ದಸರಾ ಹಬ್ಬಕ್ಕೆ ದರ್ಶನ್ ಅಭಿಮಾನಿಗಳಿಗೆ ಧಮಾಕ: ನಾಡಹಬ್ಬಕ್ಕೆ ತೆರೆ ಮೇಲೆ ಬರುತ್ತಂತೆ 'ಡೆವಿಲ್' ಚಿತ್ರ

ದಸರಾ ಹಬ್ಬಕ್ಕೆ ದರ್ಶನ್ ಅಭಿಮಾನಿಗಳಿಗೆ ಧಮಾಕ: ನಾಡಹಬ್ಬಕ್ಕೆ ತೆರೆ ಮೇಲೆ ಬರುತ್ತಂತೆ 'ಡೆವಿಲ್' ಚಿತ್ರ

Published : May 09, 2024, 11:21 AM IST

ಕಾಟೇರದಲ್ಲಿ ಪಕ್ಕಾ ಹಳ್ಳಿ ಹೈದನಾಗಿ ಲುಂಗಿ ಉಟ್ಟು ಕುಲುಮೆಯಲ್ಲಿ ಮಚ್ಚು ತಟ್ಟುವ ರೋಲ್ ಮಾಡಿದ್ರು. ಈ ಪಾತ್ರ ನೋಡಿ ಫ್ಯಾನ್ಸ್ ಥ್ರಿಲ್ ಆಗಿದ್ರು. ಈಗ ಅದರ ತದ್ವಿರುದ್ಧ ಆದ್ರೆ ಡೆವಿಲ್ ಸಿನಿಮಾದಲ್ಲಿ ಸ್ಟೈಲೀಶ್​​ ಲುಕ್​​ನಲ್ಲಿ ಯಶ್​​ ಕಾಣಿಸಿಕೊಂಡಿದ್ದಾರೆ. 

ನಟ ದರ್ಶನ್ ಕೈ ಮುರಿದುಕೊಂಡಿದ್ದಾರೆ. ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ಸರ್ಜರಿ ಮಾಡಿಕೊಂಡು ಬಂದಿರೋ ನಟ ಎರಡು ತಿಂಗಳು ರೆಸ್ಟ್ ಮಾಡಬೇಕಿ. ದರ್ಶನ್​ ಕೈಗೆ ಸರ್ಜರಿ ಆಗಿದ್ದನ್ನ ನೋಡಿ ಅವರ ಅಭಿಮಾನಿ ಬಳಗದಲ್ಲಿ ಆತಂಕ ಇತ್ತು. ಬೇಗ ಗುಣ ಮುಖವಾಗಿ ಅಂತ ಹಾರೈಸಿದ್ರು. ಈ ಮಧ್ಯೆ ದರ್ಶನ್ ನಟನೆಯ ಡೆವಿಲ್ ಸಿನಿಮಾ ಬಗ್ಗೆ ಸಿಗುತ್ತಿದ್ದ ಅಪ್ಡೇಟ್​ ಕೂಡ ನಿಂತು ಹೋಗಿತ್ತು. ಈಗ ದರ್ಶನ್ ಫ್ಯಾನ್ಸ್​​ಗೆ ಧಮಾಕೇ ದಾರ್​ ಸುದ್ದಿಯೊಂದು ಸಿಗುತ್ತಿದೆ. ಅದು ಡೆವಿಲ್ ಸಿನಿಮಾದ ಬಗ್ಗೆ. ಡೆವಿಲ್​, ಇದು ದರ್ಶನ್ ಫ್ಯಾನ್ಸ್ ಮತ್ತೊಮ್ಮೆ ಥಿಯೇಟರ್​ನಲ್ಲಿ ಎಂಜಾಯ್ ಮಾಡೋಕೆ ಕಾಯುತ್ತಿರೋ ಸಿನಿಮಾ. ಯಾಕಂದ್ರೆ ಕಾಟೇರದಲ್ಲಿ ಪಕ್ಕಾ ಹಳ್ಳಿ ಹೈದನಾಗಿ ಲುಂಗಿ ಉಟ್ಟು ಕುಲುಮೆಯಲ್ಲಿ ಮಚ್ಚು ತಟ್ಟುವ ರೋಲ್ ಮಾಡಿದ್ರು. ಈ ಪಾತ್ರ ನೋಡಿ ಫ್ಯಾನ್ಸ್ ಥ್ರಿಲ್ ಆಗಿದ್ರು. ಈಗ ಅದರ ತದ್ವಿರುದ್ಧ ಆದ್ರೆ ಡೆವಿಲ್ ಸಿನಿಮಾದಲ್ಲಿ ಸ್ಟೈಲೀಶ್​​ ಲುಕ್​​ನಲ್ಲಿ ಯಶ್​​ ಕಾಣಿಸಿಕೊಂಡಿದ್ದಾರೆ. 

