Sep 15, 2023, 12:21 PM IST
ಮೊನ್ನೆ ಮೊನ್ನೆಯಷ್ಟೆ ಧ್ರುವ ಸರ್ಜಾ(Dhruva Sarja) ಅಣ್ಣನ ಸಮಾಧಿ ಪಕ್ಕದಲ್ಲೇ ಮಲಗಿದ್ರು. ಈ ವಿಡಿಯೋ ವೈರಲ್ ಆಗಿತ್ತು. ಅಷ್ಟೇ ಯಾಕೆ, ತಮ್ಮ ಹೆಂಡತಿಯ ಸೀಮಂತವನ್ನೂ ಚಿರು ಸರ್ಜಾ(Chiru Sarja) ಅವರ ಸಮಾಧಿಯ ಎದುರೇ ಮಾಡಿದ್ರು. ಧ್ರುವ ಮಗಳಿಗೆ ಲಾಲಿ ಹಾಡಿದ್ದು ಕೂಡ ಇಲ್ಲೇ. ಇದೀಗ 3 ವರ್ಷಗಳ ಬಳಿಕ ಹುಟ್ಟು ಹಬ್ಬ ಮಾಡಿಕೊಳ್ತಿರೋ ಧ್ರುವ ಚಿರು ಸಮಾಧಿ ಎದುರೇ ಅಭಿಮಾನಿಗಳನ್ನ ಭೇಟಿ ಮಾಡಲಿದ್ದಾರೆ ಅನ್ನೋ ನಿರೀಕ್ಷೆ ಎಲ್ಲರಲ್ಲೂ ಇತ್ತು. ಅದ್ಧೂರಿ ಹುಡುಗ ಫ್ಯಾನ್ಸ್(Fans) ಭೇಟಿಗೆ ಎಲ್ಲಾ ತಯಾರಿ ಆಗ್ತಿದೆ. ತ್ಯಾಗರಾಜ್ ನಗರದ ಕೆಆರ್ ರಸ್ತೆ ಪಕ್ಕದಲ್ಲಿರೋ ಧ್ರುವನ ಮನೆಯಲ್ಲೇ ಈ ಭಾರಿಯೂ ಫ್ಯಾನ್ಸ್ ಮೀಟ್ ಆಗ್ತಿದೆ. ಆದ್ರೆ ಈ ಭಾರಿ ತನ್ನ ಫ್ಯಾನ್ಸ್‌ಗೆ ಭಜರ್ರಿ ಹುಡುಗ ಚಿಕ್ಕದೊಂದು ಬೇಡಿಕೆ ಇಟ್ಟಿದ್ದಾರೆ. ಸ್ಟಾರ್‌ಗಳ ಬರ್ತ್ಡೇ ದಿನ ಫ್ಯಾನ್ಸ್ ಹೂವು, ಕೇಕ್, ಪಟಾಕ್ಷಿ ತರೋದು ಸಾಮಾನ್ಯ. ಆದ್ರೆ ಹೂವು ಹಾರ ಕೇಕ್ ಯಾವುದಕ್ಕೂ ದುಂದುವೆಚ್ಚ ಮಾಡಬೇಡಿ ಅಂತ ಫ್ಯಾನ್ಸ್‌ಗೆ ಕೇಳಿಕೊಂಡಿದ್ದಾರೆ. ಬದಲಿಗೆ ಶಾಲಾ ಮಕ್ಕಳಿಗೆ ಉಪಯುಕ್ತವಾಗೋ ಪುಸ್ತಕ, ಪೆನ್ನು ಬ್ಯಾಗ್‌ಗಳನ್ನು ಗಿಫ್ಟ್ ಆಗಿ ಕೊಡಿ ಅದನ್ನ ಬಡ ವಿಧ್ಯಾರ್ಥಿಗಳಿಗೆ ತಲುಪಿಸೋ ಜವಾಬ್ಧಾರಿ ನನ್ನದು ಅಂತ ತನ್ನ ಡೈ ಹಾರ್ಡ್ ಫ್ಯಾನ್ಸ್ಗೆ ಕರೆ ಕೊಟ್ಟಿದ್ದಾರೆ.
ಇದನ್ನೂ ವೀಕ್ಷಿಸಿ: ದಳಪತಿ 'ಲಿಯೋ'ಗೆ ರಜನಿ ಫ್ಯಾನ್ಸ್ ಟಕ್ಕರ್..? ಶಿವಣ್ಣನ 'ಘೋಸ್ಟ್' ಬೆನ್ನಿಗೆ ನಿಂತ ತಲೈವಾ ಫ್ಯಾನ್ಸ್!