕೊಂಡು ಬರೋಬ್ಬರಿ ಮೂರು ವರ್ಷಗಳಾಗೋಗಿದೆ. ಅದ್ಯಾವಾಗ ನಮ್ ಹೀರೋನ ಬೆಳ್ಳಿ ತೆರೆ ಮೇಲೆ ನೋಡ್ತಿವೋ ಅಂತಾ ಅವ್ರ ಫ್ಯಾನ್ಸ್ ಕಾತರಿಸ್ತಿದ್ದಾರೆ. ಆದ್ರೀಗ ನಾವ್ ಹೇಳೋ ವಿಷ್ಯಾನ ಕೇಳಿದ್ರೆ ಅವ್ರ ಅಭಿಮಾನಿಗಳು ಥ್ರಿಲ್ ಆಗೋದು ಗ್ಯಾರೆಂಟಿ.

ಆ್ಯಕ್ಷನ್ ಪ್ರಿನ್ಸ್ ಧ್ರುವ ಬಣ್ಣದ ಲೋಕಕ್ಕೆ ಕಾಲಿಟ್ಟು ಬರೋಬ್ಬರಿ 12 ವರ್ಷಗಳಾಗಿದೆ. ಆದ್ರೆ ಸಿನಿಮಾ ಅಂತಾ ಬಂದಾಗ ಅಲ್ಲಿ ಸಿಗೋದು ಜಸ್ಟ್ ನಾಲ್ಕೇ ನಾಲ್ಕು ಚಿತ್ರಗಳು ಮಾತ್ರ. ಅದ್ರಲ್ಲೂ ಕಳೆದ ಮೂರು ವರ್ಷಗಳಿಂದ ಧ್ರುವ ಸರ್ಜಾ(Druva Sarja), ತೆರೆ ಮೇಲೆ ಕಾಣಿಸಿಕೊಂಡಿಲ್ಲ. ಹೌದು ಪೊಗರು ಚಿತ್ರ ಬಂದಿದ್ದು 2021ರಲ್ಲಿ. ಹಾಗಾಗಿ ಆ್ಯಕ್ಷನ್ ಪ್ರಿನ್ಸ್ ಥಿಯೇಟರ್‌ನಲ್ಲಿ ಕಣ್ತುಂಬಿಕೊಳ್ಳಲು ಅವರ ಅಭಿಮಾನಿಗಳು(Fans) ಕಾತರಿಸ್ತಿದ್ದಾರೆ. ಆದ್ರೀಗ ಆ ಎಲ್ಲಾ ವೈಯ್ಟಿಂಗ್‌ಗೂ ಫುಲ್ ಸ್ಟಾಪ್ ಇಡೋ ಸಮಯ ಬಂದಾಗಿದೆ. ಧ್ರುವಾ ಸರ್ಜಾ ಈ ವರ್ಷ ಎರಡೆರಡು ಚಿತ್ರಗಳ ಮೂಲಕ  ಮನರಂಜಿಸಲು ರೆಡಿಯಾಗಿದ್ದಾರೆ. ಧ್ರುವ ಸರ್ಜಾ ಒಂದ್ ಸಿನಿಮಾ ಮಾಡೋಕೆ ಮೂರು ವರ್ಷ ಸಮಯ ತೆಗೆದುಕೊಳ್ಳುತ್ತಾರೆ ಅನ್ನೋ ಆರೋಪ ಅಂತು ಇದ್ದೇ ಇದೆ. ಅದು ನಿಜ ಕೂಡ ಧ್ರುವ ಮೂರು ವರ್ಷಕ್ಕೆ ಒಂದ್ ಸಿನಿಮಾ ಕೊಡಿತ್ತಾರೆ. ಆದ್ರೆ ಈ ಬಾರಿ ಒಂದೇ ವರ್ಷದಲ್ಲಿ ಎರಡು ಸಿನಿಮಾ ಟ್ರೀಟ್ ಕೊಡುತ್ತಿದ್ದಾರೆ. ಅದೇ ಮಾರ್ಟಿನ್(Martin) ಹಾಗೂ ಕೆಡಿ ಸಿನಿಮಾಗಳು(KD Movie). ಲೋಕಸಭೆ ಎಲೆಕ್ಷನ್ ಮುಗಿಯುತ್ತಿದ್ದಂತೆ ಧ್ರುವ ಮಾರ್ಟಿನ್ ಅವತಾರ ತಾಳಿ ತೆರೆ ಮೇಲೆ ಬರಲಿದ್ದಾರೆ. ಮಾರ್ಟಿನ್, ಭಾರತೀಯ ಚಿತ್ರರಂಗದ ಮೋಸ್ಟ್ ಎಕ್ಸ್‌ಪೆಕ್ಟೆಡ್ ಸಿನಿಮಾ. ಎಪಿ ಅರ್ಜುನ್ ನಿರ್ದೇಶನ, ಉದಯ್ ಕೆ ಮೇಹ್ತಾ ನಿರ್ಮಾಣದ ಮಾರ್ಟಿನ್ ಮೊದ ಮೊದಲು ಸೆಟ್ಟೇರಿದ್ದು ಜಸ್ಟ್ ಕನ್ನಡ ಸಿನಿಮಾ ಅಷ್ಟೇ ಆಗಿ. ಆದ್ರೇ ಚಿತ್ರದ ಕಥೆ ಯೂನಿವರ್ಸಲ್ ಆಗಿರೋದ್ರಿಂದ ಚಿತ್ರತಂಡ ಪ್ಯಾನ್ ಇಂಡಿಯಾ ಸಿನಿಮಾ ಮಾಡೋ ಪ್ಲ್ಯಾನ್ ಮಾಡ್ತು. ಆದ್ದರಿಂದಲೇ ಸಿನಿಮಾ ಶೂಟಿಂಗ್ ಸೇರಿದಂತೆ ಎಲ್ಲಾ ಸ್ಕೇಲ್ ದೊಡ್ಡದಾಗಿದೆ.