ಈ ಸಿನಿಮಾ ದಸರಾ ಹಬ್ಬಕ್ಕೆ ತೆರೆ ಮೇಲೆ ತರಲು ಡೆವಿಲ್​ ಟೀಂ ಪ್ಲಾನ್ ಮಾಡುತ್ತಿದ್ದಾರೆ. ಕಾಟೇರ ಸಿನಿಮಾ ಬಿಡುಗಡೆ ಆಗುತ್ತಿದ್ದಂತೆ ನೆಕ್ಟ್ಸ್​ ಡೇನ ಡೆವಿಲ್ ಸಿನಿಮಾ ಶೂಟಿಂಗ್ ಸೆಟ್ಟಿಗೆ ಬಂದಿದ್ರು ನಟ ದರ್ಶನ್. ಈ ಸಿನಿಮಾದ ಶೂಟಿಂಗ್ ಎಷ್ಟು ಸ್ಪೀಡ್ ಆಗಿ ನಡೆಯುತ್ತಿತ್ತು ಅಂದ್ರೆ ಒಂದೇ ತಿಂಗಳಲ್ಲಿ ಚಿತ್ರದ ಅರ್ದದಷ್ಟು ಶೂಟಿಂಗ್ ಆಗಿತ್ತು. ಆದ್ರೆ ಈ ಸಿನಿಮಾ ಶೂಟಿಂಗ್ ಮಾಡುವಾಗ್ಲೆ ದರ್ಶನ್ ಕೈಗೆ ಸರ್ಜರಿ ಮಾಡಿಸಿಕೊಂಡ್ರು ಇದ್ರಿಂದ ಡೆವಿಲ್ ಚಿತ್ರೀಕರಣ  ನಿಂತು ಹೋಯ್ತು. ಆಗಸ್ಟ್​ನಲ್ಲಿ ಡೆವಿಲ್ ರಿಲೀಸ್ ಮಾಡೋದಕ್ಕೆ ಪ್ಲಾನ್ ಮಾಡಿಕೊಂಡಿದ್ದೆಲ್ಲಾ ಫ್ಲಾಫ್​ ಆಯ್ತು. ಈಗ ಡೆವಿಲ್ ರಿಲೀಸ್​ ಬಗ್ಗೆ ಅಪ್ಡೇಟ್ ಒಂದು ಬಂದಿದೆ. ದಸರಾ ಹಬ್ಬಕ್ಕೆ ದರ್ಶನ್ ಫ್ಯಾನ್ಸ್ ಧಮಾಕ ಮಾಡ್ತಾರೆ. ನಾಡ ಹಬ್ಬದಲ್ಲಿ ಡೆವಿಲ್ ಸಿನಿಮಾ ರಿಲೀಸ್ ಆಗಲಿದೆಯಂತೆ. 

ಡೆವಿಲ್​ ಸಾರಥಿ ಮಿಲನಾ ಪ್ರಕಾಶ್​ ಅಲಿಯಾಸ್ ಪ್ರಕಾಶ್ ವೀರ್ ಡೆವಿಲ್​​​ ಶೂಟಿಂಗ್​ಅನ್ನ  ಶೇಕಡ 70 ರಷ್ಟು ಮುಗಿಸಿದ್ದಾರೆ. ಇನ್ನು ಉಳಿದಿರೋದು 30ರಷ್ಟ ಮಾತ್ರ. ಆದ್ರೆ ಅಷ್ಟರಲ್ಲೇ ದರ್ಶನ್ ಕೈಗೆ ಸರ್ಜರಿ ಮಾಡಿಸಿಕೊಂಡಿದ್ದಾರೆ. ಇದ್ರಿಂದ ಶೂಟಿಂಗ್ ಎರಡು ತಿಂಗಳು ನಿಂತು ಹೋಗಿದೆ. ಡೆವಿಲ್​ ಸಿನಿಮಾವನ್ನ ಆಗಸ್ಟ್​​ಗೆ ರಿಲೀಸ್ ಮಾಡಬೇಕು ಅಂತ ಟಾರ್ಗೆಟ್ ಇಟ್ಕೊಂಡು ವರ್ಕ್ ಮಾಡುತ್ತಿದ್ರು. ಈಗ ಶೂಟಿಂಗ್ ಮುಂದಕ್ಕೆ ಹೋಗಿರೋದ್ರಿಂದ ಅಕ್ಟೋಬರ್​​​ಗೆ ಬರೋ ದಸರಾ ಹಬ್ಬಕ್ಕೆ ಸಿನಿಮಾ ರಿಲೀಸ್ ಮಾಡಲು ಕಣ್ಣಿಟ್ಟು ಕೂತಿದ್ದಾರಂತೆ. ನಟ ದರ್ಶನ್ ಕಮರ್ಷಿಯಲ್ ಸಿನಿಮಾಗಳ ಶೂಟಿಂಗ್​ಗೆ ಟೈಂ ಕೊಡೋದು 55 ದಿನ ಮಾತ್ರ. ಅಷ್ಟರೊಳಗೆ ಎಲ್ಲಾ ಚಿತ್ರೀಕರಣ ಮುಗಿಸೋ ಜವಾವ್ಧಾರಿ ನಿರ್ದೇಶಕನದ್ದು. ಆದ್ರೆ ಡೆವಿಲ್ ವಿಷಯದಲ್ಲಿ ಹಾಗಾಗಿಲ್ಲ. ದರ್ಶನ್​ ಕೈಗೆ ಪೆಟ್ಟಾಗಿದ್ರಿಂದ ಶೂಟಿಂಗ್ ಮುಂದಕ್ಕೆ ಹೋಗ್ತಿದೆ. ಹೀಗಾಗಿ ಡೆವಿನ್ ನೋಡೋದಕ್ಕೆ ದರ್ಶನ್ ಅಭಿಮಾನಿ ಬಳಗ ಇನ್ನೂ ಆರು ತಿಂಗಳು ಕಾಯಲೇಬೇಕು.

