ನಿರ್ಮಾಪಕ ಅನ್ನದಾನ ಅನ್ನೋದು ಅಣ್ಣಾವ್ರ ಕಾಲಕ್ಕೆ ಮುಗಿದು ಹೋದಂತಿದೆ. ಈಗ ಹೀರೋಗಳೇ ನಿರ್ಮಾಪರಿಗೆ ಅನ್ನದಾತರು ಅನ್ನೋ ಹಾಗೆ ವರ್ತಿಸುತ್ತಿದ್ದಾರೆ. ಈ ಮಾತನ್ನ ನಾವ್ ಹೇಳ್ತಿಲ್ಲ. ನಿರ್ಮಾಪಕ ಉಮಾಪತಿ ಬಗ್ಗೆ ನಟ ದರ್ಶನ್ ಆಡಿರೋ ಮಾತುಗಳನ್ನ ಕೇಳಿ ಸ್ಯಾಂಡಲ್‌ವುಡ್ ಮಂದಿಯೇ ಹೇಳುತ್ತಿರೋ ಮಾತು.
ಉಮಾಪತಿ ದರ್ಶನ್ ಮಧ್ಯೆ ವಾರ್ ಹೇಗೆಲ್ಲಾ ನಡೆಯುತ್ತಿದೆ ಅನ್ನೋ ಅಪ್‌ಡೇಟ್ ನಿಮ್ಮ ಮುಂದೆ ಇಟ್ಟಿದ್ದೇವೆ. ಇದೀಗ ಇವರಿಬ್ಬರ ಟಾಕ್ ವಾರ್ ಇಲ್ಲಿಗೆ ನಿಂತಿಲ್ಲ. ಇಬ್ಬರ ಮಧ್ಯೆ ಅಭಿಮಾನಿಗಳು ಎಂಟ್ರಿ ಕೊಟ್ಟಿದ್ದಾರೆ. ನಿರ್ಮಾಪಕ ಉಮಾಪತಿ(Producer Umapati) ಯಾರಿಗೂ ಬಗ್ಗೋ ಜಗ್ಗೋ ಪ್ರೊಡ್ಯೂಸರ್ ಅಲ್ಲ. ಹೀರೋಗಳ ಮೇಲೆ ಹಣ ಹಾಕಿ ಸಿನಿಮಾ ಮಾಡೋ ನಿರ್ಮಾಪಕರಾರು ಹೀರೋಗಳಿಗೆ ಹೆದರಿ ಬೆದರಿ ಇರೋ ಅವಶ್ಯಕತೆಯೂ ಇಲ್ಲ. ಯಾಕಂದ್ರೆ ಪ್ರೊಡ್ಯೂಸರ್ ಆದವನು ನಿಜಕ್ಕೂ ಅನ್ನದಾತನೆ. ಒಂದ್ ಸಿನಿಮಾ ಬಂದ್ರೆ ನೂರಾರು ಜನರಿಗೆ ಕೆಲಸ ಸಿಗುತ್ತೆ. ಹತ್ತಾರು ಕುಟುಂಬಗಳು ಊಟ ಮಾಡ್ತಾರೆ. ಆದ್ರೆ ಅದ್ಯಾವು ಕೌಂಟ್ಗೆ ಬರೋಲ್ಲ. ಹೀಗಾಗಿ ನಟ ದರ್ಶನ್(Actor Darshan) ಹಾಗು ನಿರ್ಮಾಪಕ ಉಮಾಪತಿ ಮಧ್ಯೆ ಫೈಟ್ ಶುರುವಾಗಿದ್ದು, ಈಗ ಈ ವಾರ್‌ಗೆ ನಟ ದರ್ಶನ್ ಅಭಿಮಾನಿಗಳು(Fans) ಡೈರೆಕ್ಟ್ ಆಗೆ ಎಂಟ್ರಿ ಕೊಡೋಕೆ ರೆಡಿಯಾಗಿದ್ರು. ನಟ ದರ್ಶನ್ ರ 1000 ಜನ ಅಭಿಮಾನಗಳು ಉಮಾಪತಿ ಕ್ಷೇತ್ರ ಬೊಮ್ಮನ ಹಳ್ಳಿಯಲ್ಲಿ ಬೈಕ್ ರಾಲಿ ಮ್ಯಾಡಿ ಉಮಾಪತಿ ವಿರುದ್ಧ ಘೋಷಣೆ ಕೂಗಲು ಸಿದ್ಧರಾಗಿದ್ರು. ಈ ರ‍್ಯಾಲಿಯಲ್ಲಿ(Bike Ralley) ನಟ ದರ್ಶನ್ ಕೂಡ ಭಾಗಿ ಆಗ್ತಾರೆ ಅಂತ ಹೇಳಲಾಗಿತ್ತು. ಆದ್ರೆ ಸೇರಿಗೆ ವಾರಾ ಸೇರು ಅನ್ನೋ ಹಾಗೆ ಉಮಾಪತಿ ಅವರ 10 ಸಾವಿರ ಜನ ಬೆಂಬಲಿಗರು ದರ್ಶನ್ ವಿರುದ್ಧ ಬೈಕ್ ರಾಲಿಗೆ ಸಿದ್ಧರಾಗಿದ್ರು. ಆದ್ರೆ ಈ ಗಲಾಟೆ ಬೇರೆಯದ್ದೇ ರೂಪ ಪಡೆಯುತ್ತೆ ಅಂತ ದರ್ಶನ್ ಫ್ಯಾನ್ಸ್ ಮಾಡೋಕೆ ಹೊರಟಿದ್ದ ರ‍್ಯಾಲಿಗೆ ಬೊಮ್ಮನಹಳ್ಳಿ ಪೊಲೀಸರು ಅನುಮಪತಿ ಕೊಟ್ಟಿಲ್ಲ. ಹೀಗಾಗಿ ದರ್ಶನ್ ಬೈಕ್ ರ‍್ಯಾಲಿ ಕ್ಯಾನ್ಸಲ್ ಆಗಿದೆ.
ಇದನ್ನೂ ವೀಕ್ಷಿಸಿ: Today Horoscope: ಈ ದಿನ ಶುಭಕಾರ್ಯಗಳಿಗೆ ಉತ್ತಮವಾಗಿದ್ದು, ಮುತ್ತೈದೆಯರನ್ನ ಮನೆಗೆ ಕರೆದು ಮಂಗಲ ದ್ರವ್ಯಗಳ ದಾನ ಮಾಡಿ..