ಇದನ್ನೂ ವೀಕ್ಷಿಸಿ:  Yash Toxic Movie: ಟಾಕ್ಸಿಕ್ ಶೂಟಿಂಗ್ ಬಗ್ಗೆ ಪಕ್ಕಾ ಸುದ್ದಿ ಕೊಟ್ಟ ಯಶ್..! ನಮ್ಮೂರೇ ನಮಗೆ ಮಲೂ ಎಂದ ರಾಕಿಂಗ್ ಸ್ಟಾರ್..!

04:59ಟಾಕ್ಸಿಕ್ ಹಸಿಬಿಸಿ ದೃಶ್ಯದ ವಿರುದ್ದ ಕಂಪ್ಲೇಂಟ್; ಈ ವಿವಾದದ ಬಗ್ಗೆ ಯಶ್ ಏನಂತಾರೆ..?
03:36Golden Star Ganesh ಬಗ್ಗೆ ಇಂಥ ಚಿಂತಾಜನಕ ಸುದ್ದಿ ಹರಡಿದ್ಯಾಕೆ? ಯಾಕೆ ಹೀಗಾಯ್ತು?
05:51ದರ್ಶನ್ ಪತ್ನಿ ವಿಜಯಲಕ್ಷ್ಮೀ ವಿರುದ್ಧ ಅಶ್ಲೀಲ ಕಾಮೆಂಟ್: ಇಬ್ಬರ ಅರೆಸ್ಟ್, ಫ್ಯಾನ್ಸ್ ವಾರ್‌ಗೆ ಬ್ರೇಕ್
02:06ಬಾಕ್ಸಾಫೀಸ್​​ನಲ್ಲಿ ದಾಖಲೆ ಬರೆದ ಧುರಂಧರ್: ವೆಬ್​ ಸರಣಿ ನಿರ್ದೇಶನಕ್ಕೆ ಕೈ ಹಾಕಿದ ಪಿ.ಸಿ.ಶೇಖರ್
05:38ಒಂದೇ ಒಂದು ಹಾಡಿನಿಂದ ಟ್ರೆಂಡಿಂಗ್ ಟಾಪ್​ಸಿಂಗರ್​ಆಗ್ಬಿಟ್ರಾ ಸಾನ್ವಿ? ಅಪ್ಪನಂತೇ ಮಗಳು, ಸಂಗೀತದ ಬೆರಗು..!
03:37ಇತ್ತ ಡೆವಿಲ್.. ಅತ್ತ ಟ್ರಯಲ್.. ದಾಸನಿಗೆ ಟ್ರಬಲ್: ಪವಿತ್ರಾ ಗೌಡಗೂ ಟಿವಿ ಕೊಡಿ, ವಕೀಲರ ಮನವಿ!
04:23'ತ್ರಿಮೂರ್ತಿ'ಗಳ ಹಾಲಿವುಡ್‌ ರೇಂಜ್ ಮೇಕಿಂಗ್ '45' ಸಿನಿಮಾ ಟ್ರೈಲರ್ ನೋಡಿದವ್ರು ಏನಂತಿದಾರೆ?!
05:37ಡೆವಿಲ್ ಸಿನಿಮಾದಲ್ಲಿ ದರ್ಶನ್ ಸಿಎಂ..! ಕಿಚ್ಚ ಸುದೀಪ್ ಹೇಳಿದ ಪಾಲಿಟಿಕ್ಸ್ ಸೀಕ್ರೆಟ್ ಏನು?
04:38Video: ನಟಿ ರಮ್ಯಾಗೆ ಸಂದರ್ಶನದಲ್ಲೇ ತಿರುಗೇಟು ಕೊಟ್ಟ Actor Darshan Wife Vijayalakshmi
04:51ಎಲ್ಲೆಲ್ಲೂ 'ಗಿಲ್ಲಿ ನಟ'ನದೇ ದರ್ಬಾರ್.. ಬಿಗ್ ಬಾಸ್‌ನಲ್ಲೂ ಬಿಗ್ ಸ್ಕ್ರೀನ್‌ನಲ್ಲೂ ಸಖತ್ ಸದ್ದು..!
Read more