02:06ಬಾಕ್ಸಾಫೀಸ್​​ನಲ್ಲಿ ದಾಖಲೆ ಬರೆದ ಧುರಂಧರ್: ವೆಬ್​ ಸರಣಿ ನಿರ್ದೇಶನಕ್ಕೆ ಕೈ ಹಾಕಿದ ಪಿ.ಸಿ.ಶೇಖರ್
05:38ಒಂದೇ ಒಂದು ಹಾಡಿನಿಂದ ಟ್ರೆಂಡಿಂಗ್ ಟಾಪ್​ಸಿಂಗರ್​ಆಗ್ಬಿಟ್ರಾ ಸಾನ್ವಿ? ಅಪ್ಪನಂತೇ ಮಗಳು, ಸಂಗೀತದ ಬೆರಗು..!
03:37ಇತ್ತ ಡೆವಿಲ್.. ಅತ್ತ ಟ್ರಯಲ್.. ದಾಸನಿಗೆ ಟ್ರಬಲ್: ಪವಿತ್ರಾ ಗೌಡಗೂ ಟಿವಿ ಕೊಡಿ, ವಕೀಲರ ಮನವಿ!
04:23'ತ್ರಿಮೂರ್ತಿ'ಗಳ ಹಾಲಿವುಡ್‌ ರೇಂಜ್ ಮೇಕಿಂಗ್ '45' ಸಿನಿಮಾ ಟ್ರೈಲರ್ ನೋಡಿದವ್ರು ಏನಂತಿದಾರೆ?!
05:37ಡೆವಿಲ್ ಸಿನಿಮಾದಲ್ಲಿ ದರ್ಶನ್ ಸಿಎಂ..! ಕಿಚ್ಚ ಸುದೀಪ್ ಹೇಳಿದ ಪಾಲಿಟಿಕ್ಸ್ ಸೀಕ್ರೆಟ್ ಏನು?
04:38Video: ನಟಿ ರಮ್ಯಾಗೆ ಸಂದರ್ಶನದಲ್ಲೇ ತಿರುಗೇಟು ಕೊಟ್ಟ Actor Darshan Wife Vijayalakshmi
04:51ಎಲ್ಲೆಲ್ಲೂ 'ಗಿಲ್ಲಿ ನಟ'ನದೇ ದರ್ಬಾರ್.. ಬಿಗ್ ಬಾಸ್‌ನಲ್ಲೂ ಬಿಗ್ ಸ್ಕ್ರೀನ್‌ನಲ್ಲೂ ಸಖತ್ ಸದ್ದು..!
05:21ರಾಜ್ಯಾದ್ಯಂತ Devil ಜಾತ್ರೆ.. ಮ್ಯಾಸಿವ್ ಓಪನಿಂಗ್: ದರ್ಶನ್ ನೋಡಿದ ಅಭಿಮಾನಿಗಳು ಹೇಳಿದ್ದೇನು?
04:44ನಾ ಬಂದೆ ಚಿನ್ನ: 'ದಿ ಡೆವಿಲ್' ಗ್ರ್ಯಾಂಡ್ ಎಂಟ್ರಿ.. ರಾಜ್ಯಾದ್ಯಂತ 400+ ಸ್ಕ್ರೀನ್‌ಗಳಲ್ಲಿ ದರ್ಶನ್ ಆಟ ಶುರು
05:38ದರ್ಶನ್ ಜೈಲಿನಲ್ಲಿ.. 'ದಿ ಡೆವಿಲ್‌' ಗೆಲ್ಲಿಸ್ತಾರಾ ಪ್ಯಾನ್ಸ್‌..? ಮತ್ತೊಂದು 'ಸಾರಥಿ' ಆಗುತ್ತಾ ಈ ಸಿನಿಮಾ?
Read more