ನಟ ದರ್ಶನ್‌​​​ಗೆ ಭೂತದಂತೆ ಕಾಡುತ್ತಿದೆ 'ಡೆವಿಲ್': ಚಿತ್ರತಂಡದಿಂದ ಶೂಟಿಂಗ್ ನಿಲ್ಲಿಸಲು ಚಿಂತನೆ..?

Jun 16, 2024, 12:37 PM IST

ಆರೋಪಿ ದರ್ಶನ್​ ಅರೆಸ್ಟ್​ ಬಳಿಕ ಹೆಜ್ಜೆ ಹೆಜ್ಜೆಗೂ ಸಂಕಷ್ಟ ಎದುರಾಗಿದೆ. ದರ್ಶನ್​​(Actor Darshan) ನಟನೆಯ ಡೆವಿಲ್​ ಚಿತ್ರಕ್ಕೂ( Devil movie) ಸಂಕಷ್ಟ ಬಂದೋದಗಿದ್ದು, ಚಿತ್ರತಂಡದಿಂದ ಶೂಟಿಂಗ್(Shooting) ನಿಲ್ಲಿಸಲು ಚಿಂತನೆ ನಡೆಸಲಾಗಿದೆಯಂತೆ. ಡೆವಿಲ್ ಸಿನಿಮಾದ ಶೂಟಿಂಗ್‌ ಶುರುವಾದಲಿಂದ ವಿವಾದದಲ್ಲೇ ದರ್ಶನ್ ಇದ್ದಾರಂತೆ. ಡೆವಿಲ್ ಮೊದಲ ಹಂತದಲ್ಲಿ ಕೈ ಪೆಟ್ಟು ಮಾಡಿಕೊಂಡು ಆಪರೇಷನ್ ಮಾಡಿಸಿಕೊಂಡಿದ್ದರು. 2ನೇ ಶೆಡ್ಯೂಲ್ ವೇಳೆ ನಾಯಿಯಿಂದ ಸ್ಟೇಷನ್ ಮೆಟ್ಟಿಲನ್ನು ದರ್ಶನ್ ಹತ್ತಿ ಬಂದಿದ್ದರು. 3ನೇ ಶೆಡ್ಯೂಲ್ ಶುರುವಾದ ಎರಡೇ ದಿನಕ್ಕೆ ಕೊಲೆ ಕೇಸ್‌ನಲ್ಲಿ ಅರೆಸ್ಟ್‌ ಆಗಿದ್ದಾರೆ. ಸದ್ಯ ನಟ ದರ್ಶನ್‌ಗೆ ಡೆವಿಲ್‌ ಸಿನಿಮಾ ಭೂತದಂತೆ ಕಾಡುತ್ತಿದೆ. ಚಿತ್ರದ ಟೈಟಲ್ ಚೇಂಜ್ ಮಾಡಲು ಸಹ ಚಿತ್ರತಂಡ ಚಿಂತಿಸುತ್ತಿದೆಯಂತೆ.

ಇದನ್ನೂ ವೀಕ್ಷಿಸಿ:  ಈ ಸರ್ಕಾರ ಕೇವಲ ಹೆಣ್ಣು ಮಕ್ಕಳ ಸರ್ಕಾರದಂತೆ ವರ್ತಿಸುತ್ತಿದೆ: ತೈಲ ಬೆಲೆ ಏರಿಕೆಗೆ ವಾಹನ ಸವಾರರ ಆಕ್ರೋಶ